ಇಂದಿನಿಂದ ಸೊಲ್ಲಾಪುರದಲ್ಲಿ ನಾಲ್ಕು ದಿನಗಳ ಶರಣತತ್ವ ಕಮ್ಮಟ

ಸೊಲ್ಲಾಪುರ

ಇಲ್ಲಿಯ ಲಿಂಗಶೆಟ್ಟಿ ಸಾಂಸ್ಕೃತಿಕ ಸಭಾಭವನದಲ್ಲಿ ಡಿ.೨೭ ರಿಂದ ಡಿ.೩೦ ರವರೆಗೆ ನಾಲ್ಕು ದಿನಗಳ ಕಾಲ ೧೯ ನೇ ‘ಶರಣತತ್ವ ಕಮ್ಮಟ’ ಆಯೋಜಿಸಲಾಗಿದೆ ಎಂದು ಟ್ರಸ್ಟ್ ನ ಷಡಕ್ಷರಿ ಅಜ್ಜಂಪುರಶೆಟ್ರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮ ಲಿಂ. ಶರಣೆ ಪುಟ್ಟಮ್ಮ ಮತ್ತು ಲಿಂ. ಶರಣ ಬಸವರಾಜಪ್ಪ ಅಜ್ಜಂಪುರ ಶೆಟ್ರು ಸೇವಾಟ್ರಸ್ಟ್, ಬಸವಬಳಗ ದಾವಣಗೆರೆ, ಸೊಲ್ಲಾಪುರದ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಅನೇಕ ಬಸವಪರ ಸಂಘಟನೆಗಳ ಸಹಯೋಗದಲ್ಲಿ ನಡೆಯುತ್ತಿದೆ.

ಡಿ.೨೭ ರಂದು ಸಂಜೆ ೬.೩೦ಕ್ಕೆ ಉದ್ಘಾಟನಾ ಸಮಾರಂಭ. ಅಕ್ಕಲಕೋಟದ ಬಸವಲಿಂಗ ಶ್ರೀಗಳಿಂದ ಷಟಸ್ಥಲ ಧ್ವಜಾರೋಹಣದ ಮೂಲಕ ಕಮ್ಮಟಕ್ಕೆ ಚಾಲನೆ. ದಾವಣಗೆರೆಯ ಬಸವ ಬಳಗದ ಹುಚ್ಚಪ್ಪ ಮಾಸ್ತರರ ಅಧ್ಯಕ್ಷತೆಯಲ್ಲಿ ರಾಮದುರ್ಗದ ಸಿದ್ಧಣ್ಣ ಲಂಗೋಟೆಯವರು ‘ಬಸವಣ್ಣನವರಿಂದ ಬದುಕ್ತಿತ್ತು ಈ ಲೋಕ’ ಕುರಿತು, ಲಾತೂರದ ಭೀಮರಾವ ಪಾಟೀಲ ‘ತತ್ವಶೀಲ ಸಮಾಜಕಾಗಿ ವಚನ ಸಾಹಿತ್ಯ’ ಕುರಿತು ಮರಾಠಿಯಲ್ಲಿ ಅನುಭಾವ ನೀಡುವರು. ಮುಗಳಿ ಬಸವ ಮಂಟಪದ ಪೂಜ್ಯ ಮಹಾನಂದಾತಾಯಿ, ಸೊಲ್ಲಾಪುರದ ಸಂಸದೆ ಪ್ರಣೀತಿ ಶಿಂದೆ, ಅಮರ ಬಿರಾಜದಾರ, ಶಿವಶಂಕರ ಕಾಡಾದಿ, ಜಾಲಿಮದ ಮಹಿಳಾಧ್ಯಕ್ಷೆ ರಾಜಶ್ರೀ ಥಳಂಗೆ, ಜಯಶ್ರೀ ಚಡಚಣಕರ ಅತಿಥಿಗಳಾಗಿರುವರು.

ಡಿ.೨೮ ರಿಂದ ಡಿ.೩೦ ರ ವರಗೆ ಪ್ರತಿದಿನ ಬೆಳಿಗ್ಗೆ ೬ ರಿಂದ ೯ ಶಿವಯೋಗ ಪ್ರಾತ್ಯಕ್ಷಿಕೆ ಮತ್ತು ಪಥಸಂಚಲನ ನಡೆಯುವದು.

ಡಿ.೨೮ ಶನಿವಾರ ಬೆಳಿಗ್ಗೆ ೧೦ಕ್ಕೆ ಗುರುತತ್ವದ ಕುರಿತು ಮಂಜುನಾಥ ಮಡಿವಾಳರ, ಲಿಂಗತತ್ವದ ಕುರಿತು ಕುಪೇಂದ್ರ ಪಾಟೀಲ, ಜಂಗಮತತ್ವದ ಕುರಿತು ಸಿದ್ಧಣ್ಣ ಲಂಗೋಟಿ, ವಿಭೂತಿ-ರುದ್ರಾಕ್ಷಿ ತತ್ವದ ಕುರಿತು ಮಹಾಂತೇಶ ಕುಂಬಾರ, ಮಂತ್ರದ ಕುರಿತು ಬಸವಕಿರಣ ಅನುಭಾವ ನೀಡುವರು. ಸಂಜೆ ೬ಕ್ಕೆ ಸೊಲ್ಲಾಪುರ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಿವಾನಂದ ಗೋಗಾವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಕಾರ್ಯಕ್ರಮ. ಶೈಲಜಾ ತಿಪ್ಪೆರುದ್ರ ಸ್ವಾಮಿಯವರು ‘ಕರ್ಮಯೋಗದಿಂದ ಶಿವಯೋಗದೆಡೆಗೆ ಸಿದ್ಧರಾಮ’ ಕುರಿತು ಡಾ. ಬಸವರಾಜ ಟಿ.ಹೆಚ್ `ಭಕ್ತಿ ಇಲ್ಲದ ವೈಚಾರಿಕತೆ ಸ್ವೆಚ್ಚೆ, ವೈಚಾರಿಕತೆ ಇಲ್ಲದ ಭಕ್ತಿ ಮೌಢ್ಯ’ ಕುರಿತು ಅನುಭಾವ ನೀಡುವರು. ಸೊಲ್ಲಾಪರ ಉತ್ತರದ ಶಾಸಕ ವಿಜಯಕುಮಾರ ದೇಶಮುಖ, ಅವಿನಾಶ ಭೋಸಿಕರ, ಪರಮಾನಂದ ಅಲಗೊಂಡಾ, ಪ್ರಭು ತೋಟದ, ರಾಜಶೇಖರ ಬುರಕುಲೆ, ರಾಜೇಂದ್ರ ಮೈನಾಳ, ರವೀಂದ್ರ ಶಹಾಬಾದಿ, ಅಮಿತ ರೊಡಗೆ ಅತಿಥಿಗಳಾಗಿರುವರು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು.

ಡಿ.೨೯ ರಂದು ಬೆಳಿಗ್ಗೆ ೧೦ ಕ್ಕೆ ‘ಪಾದೋದಕ’ ಕುರಿತು ರುದ್ರೇಶ ಕಿತ್ತೂರ, ‘ಪಂಚಾಚಾರ’ ಕುರಿತು ಭಾರತಿ ಕೆಂಪಯ್ಯ, ‘ಷಟಸ್ಥಲ’ ಕುರಿತು ರುದ್ರಪ್ಪ ಅನುಭಾವ ನೀಡುವರು. ಸಂಜೆ ೬ಕ್ಕೆ ಕಿರಿಟೇಶ್ವರ ಮಠದ ಸ್ವಾಮಿನಾಥ ಶ್ರೀಗಳ ಸಾನಿಧ್ಯ, ಮಾದನ ಹಿಪ್ಪರಗಾದ ಅಭಿನವ ಶಿವಲಿಂಗ ಶ್ರೀಗಳ ಸಮುಖ, ಸಿಂಧೂತಾಯಿ ಕಾಡಾದಿಯವರ ಅಧ್ಯಕ್ಷತೆಯಲ್ಲಿ ‘ಮಕ್ಕಳಲ್ಲಿ ಧರ್ಮಪ್ರಜ್ಞೆಯ ಅವಶ್ಯಕತೆ’ ಕುರಿತು ಸಂತೋಷ ಹೂಗಾರ ಅನುಭಾವ ನೀಡುವರು. ಅಕ್ಕಲಕೋಟ ಶಾಸಕ ಸಚಿನ ಕಲ್ಯಾಣಶೆಟ್ಟಿ, ಅರವಿಂದ ಜತ್ತಿ, ಡಾ.ಶರಣಬಸಪ್ಪ ದಾಮಾ, ಡಾ.ಗುರಲಿಂಗಪ್ಪ ಧಬಾಲೆ, ಡಾ.ಗುರುಸಿದ್ಧಯ್ಯ ಸ್ವಾಮಿ, ನಾಗಪ್ಪಣ್ಣ ಜಾಮಗೊಂಡೆ ಅತಿಥಿಗಳಾಗಿರುವರು. ರಾತ್ರಿ ೭ಕ್ಕೆ ಸೊಲ್ಲಾಪುರದ ಶಂಕರಲಿಂಗ ಮಹಿಳಾ ಮಂಡಳಿಯಿಂದ `ಅಕ್ಕ -ಅಲ್ಲಮರ ಸಂವಾದ’ ರೂಪಕ ಪ್ರದರ್ಶನ ಗೊಳ್ಳುವದು.

ಡಿ.೩೦ ಬೆಳಿಗ್ಗೆ ೧೦ ಕ್ಕೆ ಶಂಭುಲಿಂಗ ಅಜ್ಜಂಪುರಶೆಟ್ರು ಅಧ್ಯಕ್ಷತೆಯಲ್ಲಿ ಕಮ್ಮಟದ ಸಮಾರೋಪ ನಡೆಯುವದು. ಅಕ್ಕ ಗಂಗಾಬಿಕಾ ಮತ್ತು ಜಾಲಿಮದ ಮಹಾರಾಷ್ಟ ರಾಜ್ಯ ಅಧ್ಯಕ್ಷ ರಾಜಶೇಖರ ತಂಬಾಕೆ `ದೇವ ಮತ್ತು ಮುಕ್ತಿ’ ಕುರಿತು ಅನುಭಾವ ನೀಡುವರು.
ಅರವಿಂದ ಜತ್ತಿ, ಸಿದ್ಧರಾಮೇಶ್ವರ ದೇವಸ್ಥಾನದ ಅಧ್ಯಕ್ಷ ಧರ್ಮರಾಜ ಕಾಡಾದಿ, ಪಿ ರುದ್ರಪ್ಪ, ಅಮರಾಥ ಸೊಲಪುರೆ, ದಶರಥ ವಡತಿಲೆ ಅತಿಥಿಗಳಾಗಿರುವರು. ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಲಿಂಗಾಯತ, ಬಸವನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸೊಲ್ಲಾಪುರ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಿವಾನಂದ ಗೋಗಾವ ಕೋರಿದ್ದಾರೆ.

Share This Article
2 Comments

Leave a Reply

Your email address will not be published. Required fields are marked *