ಹುಕ್ಕೇರಿ
ತಾಲೂಕಿನ ಹೆಬ್ಬಾಳ ಗ್ರಾಮದ ಬಸವ ಭವನದಲ್ಲಿ ಸೋಮವಾರದಂದು ಮಾಸಿಕ ಶಿವಾನುಭವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ಹಾರೋಗೇರಿಯ ಅನುಭಾವಿ ಐ. ಆರ್. ಮಠಪತಿ ಶರಣರು ವಹಿಸಿಕೊಂಡು, ಆಧುನಿಕ ಅಕ್ಕಮಹಾದೇವಿ ಮಾತೋಶ್ರೀ ಸಜ್ಜಲಗುಡ್ಡದ ಶರಣಮ್ಮ ತಾಯಿಯವರ ಜೀವನದ ಕುರಿತು ಅನುಭಾವ ನೀಡಿದರು.

ಕಾರ್ಯಕ್ರಮದ ನೇತೃತ್ವವನ್ನು ಯೋಗಿನಾಥ ಶರಣರು ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣರಾದ ಎಸ್. ಎಲ್.ಬಾಡಗಿ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ದಾಸೋಹಿಗಳಿಗೆ ಕಮೀಟಿಯ ಪರವಾಗಿ ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಮಹೇಶ ಕಾಡಗಿ, ಅಜ್ಜಪ್ಪಾ ಕಾಡಗಿ, ಆನಂದ ತೋಳಿ, ಸುರೇಶ ಕಂಕಣವಾಡಿ, ಗಂಗಾಧರ ಗುಂಡಿ, ಅಜ್ಜಪ್ಪ ಚಿಲಮಿ, ನಾಗರಾಜ ಪತ್ತಾರ, ಮಲ್ಲಪ್ಪ ಚೌಗಲಾ, ಮಹಾಂತೇಶ ಚೌಗಲಾ, ಶಿವಪ್ರಕಾಶ ಕೋಟಿವಾಲೆ, ಬಸವರಾಜ ನಿಲಜಿ ಸೇರಿದಂತೆ ಅಕ್ಕನ ಬಳಗದ ತಾಯಂದಿರು ಹಾಗೂ ಗ್ರಾಮದ ನೂರಾರು ಜನ ಶರಣ ಶರಣೆಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರವೀಣ ತೋಳಿ ನಿರೂಪಿಸಿದರು. ಬಿ. ಎಸ್. ಚೌಗಲಾ ವಂದಿಸಿದರು.
