ಜನಪದ ಕಲೆಗೆ ಬಸವರಾಜ ಮಲಶೆಟ್ಟಿ ಅವರ ಕೊಡುಗೆ ಅಪಾರ: ಲಲಿತಾ ಕ್ಯಾಸನ್ನವರ

ಬೆಳಗಾವಿ

ಇಂದು ಜನಪದ ಕಲೆ ನಸಿಸಿ ಹೋಗುತ್ತಿದೆ. ಅದನ್ನು ಉಳಿಸಿಕೊಳ್ಳುವಲ್ಲಿ ಜಾನಪದ ತಜ್ಞ ಬಸವರಾಜ ಮಲಶೆಟ್ಟಿ ಅವರ ಕೊಡುಗೆ ಅಪಾರ ಎಂದು ಬೆಳಗಾವಿ ಶಿಕ್ಷಣ ಇಲಾಖೆಯ ಲಲಿತಾ ಕ್ಯಾಸನ್ನವರ ಹೇಳಿದರು.

ಲಿಂಗಾಯತ ಸಂಘಟನೆ ವತಿಯಿಂದ ಡಾ.ಫ.ಗು. ಹಳಕಟ್ಟಿ ಭವನದಲ್ಲಿ ರವಿವಾರದಂದು ನಡೆದ ಸಾಮೂಹಿಕ ಪ್ರಾಥ೯ನೆ, ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾನಪದ ವಾಧ್ಯಗಳನ್ನು ಸಹ ಪರಿಚಯಿಸಿ ಅವುಗಳ ಕುರಿತಾದ ಕೃತಿಗಳನ್ನು ಮಲಶೆಟ್ಟಿ ರಚಿಸಿದ್ದಾರೆ. ಈಗ ಹಾವೇರಿಯಲ್ಲಿ ಜಾನಪದ ವಿಶ್ವ ವಿದ್ಯಾಲಯ ಪ್ರಾರಂಭಕ್ಕೆ ಅವರು ಪಾತ್ರವಹಿಸಿದ್ದಾರೆ. ಅಲ್ಲಿ ಮಲಶೆಟ್ಟಿ ಅವರು ಬರೆದ ಪುಸ್ತಕಗಳನ್ನು ಮರುಮುದ್ರಣ ಮಾಡುತ್ತಿದ್ದಾರೆ.

ತಿಗಡೊಳ್ಳಿ ಗ್ರಾಮದಲ್ಲಿ ೧೯೪೭ರಲ್ಲಿ ಮರಿಕಲ್ಲಪ್ಪ ಮಲಶೆಟ್ಟಿ ಅವರು ಗಾಂಧೀಜಿ ಅವರ ಚಿತಾಭಸ್ಮ ತಂದು ಅದರಲ್ಲಿ ಆಲದಮರ ನೆಟ್ಟರು. ಅದಕ್ಕಾಗಿ ಅಲ್ಲಿಯ ಜನ ಅದನ್ನು ಗಾಂಧಿಮರ ಅನ್ನುವರು. ಈಗಲೂ ವಿಶೇಷ ದಿನಗಳಲ್ಲಿ ಅದಕ್ಕೆ ಪೂಜೆ ಸಲ್ಲಿಸುತ್ತಾರೆ ಎಂದು ಲಲಿತಾ ಅಭಿಪ್ರಾಯಪಟ್ಟರು.

ಪ್ರಾರಂಭದಲ್ಲಿ ಶರಣ ಸುರೇಶ ನರಗುಂದ ಪ್ರಾಥ೯ನೆ ನಡಿಸಿಕೊಟ್ಟರು. ವಿ.ಕೆ. ಪಾಟೀಲ, ಆನಂದ ಕಕಿ೯, ಜೆ.ಪಿ. ಜವಣಿ, ಸುನೀಲ ಸಾಣಿಕೊಪ್ಪ, ಮಹಾoತೇಶ ಇಂಚಲ, ಬಸವರಾಜ ಗುರನಗೌಡ್ರ, ಬಸವರಾಜ ಬಿಜ್ಜರಗಿ, ಜಯಶ್ರೀ ಚಾವಲಗಿ ಇತರರು ವಚನ ವಿಶ್ಲೇಷಣೆ ಮಾಡಿದರು. ಈರಣ್ಣಾ ದೇಯನ್ನವರ ಅಧ್ಯಕ್ಷತೆ ವಹಿಸಿದ್ದರು.

ಸುರೇಶ ನರಗುಂದ ನಿರೂಪಿಸಿ ವಂದಿಸಿದರು. ಸಂಗಮೇಶ ಬಾಬು ತಿಗಡಿ ದಾಸೋಹ ಸೇವೆಗೈದರು.

ಬಾಬು ಮ. ತಿಗಡಿ, ಸುವಣಾ೯ ತಿಗಡಿ, ಪ್ರಗತಿ ಮ. ಪಾಟೀಲ, ಮಲಗೌಡ ಶಿ. ಪಾಟೀಲ, ಪೂಜಾ ಪಾಟೀಲ, ಶಶಿಭೂಷಣ ಪಾಟೀಲ, ಸದಾಶಿವ ದೇವರಮನಿ, ಶಿವಾನಂದ ತಲ್ಲೂರ ಮತೀತರರು ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *