ಹುಬ್ಬಳ್ಳಿ
ವಿಶ್ವಗುರು ಬಸವಣ್ಣ, ಚನ್ನಬಸವಣ್ಣ ಹಾಗೂ ವೈರಾಗನಿಧಿ ಅಕ್ಕಮಹಾದೇವಿ ಅವರ ಮೂರ್ತಿಗಳಿರುವ ನೂತನ ಮಹಾದ್ವಾರವನ್ನು ಮೂರುಸಾವಿರಮಠದ ಪೂಜ್ಯ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಉದ್ಘಾಟಿಸಿದರು.
ನಂತರ ಉಣಕಲ್ಲ (ಚನ್ನಬಸವ ಸಾಗರ) ಕೆರೆಯ ದಂಡೆಯಲ್ಲಿರುವ ಚನ್ನಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕಾರ್ಯಕ್ರಮ ನೆರವೇರಿತು.
ಹುಬ್ಬಳ್ಳಿ ಕೇಂದ್ರದ ಶಾಸಕರಾದ ಮಹೇಶ ತೆಂಗಿನಕಾಯಿ, ಮಹಾನಗರ ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಶಶಿಕಾಂತ ಬಿಜವಾಡ, ತಾರಾದೇವಿ ವಾಲಿ, ಪ್ರಭಾ ಎರೆಸೀಮಿ, ಮನೋಹರ ಜಮಖಂಡಿ, ಚಿಂತಾಮಣಿ ಸಿಂದಗಿ ಹಾಗೂ ಹಲವಾರು ಬಸವಪರ ಸಂಘಟನೆಗಳ ಸದಸ್ಯರುಗಳು ಉಪಸ್ಥಿತರಿದ್ದರು.

ಪ್ರಸಾದದ ದಾಸೋಹ ವ್ಯವಸ್ಥೆಯನ್ನು ಶರಣ ಶಂಕರಣ್ಣ ಕೋಳಿವಾಡ ಹಾಗೂ ಮೂರ್ತಿ ದಾಸೋಹವನ್ನು ಉತ್ತರ ಕರ್ನಾಟಕ ಜನಶಕ್ತಿ ಸಂಸ್ಥಾಪಕ ಅಧ್ಯಕ್ಷರಾದ ಎಸ್. ಎಸ್. ಶಂಕರಣ್ಣ ಮಾಡಿದ್ದರು.
ಪ್ರಾಸ್ತಾವಿಕವಾಗಿ ಬಸವರಾಜ ದೇಸೂರ ಶಿಕ್ಷಕರು ಮಾತನಾಡಿದರು. ಸ್ವಾಗತವನ್ನು ಪ್ರಭು ಶೆಟ್ಟರ, ನಿರೂಪಣೆಯನ್ನು ಶ್ರೀಶೈಲ ತುಂಗಳ ಮಾಡಿದರು. ಶರಣೆಯರಾದ ಸುನೀತಾ ಜೋಡಳ್ಳಿತಾಯಿ ಬಳಗದವರು
ಪ್ರಾರ್ಥನೆ ಮಾಡಿದರು.

ಈ ಸಂದರ್ಭದಲ್ಲಿ ಶಿವಲಿಂಗವ್ವ ಜಮಖಂಡಿ, ವೀಣಾ ಪರಮಾದಿ, ಪ್ರಭು ಶೆಟ್ಟರ, ಬಿ.ಎಲ್. ಲಿಂಗಶೆಟ್ಟರ ಅವರನ್ನು ಸನ್ಮಾನಿಸಲಾಯಿತು.
ಮನೋಹರ ಜಮಖಂಡಿ, ಸಂತೋಷ್ ಕತ್ತಿಶೆಟ್ಟರ, ಪ್ರಭು ರೋಣದ, ವೀರೇಶ ಮಠಪತಿ, ಗುರುರಾಜ ಅವರಾದಿ, ಭೀಮನ ಗೌಡರ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಹೇಶ ಟೆಂಗಿನಕಾಯಿ ಅವರಿಗೆ ಚನ್ನಬಸವಣ್ಣ ಹಾಗೂ ಬಸವೇಶ್ವರರ ವಚನಗಳನ್ನು ಬರೆದು ಹಾಕಿಸಲು ಹಾಗೂ ಕೆರೆಗೆ ‘ಚನ್ನಬಸವ ಸಾಗರ’ ಎಂದು ನಾಮಫಲಕ ಹಾಕುವಂತೆ ಮಹಾನಗರ ಸದಸ್ಯರಾದ ರಾಜಣ್ಣ ಕೋರಿಯವರ ಮೂಲಕ ಮನವಿ ಸಲ್ಲಿಸಲಾಯಿತು.
ಬಹಳ ಸುಂದರವಾದ ಕಾರ್ಯಕ್ರಮ. ಇನ್ನು ಇಂತಹ ಕಾರ್ಯಕ್ರಮಗಳು ಮುಂದುವರೆಯಲಿ 🙏