ಗಲಾಟೆಯಲ್ಲಿ 10 ನಿಮಿಷ ನಿಂತ ಸಂಜೆಯ ಸಮಾವೇಶ
ಹಾಸನ
ವೀರಶೈವ ಬೆಂಬಲಿಗರ ಗಲಾಟೆಯಿಂದ ನಗರದಲ್ಲಿ ಭಾನುವಾರ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಂಜೆಯ ಸಮಾವೇಶನ್ನು 10 ನಿಮಿಷ ನಿಲ್ಲಿಸಬೇಕಾಯಿತು.
ಸಭೆಯಲ್ಲಿದ್ದವರ ಪ್ರಕಾರ ಸುಮಾರು 10 ಜನ ವೀರಶೈವ ಬೆಂಬಲಿಗರು ಜಾತಿ ಗಣತಿಯಲ್ಲಿ ‘ವೀರಶೈವ ಲಿಂಗಾಯತ’ ಎಂದು ಬರೆಸಬೇಕೆಂದು ಗಲಾಟೆ ಮಾಡಿ ಸಮಾವೇಶದಲ್ಲಿ ಗೊಂದಲ ಸೃಷ್ಟಿಸಿದರು.
ಬಸವ ಮೀಡಿಯಾಕ್ಕೆ ಲಭ್ಯವಾಗಿರುವ ವಿಡಿಯೋವೊಂದರಲ್ಲಿ ಸಭೆಯಲ್ಲಿ ಜನರ ಮಧ್ಯ ಕುಳಿತ್ತಿದ್ದ ಕೆಲವರು ಎದ್ದು ನಿಂತು ಆವೇಶದಲ್ಲಿ ಮಾತನಾಡುತ್ತಿರುವುದು ಕಾಣಿಸುತ್ತದೆ. ಅಲ್ಲಿದ್ದ ಪೊಲೀಸರು ಅವರನ್ನು ಸುಮ್ಮನಾಗಿಸಲು ಪ್ರಯತ್ನಿಸಿದರೂ ಕೆಲವರು ವೇದಿಕೆಯನ್ನು ಹತ್ತಿ ಲಿಂಗಾಯತ ಮಠಾಧಿಪತಿಗಳ ಸಮ್ಮುಖದಲ್ಲಿಯೇ ಪ್ರತಿಭಟಿಸಿದರೆಂದು ತಿಳಿದು ಬಂದಿದೆ.
ಸಮಾವೇಶದಲ್ಲಿ ಆಶೀರ್ವಚನ ನೀಡಿದ ಸಾಣೇಹಳ್ಳಿ ಶ್ರೀಗಳು ಜಾತಿ ಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಏನು ಬರೆಸಬೇಕೆಂದು ಗೊಂದಲವಿದೆ ಎಂದು ಯಾರೋ ಕೇಳಿದರು. ಆದರೆ ಲಿಂಗಾಯತ ಮಠಾಧೀಶರ ಒಕ್ಕೂಟದಲ್ಲಿ ಯಾವುದೇ ಗೊಂದಲವಿಲ್ಲ, ಬಸವ ಅನುಯಾಯಿಗಳು ಲಿಂಗಾಯತವನ್ನೇ ಧರ್ಮವೆಂದು ನಮೂದಿಸಬೇಕೆಂದು ಸೂಚಿಸಿದರು.
ಅನಾರೋಗ್ಯದ ಕಾರಣ ಶ್ರೀಗಳು ಆಶೀರ್ವಚನ ಮುಗಿಸಿ ನಿರ್ಗಮಿಸಿದ ಮೇಲೆ ವೀರಶೈವ ಬೆಂಬಲಿಗರ ಪ್ರತಿಭಟನೆ ಶುರುವಾಯಿತು. ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದ ಪುಷ್ಪಗಿರಿ ಮಹಾಸಂಸ್ಥಾನದ ಪೂಜ್ಯ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಶಾಂತಗೊಳಿಸಲು ಮನವಿ ಮಾಡಿ ಮತ್ತೆ ಸಮಾವೇಶ ಮುಂದುವರೆಯುವಂತೆ ಮಾಡಲು ಯಶಸ್ವಿಯಾದರು.

ಆದರೆ ಗೊಂದಲದಿಂದ ಬೇಸೆತ್ತ ಅವರು ಸಮಾಜ ಮತ್ತೆ ಜೋಡಿಸಲಾಗದಷ್ಟು ಒಡೆಯುತ್ತಿದೆ, ವಿಶಾಲ ಹೃದಯದಿಂದ ಸಮಾಜವನ್ನು ಒಗ್ಗೂಡಿಸಬೇಕೆಂದು ಕರೆ ನೀಡಿದರು.
ನಂತರ ಮಾತನಾಡಿದ ಸ್ಥಳೀಯ ಉದ್ಯಮಿ ಗ್ರಾನೈಟ್ ರಾಜಣ್ಣ ವೇದಿಕೆಯಿಂದಲೇ ‘ವೀರಶೈವ ಲಿಂಗಾಯತ’ ಎಂದು ಬರೆಸಬೇಕೆಂದು ಹೇಳಿದರು. ಆಗ ಸಭೆಯಲ್ಲಿದ್ದವರಿಂದ ಪ್ರತಿಭಟನೆ ಬಂದಾಗ ತಮ್ಮದು ಆದೇಶವಲ್ಲ ವೈಯಕ್ತಿಕ ಹೇಳಿಕೆ ಎಂದು ಸ್ಪಷ್ಟನೆ ನೀಡಿದರು.
ಕೊನೆಯಲ್ಲಿ ಮಾತನಾಡಿದ ಭಾಲ್ಕಿ ಶ್ರೀಗಳು ಲಿಂಗಾಯತ ಮಠಾಧೀಶರು ಸೂಜಿಯಂತೆ ಸಮಾಜವನ್ನು ಜೋಡಿಸುತ್ತಿದ್ದಾರೆ ಹೊರತು ಕತ್ತರಿಯಂತೆ ಕತ್ತರಿಸುತ್ತಿಲ್ಲ. ಬಸವ ತತ್ವವನ್ನು ಎಲ್ಲರೂ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಬರುತ್ತದೆಯೆಂದು, ಎಂದು ಹೇಳಿದರು.
ಇಂದು ಬೆಳಗ್ಗೆ ಬಸವ ಮೀಡಿಯಾದೊಂದಿಗೆ ಮಾತನಾಡಿದ ಪುಷ್ಪಗಿರಿ ಶ್ರೀಗಳು ಇಲ್ಲಿಯವರೆಗೆ ಹಾಸನ ಜಿಲ್ಲೆಯಲ್ಲಿ ಬಸವ ಜಯಂತಿಯೂ ಕೇವಲ ನೂರು ಇನ್ನೂರು ಜನ ಸೇರಿ ಆಚರಿಸುತ್ತಿದ್ದರು. ಅಭಿಯಾನ ನಗರದಲ್ಲಿ ಅದ್ದೂರಿಯಾಗಿ, ಸಂಭ್ರಮದಿಂದ ಸಾವಿರಾರು ಜನರನ್ನು ಸೇರಿಸಿಕೊಂಡು ನಡೆಯಿತು. ಆದರೆ ಗೊಂದಲವಾಗಿದ್ದು ಮನಸ್ಸಿಗೆ ವಿಷಾದವಾಗಿದೆ, ಎಂದು ಹೇಳಿದರು.
ವೀರಶೈವ ಮಹಾಸಭಾದ ಮುಖಂಡರೊಬ್ಬರು, “ಜಿಲ್ಲೆಯಲ್ಲಿ ಪಂಚಪೀಠಗಳ ಪ್ರಭಾವ ಕಡಿಮೆಯಾಗುತ್ತಿದೆ. ಇಲ್ಲಿರೋ ಸಾದರು, ನೊಣಬರು, ಗೌಡರಂತಹ ಅನೇಕ ಉಪಜಾತಿಗಳಲ್ಲಿ ಬಸವಣ್ಣವರ ಬಗ್ಗೆ ಅಭಿಮಾನವಿದೆ.
ನೆನ್ನೆ ಕೆಲವರು ಗಲಾಟೆ ಮಾಡಿದರೆ, ಬಸವ ಪರ ಮಾತಿಗೆ ಎಷ್ಟು ಚಪ್ಪಾಳೆ ಬಿದ್ದಿತು ನೋಡಿರಿ. ಇಲ್ಲಿ ಸಮಾಜಕ್ಕೆ ಬಸವ ತತ್ವವನ್ನು ತಿಳಿಸುವ ಕೆಲಸವನ್ನು ಯಾವುದೇ ಮಠ ಅಥವಾ ಸಂಘಟನೆ ಮಾಡಿಲ್ಲ,” ಎಂದರು.
ಸೆಪ್ಟೆಂಬರ್ 20 ಇದೆ ಗುಂಪಿನ ಕೆಲವರು ಬೆಂಗಳೂರಿನಲ್ಲಿ ನಡೆದ ಸಮಾರೋಪದ ಸಿದ್ದತೆಯ ಸಭೆಯಲ್ಲೂ ದಾಂದಲೆಯೆಬ್ಬಿಸಿದ್ದರು.
ಸಹಿಸಲಾಗದ ಉಷ್ಣತೆಯಿಂದ ಹೀಗಾಗುತ್ತದೆ
ಇಂತ ಸಾವಿರ ಜನ ಬಂದ್ರು ಲಿಂಗಾಯತ ಧರ್ಮದ ಒಂದು ಎಳೆನು ಬಿಡಿಸೋಕೆ ಆಗಲ್ಲ… ಇವರು ಒಂದು ನಾಲ್ಕು ಜನ ದಿಗಿಲು ಬಿದ್ದಿರುವರೆ ಪಾಪ ಐಯ್ಯೋ ಅನ್ನ್ಸುತ್ತೆ ಲಿಂಗಾಯತರು ಹಾಸನದಲ್ಲಿ ಸೇರಿದ ಇಷ್ಟು ಸಂಖ್ಯೆಯಲ್ಲೇ ಗೊತ್ತಾಗುತ್ತೆ ಅದೆಷ್ಟೋ ಲಿಂಗಾಯತ ವಿರೋಧಿಗಳು ಗ್ಯಾಸ್ಟ್ರಿಕ್ ಮಾತ್ರೆ ತಗೋಳೋಕೆ ಶುರುಮಾಡಿದ್ದಾರೆ…. ಇರಲಿ ಬಾಯಿ ಬದ್ಕೊಳೋದು ನಿಮ್ಮ. ಧರ್ಮ. ಪ್ರತ್ಯೇಕ ಧರ್ಮ ಲಿಂಗಾಯತ ಧರ್ಮ….. ಇನ್ನೇನು ಕೆಲವೇ ದಿನ ಆರಾಮಾಗಿ ಇರಿ ನಿರುದ್ಯೋಗಿ ಆಗಬೇಡಿ ಏನಾದ್ರು ಕೆಲಸ ನೋಡ್ಕೊಳುವಂತ್ರಿ
😳🥲
ವೀರಶೈವ ಮತ್ತು ಲಿಂಗಾಯತ ಒಂದೇ ಎರಡಾಗಲು ಬಿಡುವುದಿಲ್ಲವೆಂದು ಕೆಲವು ಮಹನೀಯರು ತಮ್ಮ ವಿಚಾರವನ್ನು ಮಂಡಿಸಿದ್ದಾರೆ. ಆದರೆ ಯಾವ ಯಾವ ೧೦/೧೨ ಕಾರಣಗಳಿಂದ ಒಂದೇ ಎಂದು ಹೇಳುತ್ತಾರೆ? ಅದಕ್ಕೆ ಲಿಂಗಾಯತ ಧರ್ಮದ ಪೂರ್ಣ ಗೌರವದಿಂದ ಒಂದು ಮಾಡಿಕೊಳ್ಳುವುದು ಅನಿವಾರ್ಯ. ಒಂದು ಲಿಖಿತ ಒಡಂಬಡಿಕೆ ಬರೆದು ಏಕೆ ಕೊಟ್ಟಿಲ್ಲ? ಅದನ್ನು ಪರಿಶೀಲಿಸಿ ಒಂದು ನ್ಯಾಯಕ್ಕೆ ಸಮ್ಮತವಾದ ನಿಲುವು ತಾಳಲು ಅಥವಾ ಅವರವರ ಮಾತುಗಳನ್ನು ಮಂಡಿಸಲು ಬರುತ್ತದೆ. ವೀರಶೈವಸಭಾ ಪದಾದಿಕಾರಿಗಳು ಹೊಸ ಏಕೆ ಸಭೆಯಲ್ಲಿ ಗದ್ದಲ ಮಾಡಬೇಕು? ಬಸವ ಧರ್ಮಬಹಳ ಪ್ರಸ್ತುತವಾಗಿದೆ. ಜನರು ಏನೇ ಹೇಳುವುದಿದ್ದರೆ ತಮ್ಮ ಅಖಿಲ ಭಾರತ ವೀರ ಶೈವ ಘಟಕಕ್ಕೆ ತಿಳಿಸಿ ಸಮಾಧಾನದ ಬಗೆಹರಿಸಿಕೊಳ್ಳಬೇಕು.
ಎಲ್ಲರಿಗೂ ಶುಭವಾಗಲಿ.