ಬಳ್ಳಾರಿ:
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಬಳ್ಳಾರಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆ ವಿವಾದಕ್ಕೆ ತಿರುಗಿದೆ.
ಚುನಾವಣೆಯಲ್ಲಿ ಸ್ಪರ್ದಿಸುತ್ತಿರುವ ಅಭ್ಯರ್ಥಿ ಪಂಚಾಕ್ಷರಪ್ಪ ಅವರ ಬೆಂಬಲಿಗ ಕೋಳೂರು ಚಂದ್ರಶೇಖರಗೌಡ ಅವರು ಪತ್ರಿಕಾಗೋಷ್ಠಿ ನಡೆಸಿ ಹಾಲಿ ಮಹಾಸಭಾದ ಅಧ್ಯಕ್ಷ ಚಾನಳ್ ಶೇಖರ್ ಅವರು ವೀರಶೈವ ಲಿಂಗಾಯತರಲ್ಲದವರಿಗೆ ಸದಸ್ಯತ್ವ ನೀಡಿದ್ದಾರೆ ಎಂಬ ಆರೋಪ ಮಾಡಿದ್ದಾರೆ.
ಅಲ್ಲದೇ ಈ ವಿಷಯವಾಗಿ ಚುನಾವಣೆಯ ದಿನ ಮತಗಟ್ಟೆಯಲ್ಲಿ ಘರ್ಷಣೆಯಾಗಬಹುದೆಂಬ ಎಂಬ ಆತಂಕ ಕೂಡ ವ್ಯಕ್ತ ಪಡಿಸಿದ್ದಾರೆ.
ಇದಕ್ಕೆ ವಿರುದ್ಧವಾಗಿ ಬೈಲೂರು ಗ್ರಾಮಸ್ಥರು ಚುನಾವಣಾ ಅಧಿಕಾರಿಗೆ ಮತ್ತು ಕುರುಗೋಡು ಪೋಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಈ ಆರೋಪದಿಂದ ಮಹಸಭಾದ ಸದಸ್ಯರುಗಳ ತೇಜೋವಧೆ ಮತ್ತು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿರುವುದರಿಂದ ಅವರೆಲ್ಲರ ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ಕೋರಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭಾ ನಿಯಮಾವಳಿಯನ್ವಯ ವೀರಶೈವ ಲಿಂಗಾಯತರು, ಲಿಂಗವಂತರು ಮತ್ತು ಲಿಂಗಧಾರಿಗಳೆಲ್ಲರು ಮಹಾಸಭಾ ಸದಸ್ಯರಾಗಬಹುದು. ವೀರಶೈವ ಲಿಂಗಾಯತ ಧರ್ಮದ ಸಿದ್ಧಾಂತವನ್ನು ಒಪ್ಪಿ ಬರುವ ಲಿಂಗಾಧಾರಿಗಳು ಸಹ ಮಹಾಸಭಾದ ಸದಸ್ಯರಾಗಬಹುದಾಗಿದೆ, ಎಂದು ದೂರಿನಲ್ಲಿ ಹೇಳಲಾಗಿದೆ.