ಜೇವರ್ಗಿ
ಜೇವರ್ಗಿ ಬಸವ ಕೇಂದ್ರದ ಮಹಿಳಾ ಘಟಕದ ಸದಸ್ಯರು ‘ವಚನ ನಿವಾಸ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಮಹಿಳಾ ಘಟಕದ ಸದಸ್ಯರು ಬಸವಣ್ಣನವರ ಹಾಗೂ ಷಣ್ಮುಖ ಶಿವಯೋಗಿಗಳ ಭಾವಚಿತ್ರದೊಂದಿಗೆ ವಚನಗಳ ಗ್ರಂಥ ಹೊತ್ತು, ವಚನ ಪಠಿಸುತ್ತಾ ಶರಣರ ಮನೆ ಪ್ರವೇಶಿಸುತ್ತಾರೆ.
“ಅಲ್ಲೆಲ್ಲ ವಚನಗಳ ಪಠಣ ಮಾಡ್ತೀವಿ. ವಚನ ಹೇಳ್ತೀವಿ, ವಚನ ಹಾಡೋರು ಹಾಡ್ತಾರ, ಶರಣರ ಬಗ್ಗೆ ಜಾನಪದ ಹಾಡ್ತಾರ. ಮನೆ ಯಜಮಾನ್ರ ಬಸವಣ್ಣನವರ ಭಾವಚಿತ್ರಕ ಗೌರವ ಸಲ್ಲಿಸಿ ಹರ ಬಸವಾಯ ನಮಃ, ಗುರು ಬಸವಾಯ ನಮಃ ಮಂತ್ರ ಪಠನಾ ಮಾಡ್ಕೊಂತ ಹೂ,ಪತ್ರಿ ಏರಸ್ತಾರ,” ಎಂದು ಬಸವ ಕೇಂದ್ರದ ಅಧ್ಯಕ್ಷ ಡಾ. ಶರಣಬಸವ ಕಲ್ಲಾ ಹೇಳಿದರು.
“ಇದನ್ನೆಲ್ಲ ಮನೆಯವರೇ ನೆರವೇರಸ್ತಾರ. ಇದು ಮಾಡೋ ಮನೆಯವರಿಗೆ ಹೊಸ concept ಅಂಥ ಅನಿಸ್ತದ,” ಎಂದು ತಿಳಿಸಿ ಕಲ್ಬುರ್ಗಿಯ ಮೀನಾ ಪ್ರಕಾಶ ಹಳಿಮನಿ ಅವರ ನಿವಾಸದಲ್ಲಿ ನಡೆದ ಇತ್ತೀಚೆಗೆ ಕಾರ್ಯಕ್ರಮದ ಫೋಟೋ, ವಿಡಿಯೋಗಳನ್ನು ಹಂಚಿಕೊಂಡರು.
ಕೊನೆಯ ವಚನಕಾರರಾಗಿರುವ ಜೇವರಿಗೆ ಷಣ್ಮುಖ ಶಿವಯೋಗಿಗಳ ಮಠದಿಂದ ಶುರುವಾಗಿ, ಈ ಶ್ರಾವಣ ಮಾಸ 30 ಮನೆಗಳಲ್ಲಿ ‘ವಚನ ನಿವಾಸ’ ಕಾರ್ಯಕ್ರಮ ನಡೆದಿದೆ.
ಈ ಕಾರ್ಯಕ್ರಮ ಮಾಡುವಾಗ 15-20 ಮಂದಿ ಸಂಘಟನೆಯ ತಂಡ ಇರುತ್ತದೆ. ಮನೆಯವರು, ಅಕ್ಕ ಪಕ್ಕದವರು ಸೇರಿದಾಗ, 60-70 ಮಂದಿ ಭಕ್ತರ ಗುಂಪು ಸಿದ್ದವಾಗುತ್ತದೆ.
ಬಸವಣ್ಣನವರು ಷಣ್ಮುಖ ಶಿವಯೋಗಿಗಳ ಬಗ್ಗೆ ಜನರಿಗೆ ಗೊತ್ತಿರೊತ್ತೆ, ಆದರೆ ವಚನಗಳು, ವಚನಗ್ರಂಥ, ವಚನ ಸಾಹಿತ್ಯ ಗೊತ್ತಿಲ್ಲದವರು ಇದ್ದಾರೆ. ಹಾಗಾಗಿ ಬರಿ ಅವರ ಫೋಟೋ ಪ್ರವೇಶ ಮಾಡುವುದಕ್ಕಿಂತ ಜೊತೆಗೆ ವಚನ ಸಾಹಿತ್ಯ ಪ್ರವೇಶ ಮಾಡಿಸ್ತೀವಿ, ಎಂದು ಸದಸ್ಯರು ಹೇಳುತ್ತಾರೆ.
ವಚನ ಸಾಹಿತ್ಯದ ಬಗ್ಗೆ, ನಿಜಾಚರಣೆಗಳ ಬಗ್ಗೆ ಜಾಗೃತಿ ಮೂಡಿಸುವುದು ‘ವಚನ ನಿವಾಸ’ ಮುಖ್ಯ ಉದ್ದೇಶ.
“ಲಕ್ಷ್ಮೀ ಪೂಜೆ, ಆ ಪೂಜೆ ಈ ಪೂಜೆ ಮನೆಯೊಳಗೆ ಮಾಡ್ತೀರಿ, ಏನಾಗದೈತಿ ಅದರಿಂದ, ಅದನ್ನೆಲ್ಲ ಮಾಡು ಅಂತ ಯಾರು ಹೇಳಿಲ್ಲ ನಿಮಗ…” ಎಂದು ಹೇಳಿ ವಚನ ಸಾಹಿತ್ಯದ ಮಹತ್ವ ತಿಳಿಸುತ್ತಾರೆ. “ಎಮ್ಮ ವಚನದೊಂದು ಪಾರಾಯಣಕ್ಕೆ ವ್ಯಾಸನದೊಂದು ಪುರಾಣ ಸಮಬಾರದಯ್ಯ ಎನ್ನುವ ಸಿದ್ಧರಾಮೇಶ್ವರರ ವಚನ ಏನಿದೆಯಲ್ಲ, ಅದರಂತೆ ವಚನದ ಮಹತ್ವ ಹಿಂಗದ ಅಂತಾ ತಿಳಿಸ್ತೀವಿ,” ಎಂದು ಡಾ. ಶರಣಬಸವ ಕಲ್ಲಾ ಹೇಳುತ್ತಾರೆ.
‘ವಚನ ನಿವಾಸ’ ಸರಳವಾಗಿ ಖರ್ಚಿಲ್ಲಗೆ ಮುಗಿಸಬಹುದಾದ ಕಾರ್ಯಕ್ರಮ.
ಪೂಜೆಗೆ ಎಂದು ದುಡ್ಡು ಖರ್ಚು ಮಾಡತಾರ. ಅದನ್ನೆಲ್ಲ ಖರ್ಚು ಮಾಡಿ ಯಾಕ ಹಾಳು ಮಾಡ್ತೀರಿ, ಈ ವಚನ ಕಾರ್ಯಕ್ರಮಕ್ಕೆ ಏನು ಖರ್ಚಿಲ್ಲ ನಾವೆಲ್ಲ ಫ್ರೀಯಾಗಿ ಬರ್ತೀವಿ, ನಿಮ್ಮನ್ಯಾಗ ವಚನಗಳ ಪಠಣಾ ಮಾಡ್ತೀವಿ, ವಚನ ಹೇಳ್ರಿ ಮುಂದ ಮಂಗಲ ಮಾಡ್ರಿ ಇಷ್ಟು ಕಾರ್ಯಕ್ರಮ ಇರ್ತದ ಎಂದೇಳ್ತೀವಿ. ಕಾರ್ಯಕ್ರಮ ಮುಗದ್ಮಾಲ ನಿಮಗೆ ಸಾಧ್ಯವಾದ್ರೆ ಚಾ ಕೊಡ್ರಿ, ಚುಡವಾ ಕೊಡ್ರಿ, ಬಿಸ್ಕೆಟ್ ಕೊಡ್ರಿ ಇಷ್ಟ ಮಾಡೋದು ಅಂತ ಹೇಳ್ತೀವಿ. ಒಪ್ಪಕೊಳ್ತಾರ.
ಕಾರ್ಯಕ್ರಮಗಳು ಮಹಿಳೆಯರ ನೇತ್ರತ್ವದಲ್ಲಿ ನಡೆಯುತ್ತಿದೆ ಎಂದು ಬಸವ ಕೇಂದ್ರ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಪಾಟೀಲ ಹೇಳಿದರು.
“ಹೆಣ್ಣುಮಕ್ಕಳು ಈ ಕಾರ್ಯಕ್ರಮಗಳ ಮೂಲಕ ಸಂಘಟನೆ ಆಗಲಿ ಎಂಬ ಉದ್ದೇಶ ಇಟ್ಟುಕೊಂಡು ಇವನ್ನು ಮಾಡ್ತಾ ಇದ್ದೇವೆ, ಹೆಣ್ಣುಮಕ್ಕಳು ತಯಾರಾದರೆ ಮುಂದೆ ಮನೆಯವರೆಲ್ಲ ಶರಣ ಸಂಸ್ಕಾರ ಹೊಂದುತ್ತಾರೆ,” ಎಂದು ಹೇಳಿದರು.
ಮಹಿಳೆಯರು ಭಾವನಾತ್ಮಕವಾಗಿ ತೊಡಗಿಕೊಳ್ಳುವಂತೆ ಬಸವ ಕೇಂದ್ರದಿಂದ ಪ್ರತಿ ವರ್ಷ ಹೊಸ ಹೊಸ coneptನೊಂದಿಗೆ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ. ವಚನ ನಿವಾಸ ಕಾರ್ಯಕ್ರಮ ಈ ವರ್ಷ ನಡೆದರೆ, ಕಳೆದ ಬಾರಿ ವಚನ ಜ್ಯೋತಿಯಾತ್ರೆ ನಡೆದಿತ್ತು.
‘ವಚನ ನಿವಾಸ’ಕ್ಕೆ ಜನರಿಂದ ಒಳ್ಳೆ ಪ್ರತಿಕ್ರಿಯೆ ಬರುತ್ತಿದೆ.
“ಪ್ರತಿ ವರ್ಷ ಬಸವ ಕೇಂದ್ರದವರು ಏನೇ ಕಾರ್ಯಕ್ರಮ ಹಮ್ಮಿಕೊಂಡ್ರು ನಮ್ಮನೇಲಿ ಮಾಡ್ತೀವಿ. ಈ ವರ್ಷ ವಚನ ನಿವಾಸ ಮಾಡಿದ್ವಿ. ಅದರಿಂದ ನಮ್ಮ ಮನಸ್ಸೀಗೆ ಶಾಂತಿ ನೆಮ್ಮದಿ ಸಿಕ್ಕೈತಿ. ಇಂಥ ಕಾರ್ಯಕ್ರಮ ಮಾಡಿದ ನಮಗ ಶರಣ್ರ ಅರಿವು ಬರತ್ತ, ಶರಣ್ರ ಸೇವಾ ಮಾಡಿದ ಸಾರ್ಥಕ ಭಾವ ನಮಗ ಮೂಡತೈತಿ,” ಎಂದು ಅಂಗನವಾಡಿ ಕಾರ್ಯಕರ್ತೆ ಭಾಗ್ಯವತಿ ಹೇಳುತ್ತಾರೆ.
ಜೇವರ್ಗಿ ಬಸವ ಕೇಂದ್ರ
ಲಿಂಗಾಯತ ನಿಜಾಚರಣೆಗಳನ್ನು ಬಸವ ಕೇಂದ್ರ ನಿರಂತರ ನಡೆಸಿಕೊಂಡು ಬರುತ್ತಿದೆ.
ಕಳೆದ 25 ವರ್ಷಗಳಿಂದ ಪ್ರತಿ ತಿಂಗಳು ಒಂದನೇ ತಾರೀಖು ನಿರಂತರವಾಗಿ ಜೇವರ್ಗಿ ಬಸವ ಕೇಂದ್ರದ ಶರಣ ಸಂಗಮ ಕಾರ್ಯಕ್ರಮ ಡಾ.ಶರಣಬಸವ ಕಲ್ಲಾ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಜರಗುತ್ತಿವೆ.
ಪ್ರತಿ ವರ್ಷ ಹೊಸ ಕಲ್ಪನೆಯ ಕಾರ್ಯಕ್ರಮ
2020ರಲ್ಲಿ ಪ್ರಾರಂಭವಾದ ಜೇವರ್ಗಿ ಬಸವ ಕೇಂದ್ರ ಮಹಿಳಾ ಘಟಕವು ಹಲವಾರು ವಿದಾಯಕ ಕಾರ್ಯಕ್ರಮಗಳನ್ನು ಬಸವ ಕೇಂದ್ರದ ಸಹಕಾರದಲ್ಲಿ ವರ್ಷಕ್ಕೊಮ್ಮೆ ಶ್ರಾವಣದಲ್ಲಿ ನಡೆಸುತ್ತಾ ಬರುತ್ತಿದೆ.
- ಮೊದಲ ವರ್ಷ ಮನೆಯಂಗಳದಲ್ಲಿ ವಚನ ಶ್ರಾವಣ 2021,
- ಎರಡನೇ ವರ್ಷ ಮನೆಯಂಗಳದಲ್ಲಿ ಶ್ರೀ ಷಣ್ಮುಖ ಶಿವಯೋಗಿಗಳ ವಚನ ಜೋತಿ 2022,
- ಮೂರನೇ ಬಾರಿಗೆ ವಚನ ಪಚನ ಕತ್ತಲೆಯಿಂದ ಬೆಳಕಿನೆಡೆಗೆ 2023
- ಈ ವರ್ಷ 2024, ಶ್ರಾವಣ ಮಾಸ ವಚನ ನಿವಾಸ ಮನೆ ಮನೆಗೆ ವಚನ ಗ್ರಂಥ ಪ್ರವೇಶ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡು 30 ಮನೆಗಳಲ್ಲಿ ಮಾಡಲಾಗುತ್ತಿದೆ.
ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ವಿಜಯಕುಮಾರ ಪಾಟೀಲ ಸೇಡಂ ನೆತೃತ್ವದಲ್ಲಿ, ಸಂಘಟನೆಯ ಶರಣೆಯರೆಲ್ಲ ಸೇರಿಕೊಂಡು ಯಶಸ್ವಿಯಾಗಿ ಈ ಕಾರ್ಯಕ್ರಮಗಳನ್ನು ನೆರವೇರಿಸುತ್ತಿದ್ದಾರೆ.
ಮಹಿಳಾ ಘಟಕವು
ಪ್ರತಿ ತಿಂಗಳು ಹದಿನೈದು ತಾರೀಖಿನಂದು ಮನೆಮನೆಗೆ ಮನಮನಕ್ಕೆ ವಚನ ಬಿತ್ತನೆ ಕಾರ್ಯಕ್ರಮ ಕೂಡಾ ನಿರಂತರವಾಗಿ ಬಸವ ಕೇಂದ್ರ ಸಹಯೋಗದಲ್ಲಿ ನಡೆಸಿಕೊಂಡು ಬರುತ್ತಿದೆ.
ಮುಖ್ಯ ಕಾರ್ಯಕ್ರಮಗಳು
ಜೇವರ್ಗಿ ಬಸವ ಕೇಂದ್ರ ಹಾಗೂ ಮಹಿಳಾ ಘಟಕದ ಆಶ್ರಯದಲ್ಲಿ ನಡೆದ ಕಾರ್ಯಕ್ರಮಗಳು:
- 2007ರಲ್ಲಿ ನಿಜಗುಣಾನಂದ ಶ್ರೀಗಳ ಕಲ್ಯಾಣ ದರ್ಶನ ಪ್ರವಚನ
- 2009 ಬಸವ ಬೆಳವಿಯ ಶರಣಬಸವ ದೇವರ ಪ್ರವಚನ
- 2013 ಷಣ್ಮುಖ ಶಿವಯೋಗಿಗಳ ವಚನ ದರ್ಶನ, ಶಿವಯೋಗಿಗಳ ಭಕ್ತಬಳಗದ ವತಿಯಿಂದ. ಬಸವ ಕೇಂದ್ರದ ಸಹಕಾರ
- 2016 ಶರಣ ಈಶ್ವರ ಮಂಟೂರ ಅವರಿಂದ 21 ದಿನಗಳ ಪ್ರವಚನ
- 2017 ಅಕ್ಕ ಅನ್ನಪೂರ್ಣ ತಾಯಿ ಅವರಿಂದ ವಚನ ದರ್ಶನ
- 2020 ಬಸವ ದರ್ಶನ ಪ್ರವಚನ
- ಪ್ರತಿ ವರ್ಷ ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಆಚರಣೆ
- ಶಾಲಾ ಕಾಲೇಜುಗಳಲ್ಲಿ ವ್ಯಕ್ತಿತ್ವ ವಿಕಸನ; ಯುವ ಮನಸ್ಸುಗಳ ಕಡೆಗೆ ನಮ್ಮ ನಡಿಗೆ
ಜೇವರ್ಗಿ ಬಸವ ಕೇಂದ್ರದ ಶರಣ ತಂಡ:
ಶಿವನಗೌಡ ಪಾಟೀಲ ಹಂಗರಗಿ, ಬಾಪುಗೌಡ ಪಾಟೀಲ, ಮಹಾಂತೇಶ ಹರವಾಳ, ರಾಮಣ್ಣ ತೊನಸಳ್ಳಿ, ಲಿಂಗಣ್ಣ ಹಳೆಮನಿ, ಮಲಕನ ಗೌಡ ಹೆಗನಾಳ, ಈರಣ್ಣ ಭೂತಪುರ, ಕಂಠೆಪ್ಪ ಹರವಾಳ, ವಿಜಯಕುಮಾರ ಪಾಟೀಲ ಸೇಡಂ, ಮಲ್ಲನಗೌಡ ಕನ್ಯಾಕೋಳೂರ, ವಿಜಯಕುಮಾರ ಕಲ್ಲಾ, ಗುರುಗೌಡ ಮಾಲಿಪಾಟೀಲ, ಅಖಂಡಪ್ಪ ಕಲ್ಲಾ, ಷಣ್ಮುಖಪ್ಪ ಹಿರೇಗೌಡ, ಮಹಾಂತಗೌಡ ಚನ್ನೂರ, ಬಸನಗೌಡ ಪಾಟೀಲ ಹರನೂರ, ನಿಂಗಣ್ಣ ಹಳಿಮನಿ, ಮಲ್ಲಿಕಾರ್ಜುನ ಕಟ್ಟಿಸಂಗಾವಿ, ಸಂಗನಗೌಡ ಪಾಟೀಲ ಗುಳ್ಯಾಳ, ನೀಲಕಂಠ ಅವುಂಟಿ.
ಜೇವರ್ಗಿ ಬಸವ ಕೇಂದ್ರ ಮಹಿಳಾ ಘಟಕದ ಶರಣೆಯರು:
ಮಹಾನಂದ ಹಿರೇಗೌಡ, ಶ್ರೀದೇವಿ ಕಲ್ಲಾ, ಲೀಲಾವತಿ ಅರಳಿ, ಮಲ್ಲಮ್ಮ ಹಳಿಮನಿ, ಸಾವಿತ್ರಿ ಹಳ್ಳಿ, ನಾಗಮ್ಮ ಬೀಳವಾರ, ಸುಮಿತ್ರ ಇಜೇರಿ, ತ್ರಿವೇಣಿ ಕುಳಗೇರಿ, ಬಸಮ್ಮ ಬಿರಾದರ್, ಭಾಗ್ಯಜ್ಯೋತಿ ಪಾಟೀಲ, ಲಕ್ಷ್ಮಿ ಬಂಟನೂರ, ವಿಜಯಲಕ್ಷ್ಮಿ ಪಾಟೀಲ, ರಾಜೇಶ್ವರಿ ಹಿರೇಗೌಡ, ಪ್ರೇಮ ನರಿಬೋಳ, ಗಂಗೂ ಅವಂಟಿ, ಸುವರ್ಣ ರಾಂಪುರ, ಬಸಮ್ಮ ಸುಂಟಾಣ, ಜಯಶ್ರೀ ಚನ್ನೂರ, ಕಾವೇರಿ ಪಾಟೀಲ, ಪ್ರೇಮಾ ಕಲ್ಲಾ, ಪಾರ್ವತಿ ಹಳ್ಳಿ, ಸರಸ್ವತಿ ಬಿರಾದಾರ, ಅನುರಾಧ ಹುಗ್ಗಿ, ಶಕುಂತಲಾ ಸೊನ್ನ, ಬೋರಮ್ಮ ಚೆನ್ನೂರ್, ರೂಪಾ ಗೋಲ, ಸುಧಾ ಬೆಣ್ಣುರ, ಕಸ್ತೂರಿ ಹಿರೇಮಠ, ಶ್ರೀದೇವಿ ಸ್ಥಾವರಮಠ, ಶ್ರೀದೇವಿ ಇಜೇರಿ, ಶಿಲ್ಪ ಮತ್ತಿಮಡು, ಜಯಶ್ರೀ ದೇಸಾಯಿ, ನಿಂಗಮ್ಮ ಯತ್ನಾಳ, ಮಂಜುಳಾ ಪಾಟೀಲ
ಶರಣು…
ವ್ಯಾಪಕವಾಗಿ ನಡೆಯಲಿ
ತುಂಬಾ ಹೆಮ್ಮೆ ಅನ್ನಿಸುತ್ತೆ ಇವೆಲ್ಲವುಗಳನ್ನು ನೋಡಿದರೆ. ಇಂತಹ ಕಾರ್ಯಕ್ರಮಗಳು ನಾಡಿನಾಧ್ಯoತ ಹಮ್ಮಿಕೊಳ್ಳಲು ಬಸವ ಭಕ್ತರಿಗೆ ಸ್ಫೂರ್ತಿಯ ಸೆಲೆ ಆಗಲಿ 👏👏🙏🙏