ಗುಳೇದಗುಡ್ಡದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಪೂರ್ವಭಾವಿ ಸಭೆ

ಗುಳೇದಗುಡ್ಡ

ಸ್ಥಳೀಯ ಬಸವೇಶ್ವರ ನಗರದ ರಾಚಣ್ಣ ಕೆರೂರ ಅವರ ಮನೆಯಲ್ಲಿ ‘ಬಸವ ಸಂಸ್ಕೃತಿ ಅಭಿಯಾನ’ದ ತಾಲ್ಲೂಕು ಮಟ್ಟದ ಪೂರ್ವಭಾವಿ ಸಭೆ ನಡೆಯಿತು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷರಾದ ಅಶೋಕ ಬರಗುಂಡಿ ಅವರು, ‘ಬಸವ ಸಂಸ್ಕೃತಿ ಅಭಿಯಾನ’ದ ಕಾರ್ಯಕ್ರಮಗಳು ಬಾಗಲಕೋಟೆ ಜಿಲ್ಲಾ ಕೇಂದ್ರದಲ್ಲಿ ಸೆಪ್ಟೆಂಬರ 10 ರಂದು ಜರುಗಲಿದೆ. ಅಭಿಯಾನದ ರೂಪರೇಷಗಳನ್ನು ಸವಿಸ್ತಾರವಾಗಿ ಪ್ರಸ್ತುತಪಡಿಸುತ್ತ, ಈ ಅಭಿಯಾನಕ್ಕೆ ಬಸವ ಸಂಘಟನೆಗಳಾದ ಜಾಗತಿಕ ಲಿಂಗಾಯತ ಮಹಾಸಭೆ, ಬಸವ ಕೇಂದ್ರಗಳು, ಅಕ್ಕನ ಬಳಗ, ಶರಣ ಸಾಹಿತ್ಯ ಪರಿಷತ್ತು ಇತ್ಯಾದಿ ಬಸವಪರ ಸಂಘಟನೆಗಳು ಸಂಪೂರ್ಣ ಸಹಕಾರಿಯಾಗಿ ಅಭಿಯಾನದ ಕಾರ್ಯಕ್ರಮವನ್ನು ಯಶ್ವಿಸಿಗೊಳಿಸಲು ಶ್ರಮಿಸಬೇಕೆಂದರು.

ಇದೇ ಸಂದರ್ಭದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಹುಟ್ಟಿನ ಉದ್ದೇಶದ ಬಗ್ಗೆ ತಿಳಿಸುತ್ತಾ, ಈ ಅಭಿಯಾನದ ಭಾಗವಾಗಿ ಬಸವ ಸಂಘಟನೆಗಳು ಏನು ಕೆಲಸ ಮಾಡಬೇಕು, ಅದರ ರೂಪರೇಷಗಳ ಬಗ್ಗೆ ತಾಲೂಕಿನ ಜಾ.ಲಿಂ.ಮ. ಮತ್ತು ಬಸವ ಕೇಂದ್ರದ ಸರ್ವ ಸದಸ್ಯರುಗಳಿಂದ ಅನೇಕ ವಿಷಯಗಳ ಬಗ್ಗೆ ಚರ್ಚಿಸಿ ಅಭಿಪ್ರಾಯ ಪಡೆದುಕೊಂಡರು.

ಗುಳೇದಗುಡ್ಡ ತಾಲೂಕಾ ಘಟಕ ಜಾ.ಲಿಂ.ಮ. ಮತ್ತು ಬಸವ ಕೇಂದ್ರಗಳು ತಾಲೂಕಿನಾದ್ಯಂತ ಬರುವ ಲಿಂಗಾಯತ ಮಠಾಧಿಪತಿಗಳನ್ನು ಮತ್ತು ಎಲ್ಲ ಕಾಯಕ ಬಾಂಧವರನ್ನು ಸಂಪರ್ಕಿಸಿ, ಅಭಿಯಾನದ ಕುರಿತು ಉದ್ದೇಶಗಳನ್ನು ಮನವರಿಕೆ ಮಾಡಿಕೊಡುವುದು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಅಭಿಯಾನದ ಕಾರ್ಯಕ್ರಮದಲ್ಲಿ ಜನರು ಭಾಗವಹಿಸುವಂತಾಗಬೇಕೆಂದು ಅರಿಕೆ ಮಾಡಿಕೊಂಡರು.

ತಾಲೂಕಿನಲ್ಲಿ ಬರುವ ಗ್ರಾಮಗಳಲ್ಲಿ ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ, ಲಿಂಗಾಯತರ ಅಸ್ಮಿತೆಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಅಭಿಯಾನಕ್ಕೆ ಲಿಂಗಾಯತ ಧರ್ಮದ ಧರ್ಮಗುರು ಬಸವಣ್ಣ, ಧರ್ಮಗ್ರಂಥ ವಚನಗಳು ಮತ್ತು ಧರ್ಮದ ಅರಿವಿನ ಕುರುಹಾದ ಇಷ್ಟಲಿಂಗವನ್ನು ಅಪ್ಪಿ, ಒಪ್ಪಿಕೊಂಡು ಯಾರಾದರೂ ಸರಿ ಈ ಅಭಿಯಾನದಲ್ಲಿ ಭಾಗವಹಿಸಬಹುದೆಂದು ಬರಗುಂಡಿಯವರು ಕರೆ ನೀಡಿದರು.

ತಾಲೂಕಿನ ಜಾ.ಲಿಂ.ಮ. ಮತ್ತು ಬಸವ ಕೇಂದ್ರಗಳು ಅತ್ಯಂತ ಸಂತೋಷದಿಂದ ತಮ್ಮ ಕಾರ್ಯಕ್ರಮ ಅಜೆಂಡ ಸಿದ್ಧಪಡಿಸಿಕೊಂಡು, ವಿವರಿಸಿ ಜಿಲ್ಲಾಧ್ಯಕ್ಷರಿಗೆ ಸ್ಪೂರ್ತಿ ತುಂಬಿದರು.

ಗುಳೇದಗುಡ್ಡ ತಾಲ್ಲೂಕ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಬಸವ ಕೇಂದ್ರಗಳು ಜಂಟಿಯಾಗಿ ಈ ಸಭೆ ಸಂಘಟಿಸಿದ್ದವು.

ಪ್ರಾರಂಭದಲ್ಲಿ ಶರಣೆ ಜಯಶ್ರೀ ಬ. ಬರಗುಂಡಿ ಹಾಗೂ ಸಂಗಡಿಗರಿಂದ ಸಾಮೂಹಿಕವಾಗಿ ಪ್ರಾರ್ಥನೆ ಮಾಡಿಸಿದರು. ಈ ಸಭೆಯಲ್ಲಿ ತಾಲೂಕಾ ಘಟಕದ ಅಧ್ಯಕ್ಷರಾದ ಶರಣ ರಾಚಣ್ಣ ಕೆರೂರ ಅವರು ಅಭಿಯಾನದ ಕುರಿತು ಮಾತನಾಡಿ, ಕೊನೆಯಲ್ಲಿ ಶರಣು ಸಮರ್ಪಿಸಿದರು.

ಸಭೆಯಲ್ಲಿ ವಿಜಯಾನಂದ ಆಧ್ಯಾತ್ಮಿಕ ಕೇಂದ್ರ ಚಿಂತಕರಾಗಿರುವ ಪ್ರೊ. ಎಸ್. ಆಯ್. ರಾಜನಾಳ, ಪ್ರೊ. ಚಂದ್ರಶೇಖರ ಹೆಗಡಿ, ತಾಲೂಕಾ ಘಟಕ ಉಪಾಧ್ಯಕ್ಷರಾದ ಮೋಹನ ಕರನಂದಿ, ಪ್ರೇಮಾನಂದ ಬೀಳಗಿ, ಶ್ರೀದೇವಿ ಶೇಖಾ, ವಿರುಪಾಕ್ಷಪ್ಪ ಅರುಟಗಿ, ಕಾರ್ಯದರ್ಶಿಗಳಾದ ಪ್ರೊ. ಶ್ರೀಕಾಂತ ಗಡೇದ, ನಿರ್ಮಲಾ ಸಂ. ಬರಗುಂಡಿ, ಖಜಾಂಚಿ ಮುಪ್ಪಣ್ಣಪ್ಪ ಶೀಲವಂತ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಸಂಜಯ ಬರಗುಂಡಿ, ಕವಿತಾ ವಿ. ಬಂಕಾಪುರ, ಮಹಾಲಿಂಗಪ್ಪ ಕರನಂದಿ, ಅನ್ನಪೂರ್ಣ ರಾ. ಕೆರೂರ, ಮಹಿಳಾ ಘಟಕದ ಉಪಾಧ್ಯಕ್ಷರಾದ ಕವಿತಾ ಬರಗುಂಡಿ, ಕಾರ್ಯದರ್ಶಿ ಸುರೇಖಾ ಗೆದ್ದಲಮರಿ ಹಾಗೂ ಬಸವಕೇಂದ್ರದ ಸದಸ್ಯರಾದ ಚಂದ್ರಶೇಖರ ತೆಗ್ಗಿ, ಬಸವರಾಜ ಗೆದ್ದಲಮರಿ, ಮಂಜುನಾಥ ನಾಯನೇಗಲಿ, ರಾಜಶೇಖರ ಶೆಟ್ಟರ, ವಚನಾ ಶೇಖಾ, ಮುಂತಾದವರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/CPORn7EbNfEBlG1MCXUuM

Share This Article
Leave a comment

Leave a Reply

Your email address will not be published. Required fields are marked *