ಹಂದಿಗುಂದ
“ಅಕ್ಕಮಹಾದೇವಿ, ನೀಲಮ್ಮ, ಗೊಗ್ಗವ್ವ, ನೀಲಾಂಬಿಕೆ, ಆಯ್ದಕ್ಕಿ ಲಕ್ಕಮ್ಮರಂತಹ ವಚನಕಾರ್ತಿಯರು ಸಮಾನತೆ, ಸ್ವಾತಂತ್ರ್ಯ ಸಾಧಿಸಲು ಕ್ರಾಂತಿಗಿಳಿದರು,” ಎಂದು ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷೆ ವಿಜಯಪುರದ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಹೇಳಿದರು.
ಹಂದಿಗುಂದದ ಹಾನಗಲ್ಲ ಕುಮಾರೇಶ್ವರ ಸಾಂಸ್ಕೃತಿಕ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕದಳಿ ಮಹಿಳಾ ವೇದಿಕೆ ಜಿಲ್ಲಾ ಘಟಕ, ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ತೃತೀಯ ಕದಳಿ ಮಹಿಳಾ ಸಮ್ಮೇಳನವನ್ನು ಕಳೆದ ಶನಿವಾರ ಉದ್ಘಾಟಿಸಿ ಮಾತನಾಡಿದರು.
“12ನೇ ಶತಮಾನದಲ್ಲಿ ಧರ್ಮವು ಸಾಮಾನ್ಯ ಜನರಿಗೆ ಭಯ ಮತ್ತು ಬಂಧನದ ಸಾಧನವಾಗಿತ್ತು. ಸಮಾಜವು ಜಾತಿ ಭೇದ, ವರ್ಣ ವ್ಯವಸ್ಥೆ, ಬ್ರಾಹ್ಮಣ್ಯ ಏಕ ಚಕ್ರಾಧಿಪತ್ಯ ಮತ್ತು ಮಹಿಳೆಯರ ದಮನದಿಂದ ಬಳಲುತ್ತಿತ್ತು. ಆ ಸಂದರ್ಭದಲ್ಲಿ ಮಾನವೀಯ ತತ್ವಗಳ ಸಂದೇಶ ಸಾರಿದ ವಚನಕಾರ್ತಿಯರ ರಚನೆಗಳು ಇಂದಿಗೂ ಪ್ರಸ್ತುತ,” ಎಂದು ಹೇಳಿದರು.

ಕೂಡಲಸಂಗಮ ಬಸವ ಧರ್ಮ ಪೀಠದ ಡಾ.ಗಂಗಾ ಮಾತಾಜಿ ಮಾತನಾಡಿ, ಮಹಿಳೆಯರು ಸ್ವಾವಲಂಬನೆಯಿಂದ ಸಾಮಾಜಿಕ ಔದ್ಯೋಗಿಕ ಹಾಗೂ ಆರ್ಥಿಕವಾಗಿ ಬೆಳೆಯಬೇಕು ಎಂದರು.
ನಿಡಸೋಶಿ ಸಿದ್ಧ ಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮಿಗಳು ಮಾತನಾಡಿ, ‘ದೇಶದಲ್ಲಿ ಮಹಿಳೆಯರು ಪೈಲೆಟ್, ಗಗನಯಾನಿ, ರೈಲ್ವೆ ಚಾಲಕಿಯಾಗಿ ಸಾಧನೆ ಮಾಡಿದ್ದಾರೆ’ ಎಂದರು.
ಅಕ್ಕಮಹಾದೇವಿ ಅವರ ಭಾವಚಿತ್ರಕ್ಕೆ ಸುರೇಖಾ ಚಂದ್ರಶೇಖರ ಗುಡಿಸಿ ವಿಶೇಷ ಪೂಜೆ ಸಲ್ಲಿಸಿದರು. ಸಿದ್ದೇಶ್ವರ ಮಠದ ಶಿವಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಚಂದ್ರಶೇಖರ ಗುಡಿಸಿ ಬಸವ ಭಾವ ಪೂಜೆ ನೆರವೇರಿಸಿದರು. ಬಸವರಾಜ ಬಡಿಗೇರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಐ.ಆರ್. ಮಠಪತಿ ನಾಡಧ್ವಜ, ಅಶೋಕ ಮಳಗಲಿ, ಪರಿಷತ್ ಧ್ವಜ ರೋಹನ ನೆರವೇರಿಸಿದರು.
ಕದಳಿ ಮಹಿಳಾ ವೇದಿಕೆಯ ಜಿಲ್ಲಾಧ್ಯಕ್ಷೆ ಪ್ರೇಮಕ್ಕ ಅಂಗಡಿ ಅವರ ‘ವಚನ ಸಮಚ್ಚಯ’ ಗ್ರಂಥವನ್ನು ಚಂದ್ರಶೇಖರ ಗಣಾಚಾರಿ ಬಿಡುಗಡೆಗೊಳಿಸಿದರು.

ಉಗಾರ ನಿವೃತ್ತ ಪ್ರಾಧ್ಯಾಪಕಿ ಪ್ರೊ.ಶಾಲನಿ ತಾಯಿ ದೊಡ್ಡಮನಿ ಅವರಿಗೆ ಕದಳಿ ಶ್ರೀ ಪ್ರಶಸ್ತಿ ನೀಡಿ ಸತ್ಕರಿಸಿದರು. ನಿಕಟಪೂರ್ವ ಸರ್ವಾಧ್ಯಕ್ಷೆ ಗುರುದೇವಿ ಹುಲೆಪ್ಪನವರಮಠ ಮಾತನಾಡಿದರು.
ಇದಕ್ಕೂ ಮುನ್ನ ಅಕ್ಕಮಹಾದೇವಿಯವರ ಭಾವಚಿತ್ರ, ಪ್ರೊ.ವಿಜಯ ಕೋರಿಶೆಟ್ಟಿ, ಕದಳಿ ಶ್ರೀ ಪ್ರಶಸ್ತಿ ಪುರಸ್ಕೃತ ಪ್ರೊ.ಶಾಲಿನಿತಾಯಿ ದೊಡ್ಡಮನಿ ಅವರನ್ನು ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ಮಾಡಲಾಯಿತು.
ಹುಲೆಪ್ಪನವರಮಠ, ಐ.ಆರ್.ಮಠಪತಿ, ಅಶೋಕ ಮಳಗಲಿ, ಡಾ.ಚಂದ್ರಶೇಖರ ಗುಡಿಸಿ, ಜಿಪಂ ಮಾಜಿ ಸದಸ್ಯೆ ರೋಹಿಣಿ ಪಾಟೀಲ, ಸುರೇಖಾ ಗುಡಿಸಿ, ಬೆಳಗಾವಿ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಅಶೋಕ ಮಳಗಲಿ, ಅನುಸೂಯ ಮುಳವಾಡ, ಸುಶೀಲಾ ಸೋಮಶೇಖರ, ರಾಜೇಶ್ವರಿ ಕವಟಗಿಮಠ, ಗೀತಾ ಮಾಳಶೆಟ್ಟಿ, ಸುಜಾತಾ ಉಮರೆ, ಗಿರಿಜಕ್ಕ ಪಾಟೀಲ, ಸುಜಾತಾ ಮತ್ತಿಕಟ್ಟಿ, ಸುವರ್ಣತಾಯಿ ಹೊಸಮಠ, ಗೀತಾ ಶೆಟ್ಟಿ, ಮಧು ಹಿರೇಮಠ, ಕಸ್ತೂರಿ ಹೂಲಿ ಇತರರಿದ್ದರು.
