ಅನುಭಾವಿ ಅಶೋಕ ಬರಗುಂಡಿ ಅವರು ವಚನಗಳು, ಬಸವಾದಿ ಶರಣತತ್ವದ ಪ್ರಕಾರ ದಾಂಪತ್ಯ ಉತ್ಸವ ನೆರವೇರಿಸಿದರು. ದಂಪತಿಗಳಿಗೆ ಭಾವೋದಕ ಸಿಂಪರಣೆ, ಭಸ್ಮಧಾರಣೆ, ರುದ್ರಾಕ್ಷಿ ಕಂಕಣ ಕಟ್ಟಿಸಿ, ಹಾರ ವಿನಿಮಯ ಮಾಡಿಸಿದರು.
ವಿಜಯಪುರ
ವಿಜಯಪುರದ ಶರಣ ಚಿಂತಕ ಡಾ. ಜೆ.ಎಸ್. ಪಾಟೀಲ ಹಾಗೂ ಪ್ರತಿಭಾ ಪಾಟೀಲ ಮತ್ತು ರಾಹುಲ ಬೆಳಮಕರ ಹಾಗೂ ಪ್ರೇಮಾ ಬೆಳಂಕರ ಅವರುಗಳ 25ನೇ ವಾರ್ಷಿಕ ಶರಣ ದಾಂಪತ್ಯ ಉತ್ಸವ, ಮಕ್ಕಳಿಬ್ಬರ ಲಿಂಗದೀಕ್ಷೆ ಹಾಗೂ ಶಾಲು ಹೊದಿಸುವ ಸಮಾರಂಭ ಕಳೆದ ಶುಕ್ರವಾರ ಸಂಜೆ ನಗರದ ವಿಜಯಪುರದ ಲಿಂಗಾಯತ ಸಾಂಸ್ಕೃತಿಕ ಭವನದಲ್ಲಿ ನಡೆಯಿತು.

ಆರಂಭದಲ್ಲಿ ಬಸವ ಧ್ವಜಾರೋಹಣವನ್ನು ಹಿರಿಯ ಶರಣಜೀವಿ ಶಿವಪುತ್ರಪ್ಪ ಸಂಗೊಳಗಿ ನೆರವೇರಿಸಿದರು. ಬಸವಧ್ವಜ ಗೀತೆಯನ್ನು ವಚನಮೂರ್ತಿ ಅಶೋಕ ಬರಗುಂಡಿ ಶರಣರು ಎಲ್ಲರಿಗೂ ಹಾಡಿಸಿದರು. ಸಂವಿಧಾನ ಪೀಠಿಕೆಯನ್ನು ಶರಣ ನಿವೃತ್ತ ಪ್ರಾಚಾರ್ಯರಾದ ಎಸ್.ಎಸ್. ಚೋರಗಿ ಎಲ್ಲರಿಗೂ ಓದಿಸಿದರು.

ಅನುಭಾವಿ ಅಶೋಕ ಬರಗುಂಡಿ ಅವರು ವಚನಗಳು, ಬಸವಾದಿ ಶರಣತತ್ವದ ಪ್ರಕಾರ ದಾಂಪತ್ಯ ಉತ್ಸವ ನೆರವೇರಿಸಿದರು. ದಂಪತಿಗಳಿಗೆ ಭಾವೋದಕ ಸಿಂಪರಣೆ, ಭಸ್ಮಧಾರಣೆ, ರುದ್ರಾಕ್ಷಿ ಕಂಕಣ ಕಟ್ಟಿಸಿ, ಹಾರ ವಿನಿಮಯ ಮಾಡಿಸಿದರು. ಎಂ.ಎಂ. ಕಲಬುರ್ಗಿಯವರು ಬರೆದ ವಚನ ವಿವಾಹ ಪಂಚಕ ಪಠಿಸುತ್ತ ದಂಪತಿಗಳಿಗೆ ಪುಷ್ಪವೃಷ್ಟಿ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಮಕ್ಕಳಾದ ಡಾ.ಶ್ರೀಶಾಂತ ಪಾಟೀಲ ಹಾಗೂ ಸುಶಾಂತ ಪಾಟೀಲ ಅವರಿಗೆ ಅವರ ಅಜ್ಜ ಅಜ್ಜಿಯಂದಿರಾದ ಶಿವಪುತ್ರಪ್ಪ ಸಂಗೊಳಗಿ ಹಾಗೂ ಮಧುಮಾಲತಿ ಸಂಗೊಳಗಿ ಅವರು ಪ್ರೀತಿಯಿಂದ ಶಾಲು ಹೊದಿಸುವ ಕಾರ್ಯ ಮಾಡಿದರು.
ಡಾ. ಜೆ.ಎಸ್. ಪಾಟೀಲ ಅವರು ಬರೆದ ‘ವಚನ ವ್ಯಾಸಂಗ: ಒಳನೋಟ’ ಪುಸ್ತಕವನ್ನು ಡಾ. ಮಹಾಂತೇಶ ಬಿರಾದಾರ ಬಿಡುಗಡೆ ಮಾಡಿ ಮಾತನಾಡಿದರು.

ಮನಗೂಳಿ ವಿರಕ್ತಮಠದ ಪೂಜ್ಯ ವಿರತೀಶಾನಂದ ಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಇದೊಂದು ಮಾದರಿ ಕಾರ್ಯಕ್ರಮ. ಲಿಂಗಾಯತ ತತ್ವಾಚರಣೆಯಂತೆ ಎಲ್ಲರೂ ನಡೆಯಲಿ ಎಂದು ಹಾರೈಸಿದರು.
ಬೆಳಿಗ್ಗೆ ಜೆ.ಎಸ್ ಪಾಟೀಲರ ಸ್ವಗೃಹದಲ್ಲಿ ಚಿತ್ತರಗಿ-ಇಳಕಲ್ಲ ವಿಜಯ ಮಹಾಂತೇಶ್ವರ ಮಠದ ಪೂಜ್ಯ ಗುರುಮಹಾಂತ ಸ್ವಾಮಿಗಳು ಮಕ್ಕಳಿಗೆ ಇಷ್ಟಲಿಂಗ ದೀಕ್ಷೆ ನೆರವೇರಿಸಿದರು. ನಂತರ ಇಷ್ಟಲಿಂಗ ದೀಕ್ಷೆಯ ಮಹತ್ವ ಹಾಗೂ ಲಿಂಗಾನುಸಂಧಾನ ಕುರಿತು ಸ್ವಾಮೀಜಿ ಅನುಭಾವಗೈದರು.

ಶರಣ ಪ್ರಭುದೇವ ಪಾಟೀಲ ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಷ್ಟ್ರೀಯ ಬಸವ ಸೇನಾದ ರವಿ ಬಿರಾದಾರ, ಉದ್ಯಮಿ ಹನುಮಂತ ಚಿಂಚಲಿ, ಕೆಪಿಸಿಸಿ ವಕ್ತಾರ ಶ್ರೀನಿವಾಸ ಪೂಜಾರ, ದಸಂಸ ಚನ್ನು ಕಟ್ಟಿಮನಿ, ಹಿರಿಯ ಪತ್ರಕರ್ತ ಅನಿಲ ಹೊಸಮನಿ, ಲಿಂ.ಮಹಾಸಭಾದ ಪ್ರಕಾಶ ಕಾಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಸುಜಾತ ಕಳ್ಳಿಮನಿ, ಸೋಮನಾಥ ಕಳ್ಳಿಮನಿ, ಡಾ. ಸ್ಪೂರ್ತಿ ಹಾಗೂ ಪ್ರಮೋದ ಸಂಗೊಳಗಿ ಡಾ. ಮಂಜುನಾಥ ಹಂಜಗಿ, ಡಾ. ರಾಕೇಶ ಬೆಳಮಕರ, ಪಲ್ಲವಿ, ಪ್ರವೀಣ ಸಂಗೊಳಗಿ, ಪಾಟೀಲ ಕುಟುಂಬದ ಬಂಧುಗಳು-ಮಿತ್ರರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸಮಾರಂಭಕ್ಕೆ ಬಂದ ಎಲ್ಲರಿಗೂ ವಚನ ಪುಸ್ತಕ ವಿತರಣೆ ಮಾಡಲಾಯಿತು. ಬಂದಂತಹ ಶರಣ ಬಂಧು-ಮಿತ್ರರು ದಂಪತಿಗಳಿಗೆ ಹಾರೈಕೆ, ಉಡುಗೊರೆ ನೀಡಿದರು. ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಬಸವ ತತ್ವ ನಿಜಾಚರಣೆಯಲ್ಲಿ ನಡೆದ ಈ ಕಾರ್ಯಕ್ರಮ ಅನುಕರಣೀಯ ,ಈ ರೀತಿಯಾಗಿ ಮಕ್ಕಳಿಗೆ ಸಂಭಂದಿಕರಿಗೆ ಯುವಕರಿಗೆ ಇಷ್ಟಲಿಂಗ ದೀಕ್ಷೆ ಮಾಡಿಸುವ ಮೂಲಕ ನಾವು ಆಚರಣೆಗಳನ್ನು ಸಂಸ್ಕಾರವನ್ನು ಮುಂದಿನ ಪೀಳಿಗೆಗೆ ಹೇಳಿಕೊಡಬೇಕು , ಅರ್ಥಪೂರ್ಣ ಆಚರಣೆ. ಅಭಿನಂದನೆಗಳು
ಚೆಂದದ ಕಾರ್ಯಕ್ರಮ.
ಶರಣ ಜೆ ಎಸ್ ಪಾಟೀಲ್ ದಂಪತಿಗಳಿಗೆ ಹಾರ್ದಿಕ ಶುಭಾಶಯಗಳು.
ಶರಣು ಶರಣಾಥಿ೯
ಬಸವಾದಿ ಶರಣರಾದ ಜೆಎಸ್ ಪಟೇಲ್ ದಂಪತಿಗಳಿಗೆ ಹಾರ್ದಿಕವಾದ ಶುಭಾಶಯಗಳು
J S ಪಾಟೀಲ ಶರಣ ದಂಪತಿಗಳಿಗೆ ಶರಣು ಶರಣಾಥ೯ಗಳು🌹💐🙏
Many many happy marriage anniversary.
Many many congratulations to the shran dampati. Mr,J,S,Patil for marriage aniversary shalu. Hodike,andLLing. Deeksha programme