ಕೊಪ್ಪಳ:
ಇಲ್ಲಿನ ಗುರುಬಸವ ಮಹಾಮನೆಯಲ್ಲಿ ಹೊಸಪೇಟೆಯ ಇಷ್ಟಲಿಂಗ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಡಾ. ಅಜಯಕುಮಾರ ತಾಂಡೂರ ಇವರಿಂದ ಇಷ್ಟಲಿಂಗ ಮತ್ತು ಶಿವಯೋಗದ ವೈಜ್ಞಾನಿಕ ಅಂಶಗಳನ್ನು ತಿಳಿಸುವ ಕಾರ್ಯಕ್ರಮ ನಡೆಯಿತು.
ಶಿವಯೋಗದಿಂದ ಮಾನವರ ದೇಹಕ್ಕಾಗುವ ಸದುಪಯೋಗಗಳ ಬಗ್ಗೆ ಮನಮುಟ್ಟುವಂತೆ ವಿವರಿಸಿದ ಅವರು, ವೈಜ್ಞಾನಿಕ ಸಾಕ್ಷಿಗಳ ಸಮೇತವಾಗಿ ವ್ಯಕ್ತಿತ್ವ ವಿಕಸನಕ್ಕೆ ಇಷ್ಟಲಿಂಗ ಶಿವಯೋಗದ ಮಹತ್ವ ತಿಳಿಸಿದರು. ಪೂರಕವಾದ ಸಾಕ್ಷಾ ಚಿತ್ರಗಳ ಸಮೇತ ಸುಮಾರು ಮೂರು ತಾಸುಗಳ ತಮ್ಮ ಅನುಭಾವವನ್ನು ವಿವರಿಸಿದರು.
ಸಭೆಯ ಅಧ್ಯಕ್ಷತೆಯನ್ನು ಬಸನಗೌಡ ಪಾಟೀಲ ಕೊಪ್ಪಳ ಮತ್ತು ಅತಿಥಿಗಳಾಗಿ ಪರಪ್ಪ ಗಂದಿಹೊಸಹಳ್ಳಿ, ಶಶಿಕಲಾ ನಂದ್ಯಾ ಟ್ರಸ್ಟ್ ನ ಅಧ್ಯಕ್ಷರಾದ ಗುಡದಪ್ಪ ಹಡಪದ ಭಾಗವಹಿಸಿದ್ದರು
ಕಾರ್ಯಕ್ರಮದ ಸ್ವಾಗತವನ್ನು ರೋಹಿತ್ ಇಂಗಳದಾಳ, ನಿರೂಪಣೆಯನ್ನು ಸಚಿನ್, ವಚನ ಗಾಯನವನ್ನು ರಂಜಿತ ನಂದ್ಯಾಳ, ಶರಣು ಸಮರ್ಪಣೆಯನ್ನು ಜಯ ವಣಿಗೇರಿ ಮಾಡಿದರು.
ಅಮೃತ ಪಾಟೀಲ ಮತ್ತು ಅರ್ಪಿತ ಪಾಟೀಲ ಇವರಿಂದ ವಚನ ನೃತ್ಯ ನಡೆಯಿತು.