ಇದು ಬಸವ ಬೆಳಕು ಪ್ರಜ್ವಲಿಸುವ ಕಾಲ, ಕನಸು ನನಸಾಗುವ ಕಾಲ

ಬಸವ ತತ್ವ ವಿಶ್ವವನ್ನೇ ವ್ಯಾಪಿಸುತ್ತದೆ ಏಕೆಂದರೆ ಅದು ಬೆಳಕು. ಬೆಳಕು ಕತ್ತಲೆಯನ್ನು ಓಡಿಸಲೇ ಬೇಕು. ಆದರೆ ನಾಡಿನೆಲ್ಲೆಡೆ ಜನ ಮೌಢ್ಯದ ಗುಲಾರಾಗಿರುವುದನ್ನು ನೋಡಿದಾಗ ನಿರಾಸೆ ಆಗುತಿತ್ತು.

ಆದರೆ ಮೊನ್ನೆ ಎರಡು ದಿನಗಳಲ್ಲಿ ಕೆಲವು ಘಟನೆಗಳನ್ನು ನೋಡಿದ ನನಗೆ ಬಸವ ಬೆಳಕು ಪ್ರಜ್ವಲಿಸುವ ಕನಸು ನನಸಾಗುವ ಕಾಲ ಹತ್ತಿರದಲ್ಲೇ ಇದೆ ಎಂದು ಅನಿಸಿತು. ಅಂತಹ ಘಟನೆಗಳನ್ನು ನಿಮ್ಮೊಡನೆ ಹಂಚಿಕೊಳ್ಳುತಿದ್ದೇನೆ.

ತುಂಬಿದ ಬಸ್ಸಿನಲ್ಲಿ ಇಬ್ಬರು ವ್ಯಕ್ತಿಗಳು ಅವರ ಸಮಸ್ಯೆ ಸಾಮಾಜಿಕ ಸಮಸ್ಯೆ ದೇಶದ ಸಮಸ್ಯೆಗಳ ಬಗ್ಗೆ ಮಾತನಾಡುತಿದ್ದರು. ಆಗ ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಈ ಎಲ್ಲಾ ಸಮಸ್ಯೆಗಳಿಗೆ ನಾವು ಬಸವಣ್ಣನವರನ್ನು ಮರೆತಿರುವುದೇ ಕಾರಣ, ಬಸವಣ್ಣನವರ ವಿಚಾರಗಳನ್ನು ನಾವು ಅನುಸರಿಸಿದರೆ ನಮ್ಮ ನಿಮ್ಮ ಸಮಸ್ಯೆ ಅಷ್ಟೇ ಅಲ್ಲ ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಎಂದು ಹೇಳಿದ ಮಾತು ನಮಗೆ ಅತೀವ ಸಂತಸ ತಂದಿತು.

ಅದೇ ದಿನ ನಮ್ಮ ಆತ್ಮೀಯರೊಬ್ಬರ ಜೊತೆಗೆ ಅವರ ಕಾರಿನಲ್ಲಿ ಕೂತು ಮಾತನಾಡುವ ಸಂದರ್ಭದಲ್ಲಿ ಅವರು ಹೇಳಿದ್ದು ಇತಿಹಾಸದ ಬಗ್ಗೆ ನಮಗೆ ಗೊತ್ತಿಲ್ಲ ಶರಣರು ಹೇಳಿದ ವಿಚಾರಗಳ ತಿಳುವಳಿಕೆ ನಮಗೆ ಇಲ್ಲ. ಅಂದರೆ ಅವು ಗೊತ್ತಾದರೆ ಗೊಂದಲಗಳೇ ಇರುವುದಿಲ್ಲ ಎಂಬರ್ಥದಲ್ಲಿ ಮಾತನಾಡಿದರು.

ಈ ಘಟನೆಗಳು ನಡೆದ ಮಾರನೆಯ ದಿನ ನಮ್ಮ ಪಕ್ಕದ ಊರಿನಲ್ಲಿ ಆತ್ಮೀಯರೊಬ್ಬರು ಕರೆದ ಕಾರಣ ಅವರ ಮನೆಗೆ ಹೋದಾಗ ಮಾತಿನ ಸಂದರ್ಭದಲ್ಲಿ ಅವರು ಹೇಳಿದ್ದು: “ಈಗ ನಾವು ಮಾಡುತ್ತಿರುವುದೆಲ್ಲಾ ಸಂಪೂರ್ಣ ಉಲ್ಚ, ಸಂಪೂರ್ಣವಾಗಿ ನಮ್ಮ ಸಂಪ್ರದಾಯ ಪರಂಪರೆ ಮರೆತು ಬೇರೆ ಸಂಪ್ರದಾಯ ಪಾಲನೆ ಮಾಡುತಿದ್ದೇವೆ.” ಇದಂತೂ ನಮಗೆ ಆಶ್ಚರ್ಯ ಮತ್ತು ಸಂತಸ ಉಂಟುಮಾಡಿತು.

ಇದೇ ದಿನ ಮಧ್ಯಾಹ್ನ ಶಾಲೆಯಲ್ಲಿ ಹಡಪದ ಅಪ್ಪಣ್ಣನವರ ಜಯಂತಿಯ ಸಂದರ್ಭದಲ್ಲಿ ಅತಿಥಿಯೊಬ್ಬರು ಉಪನ್ಯಾಸ ನೀಡುವ ಸಮಯದಲ್ಲಿ
ನನಗೆ ಬಸವಣ್ಣನವರ ವಿಚಾರಗಳು ತಿಳಿದ ನಂತರ ನಮ್ಮ ಮನೆಯಲ್ಲಿ ಇದ್ದ ಹಲವಾರು ದೇವರ ಚಿತ್ರಗಳನ್ನು ತೆಗೆದಿದ್ದೇನೆ ದೇವರು ಬೇರೆ ಕಡೆ ಇಲ್ಲ ನಮ್ಮೊಳಗೇ ದೇವರು ಇದ್ದಾನೆ ಎಂದು ಹೇಳಿದರು ಇದು ಅಲ್ಲಿನ ಶಾಲಾ ಮಕ್ಕಳು ಸೇರಿದಂತೆ ಹಲವಾರು ಜನರಿಗೆ ಸ್ಪೂರ್ತಿ ಉಂಟಾಯಿತು

ಆ ಶಾಲಾ ಸಮಾರಂಭ ಮುಗಿದ ಮೇಲೆ ಖಾಸಗಿಯಾಗಿ ಕೆಲವು ಮಕ್ಕಳ ಜೊತೆಗೆ ಮಾತನಾಡುತ್ತಾ ಈ ಬಾರಿಯ ಪಂಚಮಿ ಹಬ್ಬದಲ್ಲಿ ಯಾರು ಕಲ್ಲಿನ ಹಾವಿಗೆ ಹಾಲು ಹಾಕುವಿರಿ ಅಂತ ಕೇಳಿದಾಗ ಆ ಮಕ್ಕಳು ಉತ್ಸಾಹದಿಂದ ನಾವು ಹಾಕುವುದಿಲ್ಲ ಎಂದರು.

ಒಂದು ಹೆಣ್ಣು ಮಗು ಅಂತು ದೃಢ ಸಂಕಲ್ಪದಂತೆ ನಾವು ಹಾಕುವುದಿಲ್ಲ ನಮ್ಮ ಮನೆಯವರಿಂದಲೂ ಹಾಕುವುದಿಲ್ಲ ಎಂದು ತುಂಬಾ ಆತ್ಮವಿಶ್ವಾಸದಿಂದ ಹೇಳಿದ್ದು ನಮಗೆ ತುಂಬಾ ಸೊಜಿಗ ಅನಿಸಿತು ಮತ್ತು ಹೆಮ್ಮೆಯೂ ಆಯಿತು.

ಶರಣ ಬಂಧುಗಳೇ ಈಗ ಹೇಳಿ ಬಸವ ತತ್ವ ಪ್ರಜ್ವಲಿಸುವ ಕನಸು ನನಸಾಗುವ ಕಾಲ ಸನ್ನಿಹಿತ ಆಗುತ್ತದೆ ಎಂಬ ಭರವಸೆ ಮಾಡುವುದಿಲ್ಲವೇ.

ಜಗತ್ತು ಬಸವ ತತ್ವದ ಕಡೆಗೆ ವಾಲುತ್ತಿದೆ ಎಲ್ಲರೂ ಬದಲಾಗುತಿದ್ದಾರೆ.

ಇನ್ನು ನಾವು ನೀವು ಬದಲಾಗುವುದು ಯಾವಾಗ ಚಿಂತಿಸಿ.

Share This Article
Leave a comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು