ಇಂಡಿ:
ಹಂಡೆ ವಜೀರ ಸಮಾಜದವರು ರಾಜ ಪರಂಪರೆ ಹೊಂದಿದ ಲಿಂಗಾಯತ-ವೀರಶೈವ ಧರ್ಮಕ್ಕೆ ಸೇರಿದವರಾಗಿದ್ದಾರೆ ಎಂದು ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೆವಜೀರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಸ್. ಎಸ್. ಪಾಟೀಲ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬುಧವಾರ ತಾಲ್ಲೂಕಿನ ಲಿಂಗಾಯತ ಹಂಡೆವಜೀರ ಸಮಾಜದ ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು.

ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಪ್ರೇಮಕುಮಾರ ಮ್ಯಾಗೇರಿ ಮಾತನಾಡಿ, ವೀರಶೈವ ಲಿಂಗಾಯತರಲ್ಲಿ ಹಲವಾರು ಒಳಪಂಗಡಗಳಿದ್ದು, ಅದರಂತೆ ಹಂಡೆವಜೀರ ಸಮಾಜವು ಲಿಂಗಾಯತದ ಒಂದು ಒಳಪಂಗಡವಾಗಿದೆ. ಎಲ್ಲ ಒಳಪಂಗಡಗಳ ಜೊತೆ ಹಾಗೂ ಇನ್ನುಳಿದ ಸಮಾಜಗಳ ಜೊತೆ ಸೌಹಾರ್ದತೆ, ಪ್ರೀತಿ, ವಿಶ್ವಾಸದಿಂದ ಬೆರೆತಿದ್ದಾರೆ ಎಂದರು.
ಆರ್. ವಿ. ಪಾಟೀಲ (ಅಧ್ಯಕ್ಷ) ಸಿ. ಬಿ. ಮಿಂಚನಾಳ (ಗೌರವಾಧ್ಯಕ್ಷ), ಈಶ್ವರಗೌಡ ಬಗಲಿ ಹಾಗೂ ಕಾಶಿನಾಥ ಅವರಾದಿ (ಉಪಾಧ್ಯಕ್ಷರು), ಜ್ಯೋತಿ ಮಿಂಚನಾಳ (ಕಾರ್ಯದರ್ಶಿ), ಜಿ. ಎಸ್. ಪಾಟೀಲ (ಖಜಾಂಚಿ), ರೇವಣಸಿದ್ಧ ಅವರಾದಿ, ಬಸನಗೌಡ ಪಾಟೀಲ, ಗೌಡಪ್ಪ ಬಿರಾದಾರ, ಮಹಾಂತಪ್ಪ ಅವರಾದಿ, ಬಾಬುಗೌಡ ಬಿರಾದಾರ, ಲಕ್ಷ್ಮಣ ಪಾಟೀಲ (ಕಾರ್ಯಕಾರಿ ಸಮಿತಿ ಸದಸ್ಯರು) ಅವರನ್ನು ಪದಾಧಿಕಾರಿಗಳಾಗಿ ಆಯ್ಕೆಗೊಳಿಸಲಾಯಿತು. ಆಯ್ಕೆಯಾದ ಎಲ್ಲರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಎಸ್. ಪಾಟೀಲ, ಉಪಾಧ್ಯಕ್ಷ ಎಸ್.ಜಿ. ಪಾಟೀಲ, ಹಿರಿಯರಾದ ಪ್ರೊ. ಎಂ.ಜೆ. ಪಾಟೀಲ, ಶಂಕ್ರೆಪ್ಪ ಅವರಾದಿ, ಜಿ.ಎಸ್. ಪಾಟೀಲ, ಜಗದೀಶ ಬಗಲಿ, ದೇವೇಂದ್ರ ಗೋನಾಳ, ಭೀಮಗೊಂಡ ಶಿವಣಗಿ, ಲಕ್ಷ್ಮಣ ಅವರಾದಿ ಮತ್ತಿತರರು ಉಪಸ್ಥಿತರಿದ್ದರು.
