ಬೆಂಗಳೂರು
ಸೌಹಾರ್ದ ಪತ್ತಿನ ಸಹಕಾರ ಬ್ಯಾಂಕ್ ಸ್ಥಾಪಿಸಿ ಲಿಂಗಾಯತ ಸಮುದಾಯದ ಉದ್ಯಮಿಗಳ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಅಂತರರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ (ILYF)ಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಚಿನ್ಮಯ ಚಿಗಟೇರಿ ಭಾನುವಾರ ತಿಳಿಸಿದರು.
ಉದ್ಯಮಿಗಳಿಗಾಗಿ ಫಂಡಿಂಗ್ ಡೆಸ್ಕ್ ರಚಿಸುವುದು, ಉದ್ಯಮಿಗಳ ನೆರವಿಗೆ ಸೌಹಾರ್ದ ಪತ್ತಿನ ಸಹಕಾರ ಬ್ಯಾಂಕ್ ಸ್ಥಾಪನೆ, ಲಿಂಗಾಯತ ಉದ್ದಿಮೆಗಳಿಲ್ಲದ ದೇಶಗಳಲ್ಲಿ ಚಟುವಟಿಕೆಗಳನ್ನು ವಿಸ್ತರಿಸುವದು ನಮ್ಮ ಮೂರು ಪ್ರಮುಖ ಉದ್ಧೇಶಗಳೆಂದು ಹೇಳಿದರು.
ಲಿಂಗಾಯತ ಉದ್ದಿಮೆಗಳಿಗಾಗಿಯೇ ಸ್ಥಾಪಿಸಿರುವ ಇದು ವ್ಯಾಪಾರ ಜಾಲವಾಗಿದೆ. ಸುಮಾರು ಐದು ಸಾವಿರ ಕೋಟಿ ಸಾಮೂಹಿಕ ವಹಿವಾಟು ನಡೆಸುತ್ತಿರುವ ಐ.ಎಲ್.ವೈ.ಎಫ್. ೨೦೧೨ ರಲ್ಲಿ ಆರಂಭಗೊಂಡಿದೆ ಎಂದು ಚಿಗಟೇರಿ ತಿಳಿಸಿದ್ದಾರೆ.