ಹುಬ್ಬಳ್ಳಿ
ಇದ್ದದ್ದನ್ನು ಇದ್ದಹಾಗೆ ಹೇಳಿರುವ ನಿರಂಕುಶಮತಿ, ನಿಷ್ಟುರ ವಚನಕಾರರಾಗಿದ್ದ ನಿಜಶರಣ ಅಂಬಿಗರ ಚೌಡಯ್ಯನವರು ದುಡಿಯುವ ಜನರ ಪಕ್ಷಪಾತಿಯಾಗಿದ್ದರು. ದೇಹಾರ ಕಾಯಕ ಜೀವಿಗಳನ್ನು, ಬಡವರನ್ನು ಮೇಲೆತ್ತುವುದರಲ್ಲಿ ದೇವರನ್ನು ಕಾಣಬೇಕೆಂದು ಹೇಳಿದ ಅವರು ಮೌಡ್ಯವನ್ನು ತಿರಸ್ಕರಿಸಿ ಏಕದೇವೋಪಾಸನೆಯ ಪರಮನಿಷ್ಟರಾಗಿದ್ದರು, ಎಂದು ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಹೇಳಿದರು.

ಮಂಗಳವಾರ ಭೈರಿದೇವರಕೊಪ್ಪ ಎಪಿಎಂಸಿ ಬಸವ ಕಾಲೋನಿಯಲ್ಲಿ ನಡೆದ ನಿಜಶರಣ ಅಂಬಿಗರ ಚೌಡಯ್ಯನವರ ೧೦೫ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಮೊದಲಿಗೆ ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಸಾಮೂಹಿಕವಾಗಿ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಕಾಲೋನಿ ಮುಖಂಡರಾದ ಹನಮಂತಪ್ಪ ಪೂಜಾರ, ಹನಮಂತ ಅಂಬಿಗೇರ, ಶಿವರಾಜ ಹುಜರಾತಿ, ದುರ್ಗಪ್ಪ ಚಿಕ್ಕತುಂಬಳ, ಸೈದಪ್ಪ ಅಂಬಿಗೇರ, ಯಲ್ಲಮ್ಮ ಅಂಬಿಗೇರ, ಮಲ್ಲಮ್ಮ ಅಂಬಿಗೇರ ಹಮಾಲಿ ಸಂಘದ ಮುಖಂಡರಾದ ಗುರುಸಿದ್ದಪ್ಪ ಅಂಬಿಗೇರ, ಮಂಜುನಾಥ ಹುಜರಾತಿ, ಮಂಜುನಾಥ ಅಂಬಿಗೇರ, ಬಸವರಾಜ ಅಂಬಿಗೇರ ಸೇರಿದಂತೆ ಕಾಲೋನಿಯ ನಾಗರಿಕರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿ ಯಶಸ್ವಿಗೊಳಿಸಿದರು.
