ಚನ್ನಮ್ಮನ ಕಿತ್ತೂರು:
ತಾಲ್ಲೂಕಿನ ಬೈಲೂರು ಗ್ರಾಮದ ಚಿನ್ನಯಜ್ಞಾನಿ ಶ್ರೀ ಚನ್ನಬಸವಣ್ಣನವರ ಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಜನವರಿ 21ರಿಂದ ಫೆಬ್ರವರಿ 1ರವರೆಗೆ ‘ಚನ್ನಬಸವಣ್ಣನವರ ಚರಿತಾಮೃತ ಪ್ರವಚನ’ ನಡೆಯಲಿದೆ ಎಂದು ಶ್ರೀ ಚನ್ನಬಸವೇಶ್ವರ ಸೇವಾ ಸಮಿತಿ ತಿಳಿಸಿದೆ.
ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮಿಗಳ ಸಾನ್ನಿಧ್ಯದಲ್ಲಿ ಸಮಾರಂಭ ಜರುಗಲಿದ್ದು, ತಿಮ್ಮಾಪುರ ವಿಶ್ವಶರಣ ಸಂಕುಲ ಕಲ್ಯಾಣಾಶ್ರಮದ ಶ್ರೀ ಡಾ. ಮಹಾಂತ ಸ್ವಾಮೀಜಿ ಮುದಗಲ್ಲ ಪ್ರವಚನ ನೀಡಲಿದ್ದಾರೆ.
ಪ್ರತಿದಿನ ಸಂಜೆ 7:30ರಿಂದ 8:30ರ ವರೆಗೆ ಬೈಲೂರು ಗ್ರಾಮದ ಶ್ರೀ ಚನ್ನಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ.
ಫೆ. 1 ಮತ್ತು 2 ರಂದು ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 1ರಂದು ರಾತ್ರಿ 7:30ಕ್ಕೆ ‘ನಗೆ ಹಬ್ಬ, ‘ಮಾತನಾಡುವ ಗೊಂಬೆ’ ಮತ್ತು ಪ್ರಹ್ಲಾದ ಆಚಾರ್ಯ ಅವರ ಅಂತರಾಷ್ಟ್ರೀಯ ಮಟ್ಟದ ‘ಶಾಡೋ ಪ್ಲೇ’ ಪ್ರದರ್ಶನ ನಡೆಯಲಿದೆ.
ಫೆಬ್ರವರಿ 2ರಂದು ರಾತ್ರಿ 8:30ಕ್ಕೆ ಗದಗದ ಶ್ರೀ ಕುಮಾರೇಶ್ವರ ಕೃಪಾಪೋಷಿತ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘ ಇವರಿಂದ ಮಹಾದೇವ ಹೊಸೂರು ಅವರು ವಿರಚಿತ ‘ಅಕ್ಕ ಅಂಗಾರ ತಂಗಿ ಬಂಗಾರ’ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
