ಹುಬ್ಬಳ್ಳಿ
ಬಸವಕೇಂದ್ರದ ವತಿಯಿಂದ ಗೋಕುಲರಸ್ತೆ, ಹೈಸ್ಕೂಲ್ ಮೈದಾನದಲ್ಲಿ ನಡೆದ ಲಿಂಗಾಯತ ಧರ್ಮ ದರ್ಶನ ಪ್ರವಚನದ ಮಂಗಲೋತ್ಸವ ಸಮಾರಂಭ ಇತ್ತೀಚೆಗೆ ನಡೆಯಿತು.
ಚಿತ್ತರಗಿ-ಇಳಕಲ್ಲ ವಿಜಯ ಮಹಾಂತೇಶ ಮಠದ ಪೂಜ್ಯ ಗುರುಮಹಾಂತ ಸ್ವಾಮೀಜಿ, ಇಳಕಲ್ ಸಾನಿಧ್ಯವಹಿಸಿದ್ದರು.

ಮೋಹನ ಲಿಂಬಿಕಾಯಿ, ಮಾಜಿ ಎಂಎಲ್ಸಿ ಮುಖ್ಯ ಅತಿಥಿಯಾಗಿ ತಾತ್ವಿಕ ಚಿಂತನೆಮಾಡುತ್ತ, ಬಸವಣ್ಣನವರ ಸಾಮಾಜಿಕ, ಆಧ್ಯಾತ್ಮಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಸರ್ವತೋಮುಖವಾದ ಕೊಡುಗೆಗಳನ್ನು ಕೊಂಡಾಡಿದರು.
ಪ್ರವಚನಕಾರರಾದ ಶರಣ ಶಶಿಧರ ಕರವೀರಶೆಟ್ಟರ ಅವರು ಒಂದು ತಿಂಗಳ ಮಾಡಿದ ಪ್ರವಚನವನದ ಸಾರವನ್ನು ಮೌಲಿಕ ಮಾತುಗಳಲ್ಲಿ ತುಂಬಿಕೊಟ್ಟು, ಇನ್ನು ಮುಂದೆ ಎಲ್ಲರೂ ಧರ್ಮದ ಸಾಧನಾ ಮಾರ್ಗವನ್ನು ಅನುಸರಿಸಬೇಕೆಂದು ಹೇಳಿದರು.

ಶರಣ ಎಸ್.ವಿ. ಪಟ್ಟಣಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಪ್ರೊ.ಜಿ.ಬಿ. ಹಳ್ಯಾಳ ಅವರು ಅಧ್ಯಕ್ಷೀಯ ನುಡಿಗಳನ್ನಾಡಿ ಇಡೀ ಬಸವ ಬಳಗದ ಸೇವೆ ಕೊಂಡಾಡಿದರು.
ಶರಣ ಪ್ರಭು ಅಂಗಡಿ ಸ್ವಾಗತ ಕೋರಿದರು, ಕೆ.ಎಸ್. ಇನಾಮತಿ ಅವರು ನಿರೂಪಣೆ ಮಾಡಿದರು ಹಾಗೂ ಎಂ.ಬಿ. ಕಟ್ಟಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಿದರು. ಡಾ.ಪ್ರಕಾಶ ಮುನ್ನೋಳಿ ಶರಣು ಸಮರ್ಪಣೆ ಮಾಡಿದರು. ಮಂಗಳದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡು, ಸರ್ವರೂ ಮಹಾಪ್ರಸಾದ ಸ್ವೀಕರಿಸಿದರು.

💐