“ಇಷ್ಟಲಿಂಗದೊಳಗೆ ಏನಿದೆ?”
ಶೈವವಾದಿಗಳು ಲಿಂಗಾಯತರಿಗೆ ಕೇಳುವ ಸಾಮಾನ್ಯ ಪ್ರಶ್ನೆ ಏನೆಂದರೆ :
“ಇಷ್ಟಲಿಂಗದೊಳಗೆ ಏನಿದೆ? ಒಳಗಿರುವ ಮುಖ್ಯ ವಸ್ತುವು ಸ್ಥಾವರ ಲಿಂಗದ ರೂಪವೇ ಆಗಿದೆ, ಹೀಗಿರುವಾಗ.. ನೀವು ಸ್ಥಾವರ ಲಿಂಗವನ್ನು ಯಾಕೆ ನಿರಾಕರಿಸುತ್ತೀರಿ? ಸ್ಥಾವರ ಲಿಂಗವನ್ನು ಬಿಟ್ಟು ಇಷ್ಟಲಿಂಗವನ್ನು ತಯಾರಿಸಿಲ್ಲ.!”
ಹೀಗೆ ಈ ಶೈವವಾದಿಗಳ ವಾದ., ಈ ಬುದ್ಧಿವಂತರಿಗೆ ಉತ್ತರವನ್ನು ಮೊದಲಿಗೆ ಹೀಗೆ ಕೊಡಬೇಕು :
“ಮಾನವ ಮಲ ಮೂತ್ರ ಸೇವಿಸಬಾರದು! ಇದನ್ನು ಒಪ್ಪುವಿರಾ? ಹಾಗಿದ್ದರೆ.. ಹೊಟ್ಟೆಯಲ್ಲಿ ಮಲ ಮೂತ್ರ ಇದೆಯಲ್ಲ? ತಾಯಿಯ ಗರ್ಭದಲ್ಲಿ ಇದ್ದಾಗ ನಿನ್ನ ಸುತ್ತಲೂ ಮಲ ಮೂತ್ರವೇ ಇತ್ತಲ್ಲ? ಈಗ ಮಲ ಮೂತ್ರ ಸೇವಿಸಲು ನಿನಗೆ ಆತಂಕವೇನು? ಮಲ ಮೂತ್ರ ಇಲ್ಲದೇ ನೀನೇ ಇಲ್ಲ!” ಇದು ಸಾಧ್ಯವೇ?
ಇನ್ನು ವಾಸ್ತವ ಉತ್ತರ ನೋಡೋಣ :
ಲಿಂಗಾಯತರ ಮೇಲೆ ಶೈವರ ಪ್ರಭಾವ ತುಂಬಾ ಬೀರಿದೆ ಎಂಬುದು ಸುಳ್ಳಲ್ಲ, ಲಿಂಗವನ್ನು ತಯಾರಿಸುವಾಗ, ಲಿಂಗದ ಒಳಗೆ ಪೀಟವನ್ನು ಇಡುತ್ತಾರೆ, ಈ ಪೀಟವು ಚಂದ್ರಕಾಂತ ಶಿಲೆಯಿಂದ ಕೆತ್ತಲ್ಪಟ್ಟಿದೆ, ಲಿಂಗ ತಯಾರಕರು ಈ ಪೀಟವನ್ನು ಸ್ಥಾವರ ಲಿಂಗದ ಆಕಾರದಲ್ಲಿ ಕೆತ್ತುತ್ತಾರೆ, ಇದನ್ನು ಸ್ಥಾವರ ಲಿಂಗದ ಆಕಾರ ಕೊಡುವ ಅಗತ್ಯವಿಲ್ಲ.! ಗೋಲಾಕಾರದಲ್ಲಿ ಕೆತ್ತನೆ ಮಾಡಿ ಇಡಬಹುದು.. ಈ ಲಿಂಗ ತಯಾರಕರಿಗೆ ಹೀಗೇ ಸ್ಥಾವರ ಲಿಂಗದ ಆಕಾರ ನೀಡಬೇಕು, ಇಲ್ಲದೇ ಹೋದರೆ ನೀನು ತಯಾರಿಸಿದ ಇಷ್ಟ ಲಿಂಗವನ್ನು ಯಾರೂ ಖರೀದಿಸುವುದಿಲ್ಲ, ಅದು ಸೂಕ್ತ ಕ್ರಮವಲ್ಲ.! ಎಂದು ಹೆದರಿಸಿದ್ದಾರೆ ಅಷ್ಟೇ…
ಅಷ್ಟಕ್ಕೂ.. ನಮಗೆ ಇಷ್ಟಲಿಂಗ ಮುಖ್ಯವೇ ಹೊರತು, ಒಳಗೆ ಕಾಣದೇ ಇರುವ ವಸ್ತುವಿನ ಆಕಾರವಲ್ಲ! ಇಂತಹ ಎಡಬಿಡಂಗಿಗಳ ಮಾತಿಗೆ ಕಿವಿಗೊಡಬೇಡಿ, ಇಷ್ಟಲಿಂಗವನ್ನು ಧರಿಸಿದ ನಂತರ…
ಕಟ್ಟಿದ ಲಿಂಗವ ಬಿಟ್ಟು
ಬೆಟ್ಟದ ಲಿಂಗಕ್ಕೆ ಹೋಗಿ
ಅಡಿಮೇಲಾಗಿ ಬೀಳುವ
ಲೊಟ್ಟೆಮೂಳರ ಕಂಡಡೆ
ಗಟ್ಟಿ ಪಾದರಕ್ಷೆಯ ತೆಗೆದುಕೊಂಡು
ಲೊಟಲೊಟನೆ ಹೊಡೆಯೆಂದಾತ
ಅಂಬಿಗರ ಚೌಡಯ್ಯ.
-ಅಂಬಿಗರ ಚೌಡಯ್ಯ.
ಎಂದು ಹೇಳುತ್ತಾ, ಈ ವಿಷಯವನ್ನು ಮುಗಿಸುತ್ತೇನೆ.