ಗದಗ
ಅನುಭವ ಮಂಟಪವೆಂದರೆ ಜ್ಞಾಪಕಕ್ಕೆ ಬರುವದು ಜಗತ್ತಿನ ಮೊಟ್ಟಮೊದಲ ಪಾರ್ಲಿಮೆಂಟ್ ಎಂಬುದು, ನಂತರ ಅಲ್ಲಮಪ್ರಭುಗಳು. ಲಿಂಗಾಯತರ ಪರಮೋಚ್ಛ ಪೀಠದ ಶೂನ್ಯಸಿಂಹಾಸನಾಧೀಶ್ವರಾಗಿ, ವಿರಾಗಿಗಳಾದ ಅವರು ಸಿದ್ಧರಾಮೇಶ್ವರರು, ಗೋರಕನಾಥ, ಗೊಗ್ಗಯ್ಯ, ಮುಕ್ತಾಯಕ್ತರಂಥ ಇನ್ನೂ ಅನೇಕ ಶರಣ, ಶರಣೆಯರಿಗೆ ಅರಿವನ್ನು ನೀಡಿ, ಅನುಭವ ಮಂಟಪದದತ್ತ ನಡೆಯುವಂತೆ ಮಾಡಿದರು.
ಮಹಾಯೋಗಿಗಳಾದ ವ್ಯೋಮಕಾಯ ಅಲ್ಲಮಪ್ರಭುಗಳೆಂದೇ ಹೆಸರಾದವರು. ಅನುಭವ ಮಂಟಪ ಶೂನ್ಯಪೀಠದ ಪ್ರಥಮ ಅಧ್ಯಕ್ಷರಾಗಿ ಅಲ್ಲಿದ್ದ ಸರ್ವ ಶರಣ, ಶರಣೆಯರಿಗೆ ಸರಿಯಾದ ಮಾರ್ಗದರ್ಶನ ನೀಡಿ, ಬಸವಧರ್ಮಕ್ಕೆ ಹೊಸ ಹೊಳಹು ಕೊಟ್ಟವರು ಪ್ರಭುದೇವರಾಗಿದ್ದಾರೆ. ಅವರ ವಚನಗಳು ಕಠಿಣವೆನಸಿದರೂ ವಚನ ಸಾಹಿತ್ಯಕ್ಕೆ ಮುಕುಟಮಣಿ ಇದ್ದಂತೆ ಎಂದು ಚಿಂತಕ ಪ್ರೊ. ಸಿದ್ಧಲಿಂಗೇಶ ಸಜ್ಜನಶೆಟ್ರ ಹೇಳಿದರು.

ಅವರು ಬಸವದಳದ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಬೆಟಗೇರಿಯ ಎಂ.ಸಿ. ಐಲಿ, ಅವರ ಮನೆಯಲ್ಲಿ ನಡೆದ ಬಸವಣ್ಣನವರ ೮೫೮ನೇ ಸ್ಮರಣೆಯಂಗವಾಗಿ ‘ವಚನ ಶ್ರಾವಣ-೨೦೨೫’ರ ೮ನೇ ದಿನದ ಕಾರ್ಯಕ್ರಮದಲ್ಲಿ, “ಕೀರ್ತಿವಾರ್ತೆಗೆ ಮಾಡುವಾತ ಭಕ್ತನಲ್ಲ, ಪರರ ಬೋಧಿಸಿಕೊಂಡುಂಬಾತ ಜಂಗಮನಲ್ಲ, ….. ವಚನವನ್ನು ಸಜ್ಜನಶೆಟ್ರ ಮಾರ್ಮಿಕವಾಗಿ ನಿರ್ವಚನಗೈದರು.

ಚಿಂತಕರಾದ ಅಶೋಕ ಬರಗುಂಡಿ, ಎಸ್. ಎ. ಮುಗದರ ಅವರು ಇದೇ ವಚನದ ಕುರಿತು ಸಮಯೋಚಿತವಾಗಿ ಮಾತನಾಡಿದರು. ಶೇಖರ ಕವಳಿಕಾಯಿ ಉಪಸ್ಥಿತರಿದ್ದರು.
ಆರಂಭದಲ್ಲಿ ಬಸವದಳದ ಶರಣೆಯರಿಂದ ವಚನ ಪ್ರಾರ್ಥನೆ ನಡೆಯಿತು. ಟ್ರಸ್ಟ್ ಕಮೀಟಿಯ ಅಧ್ಯಕ್ಷರಾದ ಎಂ.ಸಿ. ಐಲಿ ಸ್ವಾಗತಿಸಿದರು. ನಿರೂಪಣೆ ಪ್ರಕಾಶ ಅಸುಂಡಿ ಮಾಡಿದರು. ಶರಣು ಸಮರ್ಪಣೆ ವಿ.ಕೆ.ಕರೇಗೌಡ್ರ ಮಾಡಿದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.