ಜಂಗಮ ಬಾಂಧವರೂ ಜಾತಿಗಣತಿಯಲ್ಲಿ ಲಿಂಗಾಯತರೆಂದು ನಮೂದಿಸಲಿ

ಶ್ರೀಕಾಂತ ಸ್ವಾಮಿ
ಶ್ರೀಕಾಂತ ಸ್ವಾಮಿ

ಬೀದರ

ಲಿಂಗಾಯತ ಧರ್ಮ ಮತ್ತು ಜಾತಿ ಕಾಲಮ್ ನಲ್ಲಿ ಸಂಖ್ಯಾ A– 0558 ಜಂಗಮ ಲಿಂಗಾಯತ ಅಥವಾ ಸಂಖ್ಯಾ A – 0163 ಬೇಡುವ ಜಂಗಮ ಲಿಂಗಾಯತ ಎಂದು ನಮೂದಿಸಬೇಕು, ಹಾಗೂ ಒಗ್ಗಟ್ಟಾಗಿ ಸಂಖ್ಯಾ ಬಲ ಸರಕಾರಕ್ಕೆ ತೋರಿಸಬೇಕು.

ನನಗೆ ಸುಮಾರು ಜನ ಜಂಗಮ ಬಾಂಧವರು ಫೋನ್ ಮಾಡಿ ಸಮೀಕ್ಷೆಯಲ್ಲಿ ಧರ್ಮ ಮತ್ತು ಜಾತಿ ಏನು ಬರೆಯಬೇಕು ಎಂದು ಹಲವಾರು ಜಿಲ್ಲೆ ಬೀದರ ಗುಲ್ಬರ್ಗ ಯಾದಗಿರಿ ರಾಯಚೂರು ಬಾಗಲಕೋಟೆ ಬಳ್ಳಾರಿ ವಿಜಯಪುರ ಜಂಗಮ ಬಾಂಧವರು ವಿಚಾರಿಸುತ್ತಿದ್ದಾರೆ.

12ನೇ ಶತಮಾನದಲ್ಲಿ ಬಸವಾದಿ ಶರಣರು 770 ಗಣಂಗಗಳು ಸೇರಿ ಲಿಂಗಾಯತ ಧರ್ಮ ಸ್ಥಾಪಿಸಿದರು. ಧರ್ಮದ ಪ್ರಚಾರ ಸಲುವಾಗಿ ಒಂದು ಲಕ್ಷ ತೊಂಬತ್ತಾರು ಸಾವಿರ ಜಂಗಮರನ್ನು ಬಸವಣ್ಣನವರು ತಯಾರು ಮಾಡಿ ಭಾರತ ದೇಶದ ತುಂಬ ಪ್ರಚಾರ ಮಾಡಲು ಕಳುಹಿಸಿದರು.

ಕಲ್ಯಾಣ ಕ್ರಾಂತಿ ಆದ ಮೇಲೆ ದೇಶದ ತುಂಬ ಧರ್ಮ ಪ್ರಚಾರ ಮಾಡಲು ಹೋಗಿದ್ದ ಜಂಗಮರು ಕರ್ನಾಟಕ ಮಹಾರಾಷ್ಟ್ರ ತೆಲಂಗಾಣ ಆಂಧ್ರ ಪ್ರದೇಶ ತಮಿಳುನಾಡು ಕೇರಳ ಅಲ್ಲದೆ ಉತ್ತರ ಭಾರತದ ರಾಜ್ಯಗಳಲ್ಲಿ ನೆಲೆಸಿದ್ದರು. ಮುಂದೆ ಜಂಗಮ ಒಂದು ಜಾತಿ ಆಯಿತು. ಅದೇ ಜಂಗಮರು ಇಂದು ಕೂಡಾ ನಮ್ಮ ರಾಜ್ಯ ಅಲ್ಲದೆ ದೇಶದ ತುಂಬ ಗೌರವ ಪೂರ್ವಕ ಧಾರ್ಮಿಕ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಬಸವಣ್ಣವರು ಹಲವಾರು ವಚನಗಳಲ್ಲಿ ಜಂಗಮರಿಗೆ ಹಾಡಿ ಹೊಗಳುತ್ತಾರೆ ಮತ್ತು ಸಮಾಜ ಜಂಗಮರಿಗೆ ಉಪಚಾರ ಮಾಡಬೇಕು ಉದಾಸೀನ ತೋರಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಇಂದು ಕೂಡ ಜಂಗಮ ಸಮಾಜದ ಸ್ಥಿತಿಗತಿ ಬಡತನದಿಂದ ನಲುಗುತ್ತಿದೆ, ಭಿಕ್ಷೆ ಬೇಡುವುದು, ಲಿಂಗಾಯತ ಸಮಾಜದ ಧಾರ್ಮಿಕ ಕಾರ್ಯಕ್ರಮಗಳನ್ನು ಅಂದರೆ ಹುಟ್ಟು ನಾಮಕರಣ ಇಷ್ಟಲಿಂಗ ದೀಕ್ಷೆ ಮದುವೆ ಮತ್ತು ಮರಣದ ವರೆಗೆ ಎಲ್ಲ ಕ್ರಿಯಾಕ್ರಮಗಳನ್ನು ನಡೆಸಿಕೊಡುತ್ತಾರೆ.

ಕರ್ನಾಟಕ ರಾಜ್ಯ ಸರ್ಕಾರದ ಯಾವುದೇ ಮೀಸಲಾತಿಯಲ್ಲಿ ಅಲ್ಪಸಂಖ್ಯಾತ ಜಂಗಮರನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ, ಜಂಗಮರನ್ನು ಕೂಡ ವೀರಶೈವ ಲಿಂಗಾಯತ ಎಂದು ಪರಿಗಣಿಸಿ ಹಿಂದುಳಿದವರ 3 ಬಿ ಗುಂಪಿನಲ್ಲಿ ಸೇರಿಸಿದ್ದಾರೆ. ಆ ಗುಂಪಿನಲ್ಲಿ ಬರುವ ಪ್ರಬಲರಾದ ವೀರಶೈವ ಲಿಂಗಾಯತ ಸಮುದಾಯದ ಜೊತೆ ಪ್ರತಿಸ್ಪರ್ಧಿ ಆಗಲು ಬಡ ಜಂಗಮರಿಗೆ ಸಾಧ್ಯ ಇಲ್ಲ. ಕೆಲವರು ದಲಿತರ ಪರಿಶಿಷ್ಟ ಜಾತಿ ಬೇಡಜಂಗಮರ ಮೀಸಲಾತಿ ಪಡೆಯಲು ಪ್ರಯತ್ನ ಮಾಡಿದ್ದರು ಆದರೆ ನ್ಯಾಯಾಲಯ ಒಪ್ಪಿಲ್ಲ, ಇನ್ನು ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ.

ಸರಕಾರ ಲಿಂಗಾಯತ ಧರ್ಮದ ಪ್ರಮುಖ ಪಂಗಡವಾದ ಜಂಗಮರ ಸ್ಥಿತಿಗತಿ ತಿಳಿದುಕೊಂಡು ಅವರನ್ನು ಮುಖ್ಯ ವಾಹಿನಿಯಲ್ಲಿ ತರಲು ವಿಶೇಷ ಮೀಸಲಾತಿ ನೀಡಬೇಕು.

ಇವಾಗ ನಡೆಯುತ್ತಿರುವ ರಾಜ್ಯ ಸರ್ಕಾರದ ಸಮೀಕ್ಷೆಯಲ್ಲಿ ಜಂಗಮ ಸಮಾಜವನ್ನು ಹಲವಾರು ಹೆಸರುಗಳಲ್ಲಿ ಗುರುತಿಸಿದೆ. ಜಂಗಮ ಸಮಾಜದ ಜನಸಂಖ್ಯೆ ಮತ್ತು ಸ್ಥಿತಿಗತಿ ಸರ್ಕಾರ ಗಮನ ಸೆಳೆಯಲು ಎಲ್ಲರೂ ಒಂದೇ ಧರ್ಮ ಮತ್ತು ಜಾತಿಯಲ್ಲಿ ನಮೂದಿಸಿದರೆ ಆಡಳಿತ ವರ್ಗದವರ ಗಮನ ಸೆಳೆದು ಹೋರಾಟ ಮಾಡಬಹುದು.

ಆದರಿಂದ ಜಂಗಮರು ಧರ್ಮ ಬರೆಸುವಾಗ 11ನೆ ಕಾಲಂ ಇತರೆಯಲ್ಲಿ ” ಲಿಂಗಾಯತ ಧರ್ಮ ” ಎಂದು ಮತ್ತು ಸರಕಾರ ಗುರುತಿಸಿದ ಜಂಗಮ ಜಾತಿಗಳಾದ ಕ್ರಮಸಂಖ್ಯ A – 0558 ಜಂಗಮ ಲಿಂಗಾಯತ ಅಥವಾ ಕ್ರಮಸಂಖ್ಯ A -0163 ಬೇಡುವ ಜಂಗಮ ಲಿಂಗಾಯತ ಎಂದು ಬರೆಯಬೇಕು.

ಇವೆರಡು ಗುಂಪನ್ನು ಒಂದೇ ಎಂದು ಪರಿಗಣಿಸಿ ಸಂಖ್ಯಾ ಬಲದ ಮೇಲೆ ಜಂಗಮ ಸಮಾಜದ ಏಳ್ಗೆಗಾಗಿ ಸರಕಾರದ ಯೋಜನೆಗಳಲ್ಲಿ ವಿಶೇಷ ಬಡ್ಜೆಟ್ ಕೊಡುತ್ತಾರೆ, ಹಾಗು ಜಂಗಮರಿಗೆ ವಿಶೇಷ ಮೀಸಲಾತಿ ನೀಡಲು ಹೋರಾಟ ಮಾಡಿದರೆ ಸರಕಾರ ಪರಿಗಣಿಸಿ ಮೀಸಲಾತಿ ನೀಡುತ್ತಾರೆ.

ದಯಮಾಡಿ ಎಲ್ಲಾ ಜಂಗಮ ಸಮಾಜದವರು ಸಂಖ್ಯಾ ಬಲ ತೋರಿಸಲು ಒಟ್ಟಾಗಿ ಧರ್ಮ ಮತ್ತು ಜಾತಿ ನಮೂದಿಸಬೇಕು ಎಂದು ಪ್ರಾರ್ಥಿಸುತ್ತೇನೆ. ಇದು ಎಲ್ಲರಿಗೂ ವಿಚಾರಿಸಿ ಚರ್ಚಿಸಿ ನಾನು ಮನವಿ ಮಾಡಿದ್ದೇನೆ, ಎಲ್ಲರೂ ಜಂಗಮ ಸಮಾಜದ ಒಳಿತಿಗಾಗಿ ಹೆಜ್ಜೆ ಹಾಕೋಣ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LeqMgqmTFRYEVSrkuQhpeJ

Share This Article
Leave a comment

Leave a Reply

Your email address will not be published. Required fields are marked *

ಕರ್ನಾಟಕ ರಾಜ್ಯ ಸಂಚಾಲಕರು, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ