ಹಡಪದ ಸಮುದಾಯವನ್ನು 2ಎ ಪಟ್ಟಿಗೆ ಸೇರಿಸಲು ಅಪ್ಪಣ್ಣ ಶ್ರೀ ಮನವಿ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

‘ಹಡಪದ ಸಮುದಾಯವನ್ನು 2ಎ ಪಟ್ಟಿಗೆ ಸೇರಿಸಬೇಕು’ ಎಂದು ತಂಗಡಗಿ ಹಡಪದ ಅಪ್ಪಣ್ಣ ದೇವರ ಮಹಾಸಂಸ್ಥಾನ ಮಠದ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ ಮನವಿ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.

ಈ ಮನವಿಗೆ ಪ್ರತಿಕ್ರಿಯಿಸಿದ ಸಚಿವರು, ‘ಯಾವುದೇ ಸಮುದಾಯವನ್ನು 2ಎ ಪಟ್ಟಿಗೆ ಸೇರಿಸಲು ಕೆಲವೊಂದು ನಿಯಮಗಳಿರುತ್ತವೆ. ಅದರಂತೆ ನಡೆಯಬೇಕಾಗುತ್ತದೆ. ರಾಜಕೀಯವಾಗಿ ಮಾತನಾಡಿದರೆ ಅದು ಭರವಸೆಯಾಗಿಯೇ ಉಳಿಯುತ್ತದೆ’ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸಚಿವರು ‘ವಚನ ಸಾಹಿತ್ಯ ಚಳವಳಿಯು ಕರ್ನಾಟಕದ ಇತಿಹಾಸದಲ್ಲಿ ಮರೆಯಲಾರದ ಮತ್ತು ಮರೆಯಬಾರದ ಪ್ರಮುಖ ಚಳವಳಿಯಾಗಿದೆ. ಬಸವಣ್ಣನವರ ಅನುಯಾಯಿಯಾಗಿದ್ದ ಹಡಪದ ಅಪ್ಪಣ್ಣ ಅವರು, ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾನ್ ಶರಣರಾಗಿದ್ದಾರೆ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯತ್ರಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಅಖಿಲ ಕರ್ನಾಟಕ ಅಪ್ಪಣ್ಣ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಸಿದ್ದಪ್ಪ ಹಡಪದ, ಸಂಘದ ಜಿಲ್ಲಾಧ್ಯಕ್ಷ ನಾಗರಾಜ್ ಹಡಪದ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
3 Comments
  • ಗುರುಗಳೆ ಎಲ್ರೂ 2a ಗೆ ಹೋದರೆ ಉಳಿಯವವರು ಯಾರು ?
    ಅದಕ್ಕಿಂತಲೂ ಲಿಂಗಾಯತಕ್ಕೆ ಅಲ್ಪ ಸಂಖ್ಯಾತ ಸ್ಥಾನ ಕೇಳಿ

  • ಈಗಾಗಲೇ ಹಡಪದ ಸಮುದಾಯ ೨ಎ ದಲ್ಲಿದೆ ಎಂದೇ ತಿಳಿದಿದ್ದೆ, ನೋಡಿ ಹಿಂದುಳಿದ ವರ್ಗ ಹಡಪದ ಸಮುದಾಯಕ್ಕೆ ನ್ಯಾಯ ಸಿಕ್ಕಿಲ್ಲ ಎಂದಾದರೆ ಪಂಚಮಸಾಲಿಗೆ ಮೀಸಲಾತಿ‌ಕೊಡುವುದು ಮತ್ತು ಬೇಡಜಂಗಮ ಹೆಸರಲ್ಲಿ ವೀರಶೈವರಿಗೆ ದಲಿತ ಮೀಸಲಾತಿ ಬೇಡಿಕೆ ತಪ್ಪು. ಅಸಂಖ್ಯಾತ ಸಣ್ಣ ಸಣ್ಣ ಸಮುದಾಯಗಳಿಗೆ ಅನ್ಯಾಯ ಮಾಡಿದಂತೆ. ಮೊದಲು ಈ ಸಮುದಾಯಗಳಿಗೂ ನ್ಯಾಯ ಸಿಗಬೇಕು , ಲಿಂಗಾಯತ ಸ್ವತಂತ್ರ ಧರ್ಮವಾದರೆ ಬಹುತೇಕ ಸಮುದಾಯಗಳಿಗೆ ನ್ಯಾಯ ದೊರಕುತ್ತೆ.

    • ಹಡಪದ ಜಾತಿ ಈಗಾಗಲೇ ಹಿಂದುಳಿದ ವರ್ಗದ ಭಾಗವಾಗಿರುವ 2ಎ ಪಟ್ಟಿಗೆ ಈ ಮೊದಲಿಂದಲೂ ಸೇರಿದೆ.. ಹಾಗಾಗಿ 2ಎ ಸೇರಿಲ್ಲ ಎಂಬುದು ತಪ್ಪು ಮಾಹಿತಿ.

Leave a Reply

Your email address will not be published. Required fields are marked *