ಹೊಸಪೇಟೆ ಬಸ್ ನಿಲ್ದಾಣದಲ್ಲಿ ಬಸವೇಶ್ವರರ ಭಾವಚಿತ್ರ ಅನಾವರಣ

ಹೊಸಪೇಟೆ

ವಿಜಯನಗರ ಜಿಲ್ಲೆಯ ಹೊಸಪೇಟೆ ಕೇಂದ್ರ ಬಸ್ ನಿಲ್ದಾಣದಲ್ಲಿ ಶುಕ್ರವಾರ ಜಗಜ್ಯೋತಿ ಬಸವೇಶ್ವರ ಫೋಟೋವನ್ನು ಅನಾವರಣಗೊಳಿಸಲಾಯಿತು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಹೊಸಪೇಟೆಯ ವಿಭಾಗದ ನಿಯಂತ್ರಣ ಅಧಿಕಾರಿ ತಿಮ್ಮರೆಡ್ಡಿ ಹೀರ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಕೆ. ರವೀಂದ್ರನಾಥ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಕೆ. ರವೀಂದ್ರನಾಥ್ ಅವರು ಬಸವಣ್ಣನವರನ್ನು ಸ್ಥಾವರ ಮಾಡಿ ಪೂಜೆಗೆ ಸೀಮಿತಗೊಳಿಸದೆ, ಅವರ ತತ್ವ ವಿಚಾರಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. 12ನೇ ಶತಮಾನದಲ್ಲಿ ಬಸವಣ್ಣನವರು ಸಮ ಸಮಾಜ ನಿರ್ಮಾಣ ಮಾಡಲು ಜಾತಿ ವ್ಯವಸ್ಥೆ, ಲಿಂಗ ಅಸಮಾನತೆ, ಅಸ್ಪೃಶ್ಯತೆ ವಿರುದ್ಧ ಹೋರಾಡಿ ಕಾಯಕ ದಾಸೋಹ ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದಾರೆ. ಇಂದಿನ ಸಂವಿಧಾನದ ಆಶಯವಾದ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ತತ್ವವನ್ನು 12ನೇ ಶತಮಾನದಲ್ಲಿ ಬಸವಣ್ಣನವರು ನಿರೂಪಿಸಿದರು. ಈ ತತ್ವಗಳನ್ನು ನಮ್ಮ ಜೀವನದಲ್ಲಿ ರೂಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ನುಡಿದರು.

ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷೆ ಸೌಭಾಗ್ಯ ಲಕ್ಷ್ಮಿ, ಲಿಂಗಾಯತ ಸಮಾಜದ ಮುಖಂಡರಾದ ಬಸವರಾಜ ಮಾವಿನಹಳ್ಳಿ, ಬಸವ ಬಳಗದ ಬಸವಕಿರಣ ಸ್ವಾಮಿ, ಲೋಕೇಶ್ ಅವರಾದಿ, ಕೋರಿ ಶೆಟ್ಟಿ ಲಿಂಗಪ್ಪ, ಡಾ. ಮಹಾಬಲೇಶ್ವರ ರೆಡ್ಡಿ, ಶರಣಗೌಡ ಪೊಲೀಸಪಾಟೀಲ, ಇಷ್ಠಲಿಂಗ ಅಧ್ಯಯನದ ಬಸವರಾಜ ಮಾವಿನಳ್ಳಿ, ಬಸವ ಬಳಗದ ಬಸವಕಿರಣ ಸ್ವಾಮಿ, ಲೋಕೇಶ ಅವರಾಧಿ, ಲಿಂಗಾಯತ ಸಮಾಜದ ಗಣ್ಯರಾದ ಕೊರಿಶೆಟ್ಟಿ ಲಿಂಗಪ್ಪ, ಶರಣುಸ್ವಾಮಿ, ಡಾ.ಮಹಾಬಲೇಶ್ವರ ರೆಡ್ಡಿ, ಅರಳಿ ಪ್ರಭು, ಜಾಫರಸಾಬ, ಬಸವಣ್ಣ ಲಿಂಗಾಯತ, ಸೋ.ದಾ. ವಿರೂಪಾಕ್ಷಗೌಡ, ಮುದನೂರು ಉಮಾಮಹೇಶ್ವರ, ಕದಳಿ ವೇದಿಕೆ ಸದಸ್ಯೆಯರು ಉಪಸ್ಥಿತರಿದ್ದರು.

ಅನಾವರಣಗೊಂಡ ಭಾವಚಿತ್ರವನ್ನು ಪ್ರಭುದೇವ ಅರಳಿ ಅವರು ತಮ್ಮ ತಂದೆ ಕೊಟ್ರೇಶಪ್ಪ ಅರಳಿ ಅವರ ಸ್ಮರಣಾರ್ಥ ನೀಡಿದ್ದಾರೆ.

Share This Article
1 Comment
  • ಒಳ್ಳೆಯ ಕಾರ್ಯ,ಮುಂದುವರಿಸಿಕೊಂಡು ಹೋಗಲೇಬೇಕು,ಇದಕ್ಕೆ ವ್ಯಕ್ತಿ ಗಳ ಶಕ್ತಿಬೇಕೇಬೇಕು.ಆ ಎಲ್ಲ ಸಹ ಮತದ ಸದಶ್ಯವೃಂದಕ್ಕೆ ನನ್ನ ಸಹಸ್ರ ಲಕ್ಷ ಕೋಟಿ ಸಿರಸಾಷ್ಠಾಗ ನಮನಗಳು. ಜೈ ಆದಿ ಶಕ್ತಿಮಾತಾ. ಮೀಡಿಯಾ .

Leave a Reply

Your email address will not be published. Required fields are marked *