“2023 ಚುನಾವಣೆಯಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆರ್‌ಎಸ್‌ಎಸ್ ಒಡ್ಡಿದ ಆಮಿಷಕ್ಕೆ ಒಳಗಾಗಿ ಬಿಜೆಪಿ ಪರ ಮತ ಚಲಾಯಿಸಲು ಕರೆ ಕೊಟ್ಟಿದ್ದರು. ಆದರೆ, ಸಮಾಜ ಅವರ ಮಾತನ್ನು ತಿರಸ್ಕರಿಸಿತ್ತು”
ವಿಜಯಪುರ
‘ಹೋರಾಟದ ಹೆಸರಿನಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ರಾಜ್ಯ ಸರ್ಕಾರವನ್ನು ಹಾಗೂ ಪಂಚಮಸಾಲಿ ಸಮಾಜದ ಸಚಿವರು, ಶಾಸಕರನ್ನು ಬ್ಲ್ಯಾಕ್ ಮೇಲ್ ಮಾಡತೊಡಗಿದ್ದಾರೆ’ ಎಂದು ಕೆಪಿಸಿಸಿ ವೈದ್ಯಕೀಯ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ, ಪಂಚಮಸಾಲಿ ಸಮಾಜದ ಮುಖಂಡ ಡಾ. ರವಿಕುಮಾರ ಬಿರಾದಾರ ಭಾನುವಾರ ಆರೋಪಿಸಿದರು.
‘ಮೀಸಲಾತಿ ಹೋರಾಟದ ಹೆಸರಿನಲ್ಲಿ ಸಮಾಜವನ್ನು ಹಿಂಸೆಗೆ ಪ್ರಚೋದಿಸುವ ಕೆಲಸ ಸ್ವಾಮೀಜಿ ಮಾಡುತ್ತಿದ್ದಾರೆ. ಕಾವಿ ಮರ್ಯಾದೆ, ಪಂಚಮಸಾಲಿ ಸಮಾಜದ ಮರ್ಯಾದೆ ತೆಗೆಯುವ ಕೆಲಸ ಸ್ವಾಮೀಜಿ ಮಾಡಬಾರದು, ತಮ್ಮ ಲಾಭಕ್ಕಾಗಿ ಪಂಚಮಸಾಲಿಗಳನ್ನು ಬಿಜೆಪಿ, ಆರ್.ಎಸ್.ಎಸ್‌ಗೆ ಅಡ ಇಡಬಾರದು’ ಎಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ
ಹೇಳಿದರು.
‘2023 ಚುನಾವಣೆಯಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆರ್‌ಎಸ್‌ಎಸ್ ಒಡ್ಡಿದ ಆಮಿಷಕ್ಕೆ ಒಳಗಾಗಿ ಬಿಜೆಪಿ ಪರ ಮತ ಚಲಾಯಿಸಲು ಕರೆ ಕೊಟ್ಟಿದ್ದರು. ಆದರೆ, ಸಮಾಜ ಅವರ ಮಾತನ್ನು ತಿರಸ್ಕರಿಸಿತ್ತು’ ಎಂದು ಹೇಳಿದರು.
“ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪಂಚಮಸಾಲಿ ಮೀಸಲಾತಿ ಹೋರಾಟ ಆರ್.ಎಸ್.ಎಸ್ ಮತ್ತು ಬಿಜೆಪಿ ಮಧ್ಯಪ್ರವೇಶದಿಂದ ಸಂಪೂರ್ಣ ದಾರಿ ತಪ್ಪಿದೆ” ಎಂದು ದೂರಿದರು.