ನಾಗರ ಪಂಚಮಿ ನಾಡಿಗೆ ದೊಡ್ಡದು ನಾರಿಯರೆಲ್ಲಾ ನಲಿದಾರು ಎಂಬ ಹಾಡು ನಾಗರ ಪಂಚಮಿ ಹಬ್ಬದ ಮಹತ್ವ ಹೇಳುತ್ತದೆ.
ಗಂಡನ ಮನೆಗೆ ಹೋಗಿದ್ದ ಮಹಿಳೆಯರು ತವರಿಗೆ ಬಂದು ಹಳೆಯ ಗೆಳತಿಯರೊಡನೆ ಉಯ್ಯಾಲೆ ಆಡುವ ಆ ಸಂಭ್ರಮ ಕಂಡ ಕವಿಯ ಮನಸ್ಸು ಮೇಲಿನ ಸಾಲುಗಳನ್ನು ಹೇಳಿಸಿರಬಹುದು.
ನಾಗರ ಪಂಚಮಿ ದಿನ ಇಷ್ಟೇ ಇರುವುದಿಲ್ಲ ಈ ಹಬ್ಬದ ಪ್ರಮುಖ ಆಚರಣೆ ಅಂದರೆ ಕಲ್ಲಿನ ಹಾವಿಗೆ ಹಾಲು ಹಾಕಿ ವಿವಿಧ ರೀತಿಯ ಉಂಡೆ ಚಿಗುಳಿ ತಂಬಿಟ್ಟು ನೈವೇದ್ಯ ಮಾಡುವುದು.
ಎಷ್ಟೋ ಜನರಿಗೆ ಗೊತ್ತಿಲ್ಲ ಅಲ್ಲಿ ಅಪವ್ಯಯ ಆಗುವ ಅಹಾರ ಪದಾರ್ಥಗಳೆಲ್ಲಾ ಅತ್ಯಂತ ಪೌಷ್ಠಿಕ ಅಹಾರ ಎಂಬುದು.
ಹಾಲು ತುಪ್ಪ ಬಹಳ ಮಹತ್ವದ ಪೌಷ್ಠಿಕ ಅಹಾರ
ವಿವಿಧ ಉಂಡೆಗಳೆಲ್ಲವೂ ಸಹ ಪೌಷ್ಠಿಕ ಅಹಾರ
ಈ ದೇಶದಲ್ಲಿ ಪ್ರಸ್ತುತ ಸಂದರ್ಭದಲ್ಲಿ ಅತೀ ದೊಡ್ಡ ಸಮಸ್ಯೆಗಳಲ್ಲಿ ಅಪೌಷ್ಟಿಕತೆ ಸಹ ಒಂದು
ಕಲ್ಲಿನ ಹಾವಿಗೆ ಹಾಕುವ ಹಾಲು ನೆಲ ಸೇರುತ್ತದೆ
ಅಲ್ಲಿ ನೈವೇದ್ಯ ಮಾಡುವ ಪೌಷ್ಠಿಕ ಅಹಾರ ಗಲೀಜು ಆಗಿ ಅಪವ್ಯಯ ಅಗುತ್ತೆ
ಹಸುವಿನ ಕರು ಕುರಿ ಮರಿ ನಾಯಿಯ ಮರಿ ಮನುಷ್ಯ ಸೇರಿದಂತೆ ಸಸ್ತನಿಗಳು ಹಾಲು ಕುಡಿಯುತ್ತವೆ
ಕೋಳಿ ಕಾಗೆ ಹಾವು ಸೇರಿದಂತೆ ಮೊಟ್ಟೆಯಿಂದ ಹೊರ ಬರುವ ಜೀವಿಗಳು ಹಾಲು ಕುಡಿಯುವುದಿಲ್ಲ ಹಾಗೆಯೇ
ನಿಜವಾದ ಹಾವು ಸಹ ಹಾಲು ಕುಡಿಯುವುದಿಲ್ಲ ಏಕೆಂದರೆ ಅದು ಮೊಟ್ಟೆಯಿಂದ ಹೊರ ಬರುವ ಜೀವಿ
ಮೊಟ್ಟೆಯಿಂದ ಹೊರ ಬರುವ ಜೀವಿಗಳ ಜೀರ್ಣಕ್ರಿಯೆ ಹಾಲು ಕುಡಿಯಲು ಪೂರಕವಾಗಿರುವುದಿಲ್ಲ ಎಂಬುದು ವೈಜ್ಞಾನಿಕ ಸತ್ಯ
ಹಾಲು ಹಾವಿನ ಅಹಾರ ಅಲ್ಲ ಹಾಲು ಮನುಷ್ಯನ ಪೌಷ್ಠಿಕ ಅಹಾರ
ಶರಣ ಬಂಧುಗಳೇ ಬಸವಣ್ಣನವರು ಹೇಳಿರುವ ವಚನವನ್ನು ನೆನಪಿಸಿಕೊಳ್ಳಿ
ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರುದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾಉಂಬ ಜಂಗಮ ಬಂದಡೆ ನಡೆಯೆಂಬರು, ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ. ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ, ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ
ಎಂದು ಇಂದಿನ ದಿನದ ಆಚಾರಗಳನ್ನು ವಿಡಂಬನೆ ಮಾಡಿದ್ದಾರೆ
ಕಲ್ಲಿನ ಹಾವಿಗೆ ಪೂಜೆ ಮಾಡುವುದು
ಜೀವಂತ ಹಾವು ಕಂಡರೆ ಕೊಲ್ಲುವುದು
ಇದು ಎಂಥಹ ಭಕ್ತಿ
ಹಸಿದವರು ಬಂದರೆ ಮುಂದಕ್ಕೆ ಹೋಗು ಎನ್ನುತ್ತಾರೆ ಆದರೆ ಊಟ ಮಾಡದ ಕಲ್ಲಿನ ವಿಗ್ರಹದ ಮುಂದೆ ಪೌಷ್ಠಿಕ ಅಹಾರ ಅಪವ್ಯಯ ಮಾಡುತ್ತಾರೆ ಎಂದಿದ್ದಾರೆ
ಅಂಬಿಗರ ಚೌಡಯ್ಯ ನವರು ಸಹ ತಮ್ಮ ಒಂದು ವಚನದಲ್ಲಿ ಇದೇ ಅಭಿಪ್ರಾಯ ಪಡುತ್ತಾರೆ ಅವರ ವಚನ
ಸ್ವಲ್ಪ ಅಮೃತಾನ್ನವನೊಯ್ದು ಹುತ್ತವೆಂದು ಬಿಲದ್ವಾರದಲ್ಲಿ ಹೊಯ್ವ ತೊತ್ತಿಂಗೆಲ್ಲಿಯದೊ ಶಿವಾಚಾರ! ಅದೆಂತೆಂದಡೆ- ಕಲ್ಲನಾಗರ ಕಂಡಡೆ ಹಾಲು ಹೊಯ್ಯೆಂಬಳು, ಬದುಕಿದ ನಾಗರ ಕಂಡಡೆ ಕೊಲ್ಲು ಕೊಲ್ಲೆಂಬಳು. ಉಂಬ ದೇವರು ಬಂದಡೆ ಇಲ್ಲವೆಂದಟ್ಟುವಳು, ಉಣ್ಣದ ಕಲ್ಲುಪ್ರತಿಮೆಯ ಮುಂದಿಟ್ಟು ಉಣ್ಣೆಂಬಳು. ಇಂತಹ ವೇಷದ [ಡ]ಂಬ ತೊತ್ತಿಂಗೆ ವಿಚಾರಿಸದೆ ಲಿಂಗವ ಕೊಡಲಾಗದೆಂದಾತನಂಬಿಗ ಚೌಡಯ್ಯ.
ಶರಣ ಬಂಧುಗಳೇ ಬನ್ನಿ ಈ ವರ್ಷದ ನಾಗರ ಪಂಚಮಿ ಹಬ್ಬದ ದಿನ ಹಾಲನ್ನು ಅಪವ್ಯಯ ಮಾಡದೆ ಅಪೌಷ್ಟಿಕತೆಯಿಂದ ಬಳಲುವ ಜಂಗಮರಿಗೆ ಅಂದರೆ ಸಮಾಜಕ್ಕೆ ಕೊಡೋಣ
ಬನ್ನಿ ಬದಲಾವಣೆ ತರೋಣ ನಾವು ಬದಲಾಗೋಣ
ಶರಣು ಶರಣಾರ್ಥಿ ಗಳೊಂದಿಗೆ
ವಿಶ್ವೇಶ್ವರಯ್ಯ ಬಿಎಂ ಹೆಮ್ಮನಬೇತೂರು