ದಾವಣಗೆರೆ:
21ನೇ ಶತಮಾನದಲ್ಲಿ ಮನುಷ್ಯ ಮನುಷ್ಯನಾಗಿ ಉಳಿದಿಲ್ಲ ಯಂತ್ರ ಮಾನವನಾಗಿದ್ದಾನೆ. ಆತನಲ್ಲಿ ಪ್ರಾಮಾಣಿಕತೆ, ಕಾಯಕನಿಷ್ಠೆ, ಶ್ರದ್ಧೆ, ಛಲ ಇಲ್ಲದಂತಾಗಿದೆ. 12ನೇ ಶತಮಾನದ ಶರಣರು ನುಡಿದಂತೆ ನಡೆಯುತ್ತಿದ್ದರು ನಡೆದಂತೆ ನುಡಿಯುತ್ತಿದ್ದರು, ಆದ್ದರಿಂದ ಜಗತ್ತಿನಲ್ಲಿ ವಚನ ಯುಗ ಶ್ರೇಷ್ಠ ಯುಗವಾಗಿದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ಭರಮಪ್ಪ ಮೈಸೂರು ಅಭಿಪ್ರಾಯಪಟ್ಟರು.
ನಗರದ ವಿನ್ನರ್ಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ದಾವಣಗೆರೆ ಜಿಲ್ಲಾ ಯುವ ವೇದಿಕೆ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ದತ್ತಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಂದ ವಚನ ಗಾಯನ ಹಾಡಿಸಲಾಯಿತು ಮತ್ತು ಪೂರ್ವಭಾವಿಯಾಗಿ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ವಿಷಯ ಕುರಿತು ಏರ್ಪಡಿಸಿದ ಪ್ರಬಂಧದ ಸ್ಪರ್ದೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಕೆ.ಬಿ. ಪರಮೇಶ್ವರಪ್ಪ ಅವರು ವಹಿಸಿದ್ದರು.
ದತ್ತಿ ದಾನಿಗಳಾದ ಎನ್.ಟಿ. ಮಂಜುನಾಥ ಕುಟುಂಬ ವರ್ಗದವರು ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ವೇದಿಕೆ, ಯುವ ವೇದಿಕೆಯ ಪದಾಧಿಕಾರಿಗಳು, ಮಮತಾ ನಾಗರಾಜ, ರುದ್ರಮುನಿ ಆವರಗೆರೆ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಹಾಗೂ ಸ್ವಾಗತವನ್ನು ಡಾ. ಶಿವರಾಜ್ ಕಬ್ಬೂರ ಅಧ್ಯಕ್ಷರು ಯುವ ವೇದಿಕೆ ಅವರು ಮಾಡಿದರು. ಡಾ. ನಾಗರಾಜ ಎಸ್. ಪ್ರಾಂಶುಪಾಲರು ವಿನ್ನರ್ಸ್ ಪ್ರಥಮ ದರ್ಜೆ ಕಾಲೇಜು ದಾವಣಗೆರೆ ಅವರು ವಂದಿಸಿದರು. ಬಿ.ಟಿ ಪ್ರಕಾಶ ಪ್ರಾರ್ಥಿಸಿದರು. ನಿರ್ಮಲಾ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ವಿನ್ನರ್ಸ್ ಅಕಾಡೆಮಿಯ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿನ್ನರ್ಸ್ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.
