ಪುಣೆ ಸಭೆಯಲ್ಲಿ JLM ಚುನಾವಣಾ ನಿಯಮಾವಳಿಗೆ ಅನುಮೋದನೆ

ಪುಣೆ

ನಗರದಲ್ಲಿ ರವಿವಾರ ನಡೆದ ಜಾಗತಿಕ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಅಂಗೀಕರಿಸಲಾದ ಪ್ರಮುಖ ನಿರ್ಣಯಗಳು:

  • ಜಾಗತಿಕ ಲಿಂಗಾಯತ ಮಹಾಸಭೆಯ ಎಲ್ಲ ಸ್ಥರಗಳ ಘಟಕಗಳಿಗೆ ಚುನಾವಣೆ ನಡೆಸುವ ನಿಯಮಾವಳಿಗಳನ್ನು ರೂಪಿಸಲೆಂದು ಸಮಿತಿ ರಚಿಸಲಾಗಿತ್ತು. ಆ ಸಮಿತಿ ನಿಯಮಾವಳಿ ರಚಿಸಿ ಕೇಂದ್ರ ಸಮಿತಿಗೆ ಸಲ್ಲಿಸಿತು, ಆ ವರದಿಯನ್ನು ಕಾರ್ಯಕಾರಿಣಿ ಸಭೆಯಲ್ಲಿ ಮಂಡಿಸಿ ಸುಧೀರ್ಘವಾಗಿ ಚರ್ಚಿಸಿ ಅನುಮೋದನೆ ನೀಡಲಾಯಿತು.
  • ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ಪಡೆಯಲು ದೇಶಾದ್ಯಂತ ಇರುವ ಎಲ್ಲ ಲಿಂಗಾಯತರಿಗೆ ಅನ್ವಯವಾಗುವಂಥ ಮುಂದಿನ ಕ್ರಮ ಕೈಗೊಳ್ಳುವದು.
  • ವಚನ ದರ್ಶನದಂತಹ ಅಪಪ್ರಚಾರದ ಕೃತಿಗಳ ವಿರುದ್ಧ, ಶರಣರ ವಚನಗಳ ನಿಜ ಭಾವಾರ್ಥ ತಿಳಿಸುವ ಕೃತಿಗಳನ್ನು ಪ್ರಕಟಿಸುವುದು, ಪ್ರಸಾರ-ಪ್ರಚಾರ ಮಾಡುವುದು.
  • ಜಾಗತಿಕ ಲಿಂಗಾಯತ ಮಹಾಸಭಾ ಆನ್ಲೈನ್ ಮಾಸಿಕ ಪತ್ರಿಕೆಯನ್ನು ಪ್ರಾರಂಭಿಸುವುದು.
  • ಲಿಂಗಾಯತ ವಧು-ವರರ ಮಾಹಿತಿ ಕೇಂದ್ರವನ್ನು ಪ್ರಾರಂಭಿಸುವ ಕ್ರಮ.
  • ಸಂಘಟನೆಗೆ ಕರ್ನಾಟಕ ಹಾಗೂ ಹೊರ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೋಂದಣಿ ಮಾಡಿಸುವುದು, ಸಂಘಟನಾತ್ಮಕವಾಗಿ ಬಲಪಡಿಸುವುದು.
  • ಮಹಾಸಭಾದ ಐದು ವರ್ಷಗಳ ಸಾಧನೆಯ ಕಿರುಹೊತ್ತಿಗೆ ಪ್ರಕಟಿಸುವುದು.

ರಾಷ್ಟ್ರೀಯ ಉಪಾಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಕೆಂಪಗೌಡ ಅವರ ಅಧ್ಯಕ್ಷತೆಯ ಸಭೆಯಲ್ಲಿ ನಿರ್ಣಯಗಳನ್ನು ಮಂಡಿಸಲಾಯಿತು. ಸರ್ವರು ಚಪ್ಪಾಳೆ ತಟ್ಟಿ ಈ ನಿರ್ಣಯಗಳಿಗೆ ಅನುಮೋದನೆ ನೀಡಿದರು. ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಡಾ. ಶಿವಾನಂದ ಜಾಮದಾರ ಹಾಗೂ ರಾಷ್ಟ್ರ, ರಾಜ್ಯ ಪದಾಧಿಕಾರಿಗಳು, ಮಹಾಪೋಷಕರು, ಪೋಷಕರು, ದಾಸೋಹಿಗಳು, ಅಹ್ವಾನಿತರು ಮತ್ತಿತರರು ಹಾಜರಿದ್ದರು.

Share This Article
6 Comments
  • ಒಳ್ಳೆಯ ಬೆಳವಣಿಗೆ. ದೇಶದ ಹಲವು ರಾಜ್ಯದಲ್ಲಿ ಲಿಂಗಾಯತ ತತ್ವಸಿದ್ದಾಂತಗಳನ್ನ ಹಂಚಿದ್ರೆ ಜನರಿಗೆ ಬೇಗ ತಲುಪಿ ದೇಶದ ಆರ್ಥಿಕ ಅಭಿವೃದ್ಧಿಗೆ ಸಹಾಯವಾಗುತ್ತೆ

  • ಜಾಗತಿಕ ಲಿಂಗಾಯತ ಮಹಾಸಭಾ ಕ್ಕೆ ಅಭಿನಂದನೆಗಳು 💐🙏
    ಜಿಲ್ಲಾ ಮಟ್ಟ, ತಾಲೂಕು ಮಟ್ಟ ಕಾರ್ಯಕ್ರಮ ಏರ್ಪಡಿಸುವ ಮೂಲಕ ಜಾಗೃತಿ ಮೂಡಿಸಿ ಮಹಾಸಭಾ ಕೆಲಸ ಮಾಡಬೇಕೆಂದು ವಿನಂತಿ.

Leave a Reply

Your email address will not be published. Required fields are marked *