ದಿವಾನ್ ರಂಗಾಚಾರಲು ಕಾಲದಲ್ಲಿ ಲಿಂಗಾಯತರು ಶೂದ್ರರಾದರು

ಕುಮಾರಣ್ಣ ಪಾಟೀಲ್
ಕುಮಾರಣ್ಣ ಪಾಟೀಲ್

ಇತಿಹಾಸದಲ್ಲಿ ದಾಖಲಾದ ಮಾಹಿತಿ

1871 ರವರೆಗೂ ಬ್ರಿಟಿಷರ ಮೈಸೂರು ಪ್ರಾಂತ್ಯದಲ್ಲಿ ಲಿಂಗಾಯತವು ಸ್ವತಂತ್ರ ಧರ್ಮ ಎಂದು ಮಾನ್ಯತೆ ಪಡೆದಿತ್ತು.

1871 ರ ಜನಗಣತಿಯಲ್ಲಿ ಲಿಂಗಾಯತ ಧರ್ಮದ ಪಟ್ಟಿಯಲ್ಲಿ ಪಂಚಾಚಾರ ಮತ್ತು ಆರಾಧ್ಯ ಜಾತಿಗಳನ್ನು ಉಪಜಾತಿಗಳೆಂದು ತೋರಿಸಲಾಗಿತ್ತು, ವೀರಶೈವ ಜಾತಿ ಪಟ್ಟಿಯಲ್ಲೇ ಇರಲಿಲ್ಲ.

1881 ರಲ್ಲಿ ಮೈಸೂರು ಪ್ರಾಂತ್ಯದ ಜನಗಣತಿಯು ಸಂಸ್ಥಾನದ ದಿವಾನರಾಗಿದ್ದ ಶ್ರೀವೈಷ್ಣವ ಬ್ರಾಹ್ಮಣರಾದ ಸಿ. ರಂಗಾಚಾರಲು ಅವರ ನೇತೃತ್ವದಲ್ಲಿ ನಡೆಯಿತು.

ಗಣತಿಯಲ್ಲಿ ಲಿಂಗಾಯತವನ್ನು ಪುನರ್ವರ್ಗೀಕರಿಸಿ ಶೂದ್ರರೆಂದು ಪ್ರತ್ಯೇಕ ಗುಂಪಾಗಿ ಪರಿಗಣಿಸಲಾಗಿತ್ತು, ಇದರಿಂದ ಲಿಂಗಾಯತದ ಮೇಲ್ಜಾತಿಯ ವೀರಶೈವರು, ಆರಾಧ್ಯರು ಕೋಪಗೊಂಡರು.

ಲಿಂಗಾಯತರನ್ನು ಬ್ರಾಹ್ಮಣರಿಗಿಂತ ಕಡಿಮೆ ಮಾಡಿ ಅವಮಾನ ಮಾಡಲಾಗಿದೆ ಎಂದು ಸಮುದಾಯಕ್ಕೆ ಸಂದೇಶವನ್ನು ನೀಡಿದರು. ಬ್ರಾಹ್ಮಣರಿಗಿಂತ ತಾವೇನು ಕಮ್ಮಿ ಇಲ್ಲವೆಂದು ಜನಗಣತಿಯ ವಿರುದ್ಧ ಜನಾಂದೋಲನ ಪ್ರಾರಂಭಿಸಿದರು.

ಕೆಲವು ಮಠಾಧೀಶರೂ ಇದರಲ್ಲಿ ಪಾಲ್ಗೊಂಡರು.

ಸರಕಾರದ ಮುಂದೆ ಎರಡು ಬೇಡಿಕೆಯನ್ನು ಇಟ್ಟರು.

1) ಲಿಂಗಾಯತರನ್ನು ಶೂದ್ರ ಪಟ್ಟಿಯಿಂದ ಕೈಬಿಡಬೇಕು.

2) ತಮಗೆ ಬ್ರಾಹ್ಮಣರೆಂದು ಮಾನ್ಯತೆ ನೀಡಬೇಕು.

ಅನಕ್ಷರಸ್ತರಾಗಿದ್ದ ಉಳಿದ ಲಿಂಗಾಯತರಿಗೆ ಇದು ಅರ್ಥವಾಗದೆ ಬೆಂಬಲ ನೀಡಿದರು.

ಅಂದು ಆಸ್ಥಾನದ ಪಂಡಿತರಾಗಿದ್ದ. ಪಿ. ಆರ್ ಕರಿಬಸವ ಶಾಸ್ತ್ರಿ ಅವರು ತಮ್ಮ ಸಮುದಾಯದ ಮೇಲ್ಸ್ತರದ ಲಿಂಗಾಯತರನ್ನು ವೀರಶೈವ ಬ್ರಾಹ್ಮಣರೆಂದು ಪರಿಗಣಿಸಬೇಕೆಂದು ಮೈಸೂರು ಮಹಾರಾಜರ ಮನವೊಲಿಸುವಲ್ಲಿ ಯಶಸ್ವಿಯಾದರು.

ಮಹಾರಾಜರು ಇವರ ಒತ್ತಾಯಕ್ಕೆ ಮಣಿದು ಲಿಂಗಾಯತರು ತಮ್ಮನ್ನು ವೀರಶೈವ ಬ್ರಾಹ್ಮಣರೆಂದು ಜನಗಣತಿಯಲ್ಲಿ ಬರೆಸಬಹುದೆಂದು ಆದೇಶ ನೀಡಿದರು.

ವೀರಶೈವರಿಗೆ ಬ್ರಾಹ್ಮಣರೆಂದು ಕರೆದುಕೊಳ್ಳುವ ಅವಕಾಶ ನೀಡಲಾಯಿತು, ಇಲ್ಲಿಗೆ ಲಿಂಗಾಯತರ (ವೀರೇಶೈವರ) ಹೋರಾಟ ಕೊನೆಗೊಂಡಿತು. ಆದರೆ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಕಳೆದುಕೊಂಡಿತು

ಸರ್ಕಾರದ ಆದೇಶದಿಂದ ಬ್ರಾಹ್ಮಣ ಪದವಿ ಪಡೆದ ವೀರಶೈವರು ಮಂದಿರಗಳಲ್ಲಿ ಬ್ರಾಹ್ಮಣರಿಗೆ ಸಮಾನರಾಗಿ ಪೂಜಾರಿಕೆ ಮಾಡುವ ಅವಕಾಶ ಪಡೆದುಕೊಂಡರು.

ವೀರಶೈವರನ್ನು ತಮ್ಮ ಸಮಾನರೆಂದು ಬ್ರಾಹ್ಮಣರು ಈಗಲೂ ನೋಡುವುದಿಲ್ಲ, ಅವರನ್ನು ಶೂದ್ರ ಎಂದೆ ಪರಿಗಣಿಸುತ್ತಾರೆ.

ಲಿಂಗಾಯತದಲ್ಲಿ ಇದ್ದು ವೈದಿಕ ಆಚರಣೆಗಳನ್ನು ಮುಂದುವರೆಸಿಕೊಂಡು ಬಂದರು. ವೀರಶೈವ ಮೊದಲೆ ಇತ್ತು ಎಂದು ವಿತಂಡವಾದ ಮಾಡುತ್ತ ಲಿಂಗಾಯತಕ್ಕೆ ಸ್ವತಂತ್ರ ಧರ್ಮ ಮಾನ್ಯತೆ ಪಡೆಯಲು ಅಡ್ಡಿಯಾಗಿ ಮಗ್ಗಲು ಮುಳ್ಳಾಗಿದ್ದಾರೆ.

ಅನೇಕ ಸಂಶೋಧಕರು ಲಿಂಗಾಯತವು ಸ್ವತಂತ್ರ ಧರ್ಮ ಎಂದು ಐತಿಹಾಸಿಕ ದಾಖಲೆಗಳ ಸಮೇತ ಸಿದ್ಧಪಡಿಸಿದ್ದಾರೆ, ಅದನ್ನು ನಾವು ನಂಬಬೇಕೆ ಹೊರತು ಯಾವುದೋ ಒಂದು ಪೀಠದಲ್ಲಿ ಕುಳಿತು ವೀರಶೈವ ಮೊದಲೇ ಇತ್ತು ನಾವು ಹೇಳಿದ್ದೇ ಸತ್ಯ ಎನ್ನುವ ಸ್ವಾಮಿಗಳ ಮಾತಿಗಾಗಲಿ, ರಾಜಕಾರಿಣಿಗಳ ಮಾತಿಗಾಗಲಿ ಬೆಲೆ ಕೊಡಬಾರದು.

ಈ ಮಾಹಿತಿಯನ್ನು ಕೆಳಗಿನ ಗ್ರಂಥಗಳಿಂದ ಆಯ್ದುಕೊಂಡಿದೆ.

ಲಿಂಗಾಯತ ಸ್ವತಂತ್ರ ಧರ್ಮ.

– ಡಾ. ಎಂ ಎಂ ಕಲಬುರ್ಗಿ.

ಮೈಸೂರು ವೀರಶೈವರ 1890ರ ಚಳುವಳಿ ಮತ್ತು ಅದರ ದೀರ್ಘಕಾಲ ಪರಿಣಾಮಗಳು.

– ಡಾ. ಎಸ್ ಎಂ ಜಮಾದಾರ್.

ಕನ್ನಡಕ್ಕೆ ಡಾ. ಜೆ.ಎಸ್. ಪಾಟೀಲ

ಮೈಸೂರು ರಾಜ್ಯದ ಹಳೆ ಜನಗಣತಿಗಳು – ಲಿಂಗಾಯತರು ಮತ್ತು ಚಾತುರ್ವರ್ಣ ನಂಬಿಕೆ.

– ಡಾ. ವಿಜಯಕುಮಾರ್ ಎಮ್. ಬೋರಟ್ಟಿ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ https://chat.whatsapp.com/BvguxN7Z0AG9g7Il7l5Lzh

Share This Article
1 Comment
  • ತಮ್ಮೆಲ್ಲರ ಹೇಳಿಕೆಗಳು ಬಹಳ ಪ್ರಸ್ತುತವಾಗಿವೆ. ಲಿಂಗಾಯತವನ್ನು ಶೂದ್ರರಾಗಿ ಬಿಂಬಿಸುವ ಹುನ್ನಾರದಿಂದ ಸ್ವತಂತ್ರ ಧರ್ಮಕ್ಕೆ ಮಾನ್ಯತೆಯನ್ನು ತಡೆಹಿಡಿದಿರುವ ಪಂಚ ಪೀಠ, ಪುರೋಹಿತಶಾಹಿ, ಅರಮನೆ, ಗುರು ಮನೆಯವರು ಜನರನ್ನು ಗುಲಾಮರನ್ನಾಗಿ ಆಳುತ್ತಿದ್ದಾರೆ. ಅವರಿಗೆ ಮಾತ್ರವಲ್ಲ ಬಸವ ಧರ್ಮವನ್ನು ಅವಹೇಳನ ಮಾಡುವ ಮೂಲಕ ಸರಕಾರದ ಮಾನ್ಯತೆ ನೀಡುವ ಎಲ್ಲ ರೀತಿಯ ನಿರ್ಣಯಗಳನ್ನು ಜಾಗತಿಕ ಲಿಂಗಾಯತ ಮಹಾ ಸಭೆ ಕೈಗೊಳ್ಳಲಿ. ದೇವರು ಎಲ್ಲರಿಗೆ ಒಳ್ಳೆಯದು ಮಾಡಲಿ.

Leave a Reply

Your email address will not be published. Required fields are marked *