ಹುಬ್ಬಳ್ಳಿಯಲ್ಲಿ ಬಸವ ಸಂಘಟನೆಗಳಿಂದ ಯತ್ನಾಳ್ ವಿರುದ್ಧ ಪತ್ರಿಕಾಗೋಷ್ಠಿ

ಬಸವ ಮೀಡಿಯಾ
ಬಸವ ಮೀಡಿಯಾ

ಹುಬ್ಬಳ್ಳಿ

ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಧರ್ಮಗುರು ಬಸವಣ್ಣನವರನ್ನು ಅವಹೇಳನ ಮಾಡಿ ಆಡಿದ ಮಾತುಗಳನ್ನು ಖಂಡಿಸಿ ಬಸವಪರ ಸಂಘಟನೆಗಳು ಮಂಗಳವಾರದಂದು ಪತ್ರಿಕಾಗೋಷ್ಠಿ ನಡೆಸಿದವು.

ಈ ಸಂದರ್ಭದಲ್ಲಿ ಶಶಿಧರ ಕರವೀರಶೆಟ್ಟರ ಸಂಚಾಲಕರು, ಶ್ರೀಗುರುಬಸವ ಮಂಟಪ ಸುದ್ದಿಗೋಷ್ಟಿಯನ್ನು ಉದ್ಧೇಶಿಸಿ ಮಾತನಾಡುತ್ತ, ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮೊನ್ನೆ ಬೇರೆ ವಿಷಯಕ್ಕೆ ಸಂಬಂಧಿಸಿದ ಬೀದರದ ಸಭೆಯಲ್ಲಿ ಸುಖಾಸುಮ್ಮನೇ ವಿಶ್ವಗುರು ಬಸವೇಶ್ವರರ ಹೆಸರನ್ನು ಪ್ರಸ್ತಾಪಿಸಿ ತೀರಾ ಅಸಹ್ಯಕರ ರೀತಿಯಲ್ಲಿ ಮಾತನಾಡಿದ್ದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕರಾದ ಗುರುಬಸವಣ್ಣನವರು ಈ ನಾಡು ಕಂಡ ಪ್ರಥಮ ಸ್ವತಂತ್ರ ವಿಚಾರವಾದಿ, ವಿಶ್ವದ ಮೊದಲ ಪ್ರಜಾಪ್ರಭುತ್ವದ ಹರಿಕಾರ, ಏಕ ಕಾಲಕ್ಕೆ 770 ಶರಣರ ಸಮೂಹವನ್ನೇ ಸೃಷ್ಟಿಸಿದ ಧೀಮಂತ ದಾರ್ಶನಿಕ. ಮನುವಾದದಿಂದ ಕಂಗೆಟ್ಟು ಹೋಗಿದ್ದ ನಾಡಿಗೆ ಸರ್ವ ಸಮಾನತೆಯ ಸಮಾಜವಾದ ನೀಡಿದ ಮಹಾನ್ ಸಮತಾವಾದಿ.

ಬಸವಣ್ಣನವರ ವ್ಯಕ್ತಿತ್ವದ ಘನತೆ ಅರಿಯದೇ ತಮ್ಮ ಅಜ್ಞಾನದ ಮಾತುಗಳಿಂದ ಬಸವ ಭಕ್ತರ ಮನಸ್ಸಿಗೆ ನೋವುಂಟು ಮಾಡಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆಂದರು.

ಬಾಯಿ ತೆರೆದರೆ ತೀರ ಕೀಳು, ಅವಾಚ್ಯ ಶಬ್ದಗಳನ್ನೇ ಹರಿಬಿಡುವ ಯತ್ನಾಳ ಒಬ್ಬ ಲಿಂಗಾಯತನಾಗಿ ಇಂಥ ಅಸತ್ಯದ ಬಾಲಿಶ ಹೇಳಿಕೆ ಕೊಟ್ಟಿದ್ದು ಅವರ ಅಜ್ಞಾನದ ಪರಮಾವಧಿ.

ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಭರದಲ್ಲಿ ಗುರುಬಸವಣ್ಣನವರಿಗೆ ಅವಮಾನ ಮಾಡಿದ ಯತ್ನಾಳ ಕೂಡಲೇ ಸಮಸ್ತ ಬಸವ ಭಕ್ತರ ಕ್ಷಮೆ ಕೇಳಿ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಸಂಘಟನೆಗಳ ಪರವಾಗಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಎಮ್.ವಿ. ಗೊಂಗಡಶೆಟ್ಟಿ, ಅಧ್ಯಕ್ಷರು, ಜಾ.ಲಿಂ.ಮ. ಧಾರವಾಡ ಜಿಲ್ಲಾ ಘಟಕ,
ಪ್ರೊ. ಜಿ.ಬಿ. ಹಳ್ಯಾಳ ಅಧ್ಯಕ್ಷರು, ಬಸವಕೇಂದ್ರ, ಹುಬ್ಬಳ್ಳಿ, ಎಸ್. ವಿ. ಜೋಡಳ್ಳಿ, ಕಾರ್ಯದರ್ಶಿಗಳು, ಲಿಂಗಾಯತ ಧರ್ಮ ಮಹಾಸಭಾ ಹುಬ್ಬಳ್ಳಿ, ಪ್ರಭು ಅಂಗಡಿ, ಎಸ್. ವಿ. ಕೊಟಗಿ ಮತ್ತೀತರ ಮುಖಂಡರು ಉಪಸ್ಥಿತರಿದ್ದರು.

Share This Article
3 Comments
  • ಈ ರೀತಿ ರಾಜ್ಯಾದ್ಯಂತ ತೀವ್ರವಾಗಿ ಖಂಡಿಸಬೇಕು , ಆಗ ಯತ್ನಾಳನಿಗೂ ಮತ್ತ ಅವನ ದಾರಿಯಲ್ಲಿ ಹೋಗುವ ಇತರ ಬಾಯಿಬಡುಕರಿಗೂ ಒಂದು ಸ್ಪಷ್ಟ ಸಂದೇಶ‌ಹೋಗುತ್ತೆ

Leave a Reply

Your email address will not be published. Required fields are marked *