ಹುಬ್ಬಳ್ಳಿ
ಶರಣೆ ಗಂಗಾಬಿಕಾ ಬಳಗದಿಂದ ಶರಣೆಯರಿಗಾಗಿ ಸೋಮವಾರ ಏರ್ಪಡಿಸಲಾಗಿದ್ದ ಬಸವಾದಿ ಶರಣರ ವಚನ ಬರವಣಿಗೆ ಸ್ಪರ್ಧೆಯಲ್ಲಿ 60 ಜನರು ಭಾಗವಹಿಸಿದರು.
20 ವರ್ಷದಿಂದ 80 ವರ್ಷ ವಯಸ್ಸಿನ ಶರಣೆಯರು ಸ್ಪರ್ಧೆಯಲ್ಲಿ ಭಕ್ತಿ, ಉತ್ಸಾಹದಿಂದ ಪಾಲ್ಗೊಂಡದ್ದು ವಿಶೇಷವಾಗಿತ್ತು.
ವಿಜೇತರಾದವರಿಗೆ ಬಹುಮಾನದ ಮೊತ್ತ ಪ್ರಥಮ ₹. 2000/- ದ್ವಿತೀಯ ₹ 1500/- ತೃತೀಯ ₹ 700/- ಎಂದು ಘೋಷಿಸಲಾಗಿದೆ. ಒಂದು ವಾರದಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಹಾಗೂ ಕಾರ್ಯಕ್ರಮವೊಂದನ್ನು ಏರ್ಪಡಿಸಿ, ವಿಜೇತರಿಗೆ ಸತ್ಕರಿಸಲಾಗುವುದು ಎಂದು ಗಂಗಾಂಬಿಕಾ ಬಳಗದ ಅಧ್ಯಕ್ಷರಾದ ಶರಣೆ ಸ್ನೇಹಾ ಭೂಸನೂರ ತಿಳಿಸಿದರು.