ವ್ಯಸನ ಮುಕ್ತ ದಿನಾಚರಣೆ: ಜಮಖಂಡಿಯಲ್ಲಿ ಜನಜಾಗೃತಿ ಜಾಥಾ, ಭಾಷಣ ಸ್ಪರ್ಧೆ

ಜಮಖಂಡಿ

ದುಶ್ಚಟಗಳಿಂದ ಹಾಳಾಗಿ ಹೋಗುತ್ತಿರುವ ಸಮಾಜವನ್ನು ಕಂಡು, ಲಿಂಗೈಕ್ಯ ಪೂಜ್ಯ ಮಹಾಂತ ಅಪ್ಪಗಳು ಎಲ್ಲಾ ಕಡೆ ಸಂಚರಿಸಿ ತಮ್ಮ ಜೋಳಿಗೆಯಲ್ಲಿ ನಿಮ್ಮ ಕೆಟ್ಟ ಚಟಗಳನ್ನು ಹಾಕಿ, ಚಟದಿಂದ ವಿಮುಕ್ತರಾಗಿ. ನಿಮ್ಮ ಕುಟುಂಬ ಉಳಿಸಿರಿ, ಆರೊಗ್ಯಕರ ಸಮಾಜ ಕಟ್ಟಿಕೊಳ್ಳಿ ಎಂಬ ಅರಿವು ಮೂಡಿಸಿದರು ಎಂದು ಉಪನ್ಯಾಸಕ ಡಾ. ಎಚ್.ಡಿ. ದಡ್ಡಿ ಅವರು ಹೇಳಿದರು.

ಕಡಪಟ್ಟಿ ಬಸವೇಶ್ವರ ಪದವಿ ಕಾಲೇಜಲ್ಲಿ ಲಿಂಗೈಕ್ಯ ಮಹಾಂತ ಶ್ರೀಗಳ ಜನ್ಮದಿನಾಚರಣೆ ಅಂಗವಾಗಿ ವ್ಯಸನಮುಕ್ತ ದಿನ, ಅದರ ಕುರಿತು ಶಾಲಾ ಮಕ್ಕಳ ಭಾಷಣ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಧ್ಯಕ್ಯತೆ ವಹಿಸಿದ್ದ ತಹಶೀಲದಾರ ಅವರು, ಸಮಾಜ ಮತ್ತು ವ್ಯಕ್ತಿತ್ವದ ಮೇಲೆ ವ್ಯಸನದಿಂದ ಆಗುವ ಪರಿಣಾಮಗಳ ಬಗ್ಗೆ ವಿವರಿಸಿದರು.

ಸಾನಿದ್ಯ ವಹಿಸಿದ್ದ ಜಮಖಂಡಿ ಓಲೆಮಠದ ಆನಂದ ದೇವರು ಮಾತನಾಡಿ, ನಿಮ್ಮ ಮನೆಗಳಲ್ಲಿ ಯಾರಾದರೂ ದುಶ್ಚಟಗಳನ್ನು ಮಾಡುತ್ತಿದ್ದರೆ, ನೀವೆ ಮೊದಲು ಅವರ ಮನವೊಲಿಸಿ ಬಿಡಿಸಬೇಕೆಂದು ಹೇಳಿದರು. ಲಿಂಗೈಕ್ಯ ಮಹಾಂತ ಶ್ರೀಗಳು ಬಸವತತ್ವ ಪರಿಪಾಲಿಸುತ್ತ, ಬಸವತತ್ವದ ಮಹಾದಂಡನಾಯಕರಾಗಿದ್ದರು ಎಂದರು.

‘ವ್ಯಸನದಿಂದಾಗುವ ಕೆಟ್ಟ ಪರಿಣಾಮಗಳು’ ಈ ವಿಷಯದ ಮೆಲೆ ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಬಸವ ಕೇಂದ್ರದ ಶರಣರ ವಚನ ಪ್ರಾರ್ಥನೆಯೊಂದಿಗೆ ಕಾಯ್ರಕ್ರಮ ಆರಂಭಗೊಂಡಿತು. ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.

ಕಾಯ್ರಕ್ರಮ ಬಸವ ಕೆಂದ್ರ, ಲಿಂಗಾಯತ ಮಾಹಾಸಭಾ, ತಾಲೂಕು ಆಡಳಿತ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಸಹಯೋಗದಲ್ಲಿ ನಡೆಯಿತು. ವಿದ್ಯಾರ್ಥಿಗಳು, ಸಾರ್ವಜನಿಕರಿಂದ ಜನಜಾಗೃತಿ ಜಾಥಾ ನಡೆಯಿತು.

ಶರಣ ಶರಣೆಯರು, ಶಾಲಾ ಮಕ್ಕಳು, ಶಿಕ್ಷಕರು, ಸಾರ್ವಜನಿಕರು, ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗ ಬಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LCPORn7EbNfEBlG1MCXUuM

Share This Article
1 Comment

Leave a Reply

Your email address will not be published. Required fields are marked *