‘ಕಾಡುಮೇಡುಗಳಲ್ಲಿ ಅಲೆಯುತ್ತಾ ಹೆಣ್ಣಿಗೆ ಸ್ವಾತಂತ್ರ್ಯ ತಂದು ಕೊಟ್ಟ ಅಕ್ಕ’

ನ್ಯಾಮತಿ :

ತ್ರಿಪದಿ ಕವಿ ಸರ್ವಜ್ಞ ಅವರ ನೆನಹು ಮತ್ತು ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಲಿಂಗೈಕ್ಯ ಲಲಿತಮ್ಮ, ಕತ್ತಿಗೆ ಗಂಗಾಧರಪ್ಪ ದತ್ತಿನಿಧಿಯ ಭಾಗವಾಗಿ ಈಚೆಗೆ ಆಯೋಜಿಸಲಾಗಿತ್ತು.

ತಾಲೂಕಿನ ಚೀಲೂರು ಗ್ರಾಮದಲ್ಲಿ ತಾಲೂಕ ಶರಣ ಸಾಹಿತ್ಯ ಪರಿಷತ್ತು, ಜಾಗತಿಕ ಲಿಂಗಾಯತ ಮಹಾಸಭಾ, ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿ ಮತ್ತು ಅಕ್ಕನ ಬಳಗ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

ಇಡೀ ಜಗತ್ತಿನಲ್ಲಿ ಮೂಢನಂಬಿಕೆ ತಾಂಡವವಾಡುತ್ತಿದ್ದಾಗ, ಜಗತ್ತಲ್ಲಿ ಹೆಣ್ಣನ್ನು ಸಂಪೂರ್ಣ ಕಡೆಗಣಿಸಿ ಅವಳು ಅಬಲೆ, ಅಶಕ್ತಳು ಎಂದು ಹೇಳುತ್ತಿದ್ದ ಕಾಲದಲ್ಲಿ, ಹೆಣ್ಣು ಅಬಲೆಯಲ್ಲ, ಅಶಕ್ತಳಲ್ಲ ಸಬಲೆ ಎಂದು ಸಾಧಿಸಿ ತೋರಿದವರು ಬಸವಾದಿ ಶರಣರು.

12ನೇ ಶತಮಾನದ ಅಕ್ಕಮಹಾದೇವಿ ಆ ಕಾಲದಲ್ಲಿಯೇ ಮನೆ ಬಿಟ್ಟು, ಕಾಡುಮೇಡುಗಳಲ್ಲಿ ಅಲೆಯುತ್ತಾ ಹೊರಟು ಹೆಣ್ಣಿಗೆ ಸ್ವಾತಂತ್ರ್ಯ ತಂದು ಕೊಟ್ಟವರು. ಇಂದು ಅವರನ್ನು ಇಡೀ ಜಗತ್ತು ಸ್ಮರಿಸುತ್ತಿದೆ ಎಂದು ಶಿವಮೊಗ್ಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಹೆಚ್.ಎನ್. ಮಹಾರುದ್ರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

“ಬಸವ ಪ್ರಣೀತ ಸರ್ವಜ್ಞನ ದೃಷ್ಟಿಯಲ್ಲಿ ಮಹಿಳೆ” ಎಂಬ ವಿಷಯವಾಗಿ ಅನುಭಾವದ ನುಡಿಗಳನ್ನಾಡಿದ ದಾವಣಗೆರೆ ಸರ್ವಜ್ಞ ಸಂಶೋಧನಾ ಪೀಠದ ಡಾ. ಮಂಜಪ್ಪ ಶರಣರು, ಸರ್ವಜ್ಞ ಅವರ ಸಾಹಿತ್ಯ ಏನಾದರೂ ವಿಶ್ವಕ್ಕೆ ಪರಿಚಯಿಸಿದ್ದರೆ ಇಡೀ ವಿಶ್ವದಲ್ಲೇ ಸರ್ವಜ್ಞ ನಂಬರ್ ಒನ್ ಸ್ಥಾನದಲ್ಲಿ ಚಿಂತಕನಾಗಿರುತ್ತಿದ್ದರು, ಪ್ರಶಸ್ತಿ ಸಿಗುತ್ತಿತ್ತು.

ಸರ್ವಜ್ಞ ಜನಸಾಮಾನ್ಯರ ನಾಲಿಗೆ ಮೇಲೆ ಇದ್ದಾರೆ, ಅಷ್ಟು ಜನಪ್ರಿಯ ಕವಿ ಯಾಕೆ ಮೂಲೆಗುಂಪಾದ ಅಂದರೆ ಆತನ ವಚನಗಳು ಕೆಲವರಿಗೆ ಹಿಡಿಸಲಿಲ್ಲ. ಬಸವಾದಿ ಶರಣರ ಸಂದೇಶಗಳನ್ನು ತ್ರಿಪದಿಗಳಲ್ಲಿ ಸಾರಿಬಿಟ್ಟರು ಎಂದು ಹೇಳಿದರು.

ಗ್ರಾಮದ ಹಿರಿಯರಾದ ಯತೀಶ್ ಚಂದ್ರ ಕೋರಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕುಂಬಾರ ಸಂಘದ ಅಧ್ಯಕ್ಷರಾದ ರಾಜಶೇಖರ ಕುಂಬಾರ, ಶಿವಮೊಗ್ಗ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾದ ಸುಜಾತ ಬಸವರಾಜ, ಹೊತ್ತಿಹಾಳ ಶಿವಪ್ಪ, ಚಂದ್ರಶೇಖರಪ್ಪ ಜವಳಿ, ಚೀಲೂರು ಅಕ್ಕನ ಬಳಗದ ಹಿರಿಯ, ಕಿರಿಯ ಸದಸ್ಯರು ಉಪಸ್ಥಿತರಿದ್ದರು.

ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಯೋಗಿ ಎಂ. ಬಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಕ್ಕನ ಬಳಗದ ಶೀಲಾ ರಾಜು ಸ್ವಾಗತಿಸಿದರು. ಪಾರ್ವತಿ ವಂದಿಸಿದರು. ಸವಿತಾ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ವಚನ ಪ್ರಾರ್ಥನೆ ಮತ್ತು ಗಾಯನ ನೆರವೇರಿತು.

ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/

Share This Article
Leave a comment

Leave a Reply

Your email address will not be published. Required fields are marked *