ಬಳ್ಳಾರಿ
ಬಳ್ಳಾರಿಯ ಎರಡು ಶರಣ ಕುಟುಂಬಗಳು ತಾವು ಸಾಂಪ್ರದಾಯಕವಾಗಿ ಪೂಜಿಸುತ್ತಿದ್ಧ ದೇವರುಗಳನ್ನು ತೆರವುಗೊಳಿಸಿದರು.
ಇವರೇ ಬಳ್ಳಾರಿ ನಗರದ ನಾಗಲಿಂಗಪ್ಪ, ರಾಜೇಶ್ವರಿ ಮತ್ತು ಬಳ್ಳಾರಿ ಗ್ರಾಮಾಂತರದ ಪಂಪಾಪತಿ, ಪಾರ್ವತಮ್ಮ ದಂಪತಿಗಳು.
ಈ ದಂಪತಿಗಳು ಸ್ವತಃ ತಾವೇ ನಿಶ್ಚಯಿಸಿಕೊಂಡು, ತಮ್ಮ ಮನೆಯ ಸದಸ್ಯರ ಒಮ್ಮತ ಪಡೆದುಕೊಂಡು ಲಕ್ಷ್ಮಿ-ಗಣಪ-ಸರಸ್ವತಿ, ರಾಘವೇಂದ್ರ, ವೀರಭದ್ರ ಫೋಟೋಗಳು, ನಂದಿ, ಈಶ್ವರ, ದೇವಿ ಮೂರ್ತಿಗಳನ್ನು ಜಗಲಿಯಿಂದ ತೆರವುಗೊಳಿಸಿದರು.


ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಬಸವಣ್ಣನವರಿಗೆ ಜೈಕಾರ ಹಾಕುತ್ತ ಧರ್ಮ ಗುರುಗಳ ಭಾವಚಿತ್ರ, ಮೂರ್ತಿ ಹಾಗೂ ವಚನ ಪುಸ್ತಕವನ್ನು ಕುಟುಂಬ ಸದಸ್ಯರು ಹೊತ್ತುಕೊಂಡು, ಹೊರಗಡೆಯಿಂದ ಮನೆಯ ಪ್ರವೇಶ ಮಾಡಿ, ಅವುಗಳನ್ನೆಲ್ಲ ಮನೆಯ ಜಗುಲಿಯ ಮೇಲೆ ಪ್ರತಿಷ್ಠಾಪಿಸಿದರು.


ಇನ್ನು ಮುಂದೆ ಲಿಂಗಾಯತ ಧರ್ಮದ ಕಡ್ಡಾಯ ಆಚರಣೆಗಳಾದ ಇಷ್ಟಲಿಂಗ ಏಕದೇವೋಪಾಸನೆ ಹಾಗೂ ಬಸವಗುರುವಿನ ಪೂಜೆಯನ್ನು ಮಾತ್ರ ಮಾಡುವ ದಿಟ್ಟ ನಿರ್ಧಾರ ಕೈಗೊಂಡಿರುವುದಾಗಿ ದಂಪತಿಗಳು ಹೇಳಿದರು.
“ಪೂಜ್ಯ ನಿಜಗುಣ ಸ್ವಾಮೀಜಿಗಳ ಪ್ರವಚನ ಕೇಳಿದ ಮೇಲೆ ಪರಿವರ್ತನೆಯಾದೆವು. ಬಸವಣ್ಣ, ಲಿಂಗದ ಮೇಲೆ ತಿಳಿದುಕೊಂಡ ಮೇಲೆ ಕಾಲ್ಪನಿಕ ದೇವರುಗಳಿಂದ ಏನೂ ಪ್ರಯೋಜನವಿಲ್ಲವೆಂದು ಅರಿವಾಯಿತು,” ಎಂದರು.
ಎಸ್. ಶಿವಕುಮಾರ, ಅಂದ್ರಾಳ ಘಟಕದ ರಾಷ್ಟ್ರೀಯ ಬಸವದಳ ಅಧ್ಯಕ್ಷರು, ಕಾರೇಕಲ್ಲು ಬಸನಗೌಡರು, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಉಪಾಧ್ಯಕ್ಷರು, ಇವರ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆದವು.

ಹೆಚ್. ಗಾಳೇಶಪ್ಪ, ಶಿಡಿಗಿನಮೊಳೆ ಪಂಪಾಪತಿ, ಚಿಂತೆಕುಂಟ ಪಂಪಾಪತಿ, ಇಬ್ರಾಹಿಂಪುರದ ಗಾದಿಲಿಂಗಪ್ಪ ಮತ್ತು ರಾಷ್ಟ್ರೀಯ ಬಸವ ದಳ ಮತ್ತು ಜಾಗತಿಕ ಲಿಂಗಾಯತ ಮಹಾಸಭಾ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಪ್ಪ ಬಸವಣ್ಣನವರು ನಿಮ್ಮಿಷ್ಟಾರ್ತಸಿದ್ಧಿ ನೆರವೇರಿಸಲಿ ಹಾಗೂ ಸಕಲ ನಾಡಿನ ಮಾನವರು ಬಸವಣ್ಣನವರ ತತ್ವಗಳನ್ನು ಅಳವಡಿಸಿಕೊಂಡು ನೆಮ್ಮದಿ ಆಗಿರಲಿ ಎಂದು ಸೃಷ್ಟಿಕರ್ತ ಪರಮಾತ್ಮನಲ್ಲಿ ಬೇಡಿಕೊಳ್ಳುತ್ತೇವೆ ಶರಣು ಶರಣಾರ್ಥಿ
ಶರಣು ಶರಣಾರ್ಥಿ ಗಳು ಎಲ್ಲರಿಗೂ 🙏💐 ಮತ್ತೆ ಕಲ್ಯಾಣ ಪರ್ವ ಪ್ರಾರಂಭವಾಗಿದೆ, ಜಾಗೃತರಾಗಿ ಶರಣರೇ ,,ಲಿಂಗವಂತ (ಬಸವ ಧರ್ಮ )ದೊಡ್ಡ ಧರ್ಮ ಆಗುವ ಹಾಗೇ ನಾವೆಲ್ಲರೂ ಪಣ ತೊಟ್ಟು ನಿಲ್ಲೋಣ , ಜೈ ವಿಶ್ವ ಗುರು ಅಪ್ಪ ಬಸವಣ್ಣ 🙏🙏🙏
ಶರಣರೇ ಅನಂತ ಶರಣುಗಳು
ನಾನೂ 20 ವರ್ಷದ ಹಿಂದೆ ಕಾಲ್ಪನಿಕ ದೇವತೆಗಳನ್ನ ತೆಗೆದೆ
ಅನೇಕರು ಹೆದರಿಸಿದರು ಇಷ್ಟಲಿಂಗ ಧರಿಸಿದಂದಿನಿಂದ ನನಗೆ ಎಲ್ಲ ದಿನಗಳು ಶುಭದಿನಗಳಾಗಿವೆ.
ಹೆದರದಿರಿ
ದುಷ್ಟರನ್ನು ಬಿಲ್ಲು- ಬಾಣ, ಗದೆ – ಚಕ್ರಗಳಿಂದ ಇಲ್ಲವೇ ಎದೆಯ ಮೇಲೆ ಒದ್ದು ಮೋಸದಿಂದ ಕೊಲ್ಲುವ ದೇವತೆಗಳಿಗಿಂತ
ಕಳ್ಳನನ್ನು, ಸೂಳೆತನ, ಹೆಂಡ ಮಾರುವವರನ್ನು ಪರಿವರ್ತಿಸಿ ದೇವತಾ ಸ್ಥಾನಕ್ಕೆರಿಸಿದ ಬಸವಣ್ಣನಿಗಿಂತ ದೊಡ್ಡ ದೇವರು ಇನ್ನ್ಯಾರಿದ್ದಾರೆ.
🙏🙏
ಒಳ್ಳೆಯದು.
ಆದರೆ ಅಪ್ಪ ಬಸವಣ್ಣನವರ ಮೂರ್ತಿ ಕೇಸರಿ ಬಣ್ಣದ್ದು ಸಲ್ಲದು. ಪಕ್ಕಾ ಸಂಸಾರಿಗಳಾಗಿರುವ ಅವರನ್ನು ಉಡುಗೆ ತೊಡುಗೆಯಲ್ಲಿ ವಿರಕ್ತರಂತೆ ಬಿಂಬಿಸುವುದು ಕೂಡಾ ಖಂಡಿತಾ ಬಸವ ನಡೆ ಅಲ್ಲ.
ಪರಿಶುದ್ಧತೆ ಪ್ರಾಮಾಣಿಕತೆ ಅಪ್ಪ ಬಸವಣ್ಣ ಕಲಿಸುವ ಪ್ರಥಮ ಪಾಠವಾಗಿದೆ ಬಂಧುವೆ. ದಯವಿಟ್ಟು ವಿರಕ್ತರ ವೇಷ ಅಪ್ಪ ಬಸವಣ್ಣರಿಗೆ ಯಾವುದೇ ರೀತಿಯಲ್ಲೂ ಸಲ್ಲುವುದಿಲ್ಲ.
ಬಸವ ಬೆಳಗಿನ ಶರಣು ಶರಣಾರ್ಥಿಗಳು.🌱🙏🏻
💐