ಹುಕ್ಕೇರಿಯ ಹೆಬ್ಬಾಳದಲ್ಲಿ 24 ದಿನಗಳ “ಪ್ರಭುಲಿಂಗ ಲೀಲೆ” ಪ್ರವಚನ

ಬೆಳಗಾವಿ:

ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ಯವಾಗಿ ಚಾಮರಸ ಕವಿ ವಿರಚಿತ “ಪ್ರಭುಲಿಂಗ ಲೀಲೆ” ಪ್ರವಚನ ನಡೆಯುತ್ತಿದೆ.

ಬಸವ ಶ್ರೀ ಕಮಿಟಿ, ಅಕ್ಕನ ಬಳಗ, ಬಸವ ಬಳಗ ಹಾಗೂ ಬಸವಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಬಸವ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಪ್ರವಚನಕಾರರಾದ ಪೂಜ್ಯ ಶ್ರೀ ಬಸವರಾಜ ಶರಣರು, ಬಸವ ತತ್ವ ಅನುಭಾವ ಕೇಂದ್ರ, ಶಿರಗುಪ್ಪ, ಜಿಲ್ಲಾ ಬಳ್ಳಾರಿ ಇವರು ನಡೆಸಿಕೊಡುತ್ತಿದ್ದಾರೆ.

ಬುಧವಾರದ ಕಾರ್ಯಕ್ರಮ ಸಾನಿಧ್ಯವನ್ನು ಪೂಜ್ಯ ಶ್ರೀ ಶರಣಬಸವ ದೇವರು, ಚರಮೂರ್ತಿ ಚರಂತೇಶ್ವರ ಮಠ, ಬಸವ ಬೆಳವಿ ವಹಿಸಿದ್ದರು. ನೇತೃತ್ವವನ್ನು ಯೋಗಿನಾಥ ಶರಣರು, ಕ್ರಿಯಾ ಮೂರ್ತಿಗಳು ಬಸವ ಭವನ, ಹೆಬ್ಬಾಳ ಇವರು ವಹಿಸಿದ್ದರು.

ಕಾರ್ಯಕ್ರಮವು ಆಗಸ್ಟ್ 09, 2024ರಿಂದ ಆರಂಭಗೊಂಡಿದ್ದು, ಸೆಪ್ಟೆಂಬರ್ 03/2024ರ ವರೆಗೆ ಪ್ರತಿದಿನ ಸಂಜೆ
ಪ್ರತಿನಿತ್ಯ ಸುಮಾರು 500ಕ್ಕೂ ಅಧಿಕ ಭಕ್ತಜನ ಭಾಗಿಗಳಾಗುತ್ತಿದ್ದಾರೆ.

ಪ್ರವಚನದ ನಂತರ ಪ್ರತಿದಿನ ಗ್ರಾಮದ ದಾಸೋಹಿಗಳಿಂದ ಅನ್ನಪ್ರಸಾದ ವ್ಯವಸ್ಥೆ ಇರುತ್ತದೆ.

ಶರಣರಾದ ಶಂಕರ ಗುಡಸ, ಬಸವರಾಜ ನಿಲಜಿ, ಮಹೇಶ ಕಾಡಗಿ, ಪ್ರವೀಣ ತೋಳಿ, ಸುರೇಶ ಕಂಕನವಾಡಿ, ಮಾಂತೇಶ ಚೌಗಲಾ ಹಾಗೂ ಅನೇಕ ಬಸವಪರ ಸಂಘಟನೆಗಳ ಪದಾಧಿಕಾರಿಗಳು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕ ಬೆಳಗಾವಿ.