ವಿಜಯಪುರ
ಸಿಂಧೂ ಕಣಿವೆಯ ಶಿವ-ದ್ರಾವಿಡ ಸಂಸ್ಚೃತಿಯ ೪೬೦೦ ವರ್ಷಗಳ ಹಿಂದೆ ಈ ನೆಲದಲ್ಲಿ…
“ಇಂದ್ರ ಯಾರು ಎಂದು ಯಾರಿಗೂ ಗೊತ್ತಿರಲಿಲ್ಲ…
ರಾಮಚಂದ್ರನ ವಿಳಾಸವಿರಲಿಲ್ಲ…
ಪಂಚ-ಪಾಂಡವರ ಹೆಸರು ಗೊತ್ತಿರಲಿಲ್ಲ…
ಆಗ ಇಲ್ಲಿದ್ದದ್ದು ಒಂದೇˌ ಅದು… “ಶಿವಶಂಭೋ…”
ಹಿಂದೂ ಬಹುಜನರ ಪೂರ್ವಜರ ಸಂಸ್ಕೃತಿಯಲ್ಲಿ ‘ಶಿವ’ ಅಥವಾ ‘ಶಂಕರ್’ ಬಹಳ ಮುಖ್ಯವಾದ ಹೆಸರು. ಇಂದ್ರ ವೈದಿಕರ ದೇವರು. ವೇದಗಳಿಗಿಂತ ಮೊದಲು ಇಂದ್ರನ ಅಸ್ತಿತ್ವಕ್ಕೆ ಯಾವುದೇ ಪುರಾವೆಗಳು ಲಭ್ಯವಿಲ್ಲ. ವೇದಕಾಲದ ನಂತರ ರಾಮಾಯಣ-ಮಹಾಭಾರತ ಕಥೆಗಳು ಸೃಷ್ಟಿಯಾದವು. ಅವೆಲ್ಲವುಕ್ಕಿಂತ ಮೊದಲು ಈ ನೆಲದಲ್ಲಿ ಇದ್ದದ್ದು ಶಿವಶಂಕರ ಮಾತ್ರ…
ಹಿಂದೆ ಮತ್ತು ಇಂದು ನಮ್ಮ ಗ್ರಾಮೀಣ ಜನರು ಶಿವ ಅಥವಾ ಶಂಕರನನ್ನು ಭಕ್ತಿಯಿಂದ ಪೂಜಿಸುತ್ತಾರೆ. ಈ ಕಾರಣಕ್ಕಾಗಿಯೇ ದೇಶದ ಪ್ರತಿ ಹಳ್ಳಿಯಲ್ಲೂ ಮಹಾದೇವನ ದೇವಾಲಯಗಳು ಕಾಣಸಿಗುತ್ತವೆ. ರೈತನ ಸಂಗಾತಿ ನಂದಿಯನ್ನು ವಸ್ತ್ರಧಾರಿಯಾಗಿಸಿ ಪ್ರತಿ ದೇವಾಲಯದ ಹೊರಗೆ ಕುಳ್ಳಿರಿಸಿದ್ದಾರೆ. ಶಿವಶಂಕರನಿಗೆ ಪೂಜೆ, ಆರಾಧನೆಗಳ ಅಗತ್ಯವಿಲ್ಲ. ‘ಶಂಭೋ’ ಎನ್ನುತ್ತಾ ಬಿಲ್ವಪತ್ರೆ ಏರಿಸಿ ಹಾಗೂ ಕರ್ಪೂರವನ್ನು ಬೆಳಗಿದರೆ ಸಾಕು. ಶಿವ ವೈದಿಕ ಕರ್ಮಠ ಆಚರಣೆಗಳು ಮತ್ತು ಯಜ್ಞ-ಯಾಗಗಳನ್ನು ವಿರೋಧಿಸುತ್ತಿದ್ದ. ಈ ನೆಲದ ಹಿಂದೂ ಅಥವಾ ಸಿಂಧೂ ಸಂಸ್ಕೃತಿಯಲ್ಲಿ ವೈದಿಕೇತರ ಬಹುಜನರ ಮಹಾನಾಯಕ ಶಿವ.
ಮಹಾಯುದ್ಧಗಳಲ್ಲಿ ಶಕ್ತಿ, ಸ್ಫೂರ್ತಿ ಮತ್ತು ಚೈತನ್ಯವನ್ನು ಪಡೆಯಲು ಛತ್ರಪತಿ ಶಿವಾಜಿ ಮಹಾರಾಜರ ಘೋಷಣೆ ಏನಾಗಿತ್ತು ಎಂದು ನಾವು ಜ್ಞಾಪಿಸಿಕೊಳ್ಳಬೇಕು. ಅದು ‘ಹರ್ ಹರ್ ಮಹಾದೇವ್’! ಆಗಿತ್ತು. ಇಂದಿಗೂ ಅನೇಕ ಜಾನಪದ ಕಲೆಗಳ ಪ್ರದರ್ಶನಗಳ ಪ್ರಾರಂಭದಲ್ಲಿ ಶಿವನನ್ನು ಸ್ತುತಿಸಲಾಗುತ್ತದೆ. ಅದು ಗೋಂಧಳಿ, ವಾಸುದೇವ, ಆರಾಧಿ, ಭಾರೂಡ, ಚಿತ್ರಕತಿ ಈ ಎಲ್ಲಾ ಕತೆಗಳಲ್ಲಿ ಮೊದಲು ಶಿವನಿಗೆ ನಮನ ಸಲ್ಲಿಸುತ್ತಾರೆ. ಅಷ್ಟೇ ಅಲ್ಲದೆ, ಮಹಾರಾಷ್ಟ್ರದ ಜನಪ್ರೀಯ ಜನಪದ ಕಥಾ ನೃತ್ಯ ‘ತಮಾಷ’ ದಲ್ಲಿಯೂ ಸಹ ಶಿವನ ಮಹಿಮೆಯನ್ನೂ ಹಾಡಲಾಗಿದೆ: “ಓ ಶಿವಶಂಕರ ಗಿರಿಜಾತನಯ ಗಣನಾಯಕ ಪ್ರಭುವರ…”
ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಬಹುಜನನಾಯಕ ಶಿವನ ಮೂಲ ಸ್ವರೂಪದಲ್ಲಿ ವೈದಿಕ ಬ್ರಾಹ್ಮಣರು ಮಾಡಿದ ತಿರುಚುವಿಕೆ ಹಾಗೂ ಬದಲಾವಣೆಗಳ ಬಗ್ಗೆ ತಮ್ಮ ‘ಹಿಂದೂ ಧರ್ಮದ ಒಗಟುಗಳು’ ಗ್ರಂಥದಲ್ಲಿ ವಿವರವಾಗಿ ಬರೆದಿದ್ದಾರೆ.
ಬಹುಜನರ ಹಿಂದೂ ಸಂಸ್ಕೃತಿ ಮತ್ತು ವೈದಿಕರ ಹಿಂದೂ ಧರ್ಮದ ನಡುವಿನ ಮೂಲಭೂತ ವ್ಯತ್ಯಾಸವನ್ನು ತಿಳಿಸುವ ಅತ್ಯಂತ ಮೌಲ್ಯಯುತ ‘ಹಿಂದೂ ವಿರುದ್ಧ ವೈದಿಕ’ ಮರಾಠಿ ಗ್ರಂಥ ಹೊರತರಲಾಗಿದೆ. ಇದನ್ನು ಪಾರ್ಥ ಪೋಲ್ಕೆ ಅವರು ಬರೆದಿದ್ದು ಸನಯ ಪ್ರಕಾಶನ ಪ್ರಕಟಿಸಿದೆ. ಈ ಪುಸ್ತಕ ಪ್ರತಿಯೊಬ್ಬ ನಿಜವಾದ ಹಿಂದೂ ಓದಲೇಬೇಕು. ವರ್ತಮಾನ ಕಾಲದಲ್ಲಿ ಇಂದು ಅನೇಕ ಬಹುಜನನಾಯಕರಿಗೆ ವೈದಿಕ ಮುಖವಾಡ ತೊಡಿಸುತ್ತಿರುವ ಬ್ರಾಹ್ಮಣರ ಸಂಚನ್ನು ಅರಿಯಲು ಈ ಪುಸ್ತಕ ಮಾರ್ಗದರ್ಶಿಯಾಗಲಿದೆ.
ಪಾರ್ಥ ಪೋಲ್ಕೆನಂಥ ಲೇಖಕರು ಇಲ್ಲದಿದ್ದರೆ ಇಂದು ಈ ‘ನಿಜವಾದ ಹಿಂದೂ’ವನ್ನು ಅರ್ಥಮಾಡಿಕೊಳ್ಳಲು ಆಗುತ್ತಿರಲಿಲ್ಲ. ಐದು ಸಾವಿರ ವರ್ಷಗಳ ಹಿಂದಿನಿಂದ ಇಲ್ಲಿ ವಾಸವಾಗಿರುವ ಶಿವ-ದ್ರಾವಿಡರನ್ನು ಹೊರಗಿನಿಂದ ಬಂದ ಆರ್ಯ ವೈದಿಕರು ಹತ್ತಿಕ್ಕಿದರು.
ಈ ಪುಸ್ತಕದಲ್ಲಿ ಪಾರ್ಥ್ ಪೋಲ್ಕೆ ಅವರು ಈ ನೆಲದ ಮೂಲ ನಿವಾಸಿಗಳಾದ ಲಿಂಗಾಯತರುˌ ಮರಾಠರು, ಕುಂಬಾರರುˌ ಕಂಬಾರರುˌ ನೇಕಾರರುˌ ಗಾಣಿಗರು, ಅಕ್ಕಸಾಲಿಗರು, ಮಾದಿಗರು, ಚಮ್ಮಾರರು, ಹೊಲೆಯರುˌ ಕುರುಬರು, ಕಬ್ಬಲಿಗರುˌ ರಜಪೂತರು, ಇತ್ಯಾದಿ ಜಾತಿಯ ಜನರು ಮತ್ತು ಬುಡಕಟ್ಟು ಅಲೆಮಾರಿಗಳನ್ನೆಲ್ಲ ಸಂಪರ್ಕಿಸುವ ಸಾಂಸ್ಕೃತಿಕ ಹೊಕ್ಕುಳಬಳ್ಳಿಯನ್ನು ಈ ಗ್ರಂಥದಲ್ಲಿ ಸಂಶೋಧಿರಿದ್ದಾರೆ.
‘ಹಿಂದೂ Vs ವೈದಿಕ’ ಈ ಮರಾಠಿ ಗ್ರಂಥ ಸದ್ಯ ಎಲ್ಲಾ ಭಾರತೀಯ ಭಾಷೆಗಳಿಗೆ ಅನುವಾದವಾಗಬೇಕಿದೆ. ಮರಾಠಿ ಓದಬಲ್ಲವರು ಈ ಗ್ರಂಥವನ್ನು ತಪ್ಪದೆ ಓದಬೇಕು.

I had no idea of this fact. Cogratulations sir.
ಈ ನೆಲದಲ್ಲಿ ಮೂಲದಲ್ಲಿ ಇದ್ದ ಜನರು ಶಿವನ ಆರಾಧಕರು. ಆರ್ಯರು ಇಲ್ಲಿಗೆ ವಲಸೆ ಬಂದರು. ಮೂಲದಲ್ಲಿ ಇದ್ದ ಶಿವ ನಿಗೆ ಅವರ ಶಂಕರ ಸೇರಿಸಿ ಶಿವಶಂಕರ ಎಂಬ ಕಸಿ ಮಾಡಲಾದ ಹೆಸರನ್ನು ರೂಢಿಗೆ ತಂದರು.
ಅಂಬೇಡಕರರು ಪ್ರತಿಪಾದಿಸಿದ ಶಿವ ಮತ್ತು ವೖದಿಕದ ನಡುವಿನ ವಿಷಯವನ್ನು ಜನಸಾಮಾನ್ಯರು ಗಳಿಗೆಲ್ಲ ತಲುಪಿಸಬೇಕಾಗಿದೆ. ತಲುಪಿಸಿರಿ