ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕು ಮಡಹಳ್ಳಿಯಲ್ಲಿ ಶ್ರಾವಣ ಮಾಸದ ಕಾರ್ಯಕ್ರಮ ಯಶಸ್ವಿಯಾಗಿ ಬುಧುವಾರ ನಡೆಯಿತು.
ಪೂಜ್ಯ ಶ್ರೀ ಬಸವಯೋಗಿ ಪ್ರಭು ಸ್ವಾಮೀಜಿಗಳು ಬಸವಧರ್ಮ ಪ್ರಚಾರದಲ್ಲಿ ಮಠಗಳ ಪಾತ್ರದ ಬಗ್ಗೆ ಮತ್ತು ಗರ್ಭಸಂಸ್ಕಾರದಿಂದ ಹಿಡಿದು ಶವಸಂಸ್ಕಾರದವರೆಗೆ ನಿಜಾಜರಣೆಗಳ ಮೂಲಕ ಆಚರಿಸಬೇಕೆಂದು ವಿವರವಾಗಿ ತಿಳಿಸಿದರು . ಲಿಂಗಾಯತರು ತಮ್ಮದಲ್ಲದ ಆಚರಣೆಗಳನ್ನು ಆಚರಿಸುವುದು ತಪ್ಪು, ಇದನ್ನು ಬದಲಾಯಿಸುವಲ್ಲಿ ಮಠಗಳು ಪಾತ್ರ ಮುಖ್ಯವೆಂದು ಹೇಳಿದರು.
ಸಾಹಿತಿ, ಸಂಶೋಧಕ ಕೊಚ್ಚಿನ್ ಕಾರಬಾರಿ ಅವರು ಬಸವಧರ್ಮ ಆಶಯಗಳು ಬಗ್ಗೆ ಸುಧೀರ್ಘವಾಗಿ ಮಾತನಾಡಿ ಲಿಂಗಾಯತ ಸಮುದಾಯ ನಿಜಾಚರಣೆಗಳನ್ನು ಪಾಲಿಸುವುದರ ಮೂಲಕ ತಮ್ಮತನ ಉಳಿಸಿಕೊಳ್ಳಬೇಕೆಂದು ಹೇಳಿದರು .
ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದ ಮಹೇಂದ್ರರವರನ್ನು ಸನ್ಮಾನಿಸಲಾಯಿತು. 5 ಜನ ರೈತರನ್ನು ಹಸಿರು ಶಾಲು ಹೊದಿಸುವುದರ ಮೂಲಕ ಸನ್ಮಾನಿಸಲಾಯಿತು .
ಶಾಲಾ ಮಕ್ಕಳು ಮತ್ತು ಮಡಹಳ್ಳಿಯ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗಳಿಸಿದರು.