ಹುಬ್ಬಳ್ಳಿ:
ಗೋಕುಲ ರಸ್ತೆಯ ಬಸವ ಕೇಂದ್ರದಲ್ಲಿ ರವಿವಾರ ಅನುಭವ ಮಂಟಪದ ಅಧ್ಯಕ್ಷರಾಗಿದ್ದ ಶರಣ ಅಲ್ಲಮಪ್ರಭುದೇವರ ಜಯಂತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಭಾ ಯರೇಸೀಮಿ ಅವರು ಅಲ್ಲಮಪ್ರಭುಗಳ ಬಗ್ಗೆ ಸುದೀರ್ಘವಾಗಿ ಉಪನ್ಯಾಸ ನೀಡಿದರು.

ಬಿ.ಕೆ. ಕಮಡೊಳ್ಳಿ ಕಿರೇಸೂರ ಇವರು ಅಲ್ಲಮಪ್ರಭುದೇವರ ಬೆಡಗು ಮತ್ತು ತತ್ವಜ್ಞಾನದ ಅರಿವನ್ನು ಸಭೆಗೆ ಉಣಬಡಿಸಿದರು. ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷರಾದ ಎಂ. ವಿ. ಗೊಂಗಡಶೆಟ್ಟಿ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಪ್ರೊ. ಎಸ್ ವಿ. ಪಟ್ಟಣಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನು ಆಡಿದರು.

ಕಾರ್ಯದರ್ಶಿ ಕೆ.ಎಸ್. ಇಮಾವತಿ ನಿರೂಪಿಸಿದರು. ಪಂಕಜ ಹುಗ್ಗಿಶೆಟ್ಟರ ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ಸುನಿಲಾತಾಯಿ ಬ್ಯಾಹಟ್ಟಿ ವಚನ ಪ್ರಾರ್ಥನೆ ಮಾಡಿದರು. ಸಹ ಕಾರ್ಯದರ್ಶಿ ಸುರೇಶ ಹುಗ್ಗಿಶೆಟ್ಟರ ಶರಣು ಸಮರ್ಪಣೆ ಮಾಡಿದರು.

ಪ್ರಭು ಶೆಟ್ಟರ ಪ್ರಸಾದ ದಾಸೋಹಿಗಳಾಗಿದ್ದರು. ಶರಣ ಶರಣೆಯರು ಉಪಸ್ಥಿತರಿದ್ದರು.
