ದಾವಣಗೆರೆ :
179ನೇ ಕದಳಿ ಕಮ್ಮಟದಲ್ಲಿ ಬಸವಾದಿ ಶರಣರಾದ ಡೋಹಾರ ಕಕ್ಕಯ್ಯ, ಬಿಬ್ಬಿ ಬಾಚಯ್ಯ ಅವರ ಸಂಸ್ಮರಣೆ ಮತ್ತು ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಯಿತು.
ವಿದ್ಯಾನಗರದ ಲಯನ್ಸ್ ಸೇವಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸಹ ನಡೆಯಿತು.
ಕದಳಿ ಮಹಿಳಾ ವೇದಿಕೆಯ ಸದಸ್ಯರು ಮತ್ತು ಸಲಹಾ ಸಮಿತಿಯವರಿಗೆ ಆಟಗಳನ್ನು ಆಡಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಕಜ ದಯಾನಂದ ವಹಿಸಿದ್ದರು.
ಹೃದಯಾಘಾತದ ಸಂದರ್ಭದಲ್ಲಿ ತುರ್ತು ಚಿಕಿತ್ಸೆಯನ್ನು ಹೇಗೆ ನೀಡಬೇಕು ಎಂಬುದರ ಬಗ್ಗೆ ಹಿರಿಯ ವೈದ್ಯ ಡಾ. ರಾಕೇಶ ತಿಲಕ್ ಅವರು ಸಿಪಿಆರ್ ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷರಾದ ಮಮತಾ ನಾಗರಾಜ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಶರಣರ ವಚನಗಳು ಇಂದಿಗೂ ಪ್ರಸ್ತುತತೆ ಬಗ್ಗೆ ಹೇಳಿದರು. ಮತ್ತು ಹೃದಯಾಘಾತದ ಸಂದರ್ಭದಲ್ಲಿ ಧೈರ್ಯಗೆಡದೆ ಹೇಗೆ ಕಾರ್ಯ ನಿರ್ವಹಿಸಬೇಕು ಎಂದು ಸಹ ತಿಳಿಸಿದರು.

ವೇದಿಕೆಯಲ್ಲಿ ತಾಲೂಕು ಘಟಕದ ಅಧ್ಯಕ್ಷೆ ನಿರ್ಮಲ ಶಿವಕುಮಾರ್, ರಾಜ್ಯ ಉಪ ಸಂಚಾಲಕರಾದ ಪ್ರಮೀಳಾ ನಟರಾಜ, ಗೌರವ ಸಲಹೆಗಾರರಾದ ಯಶಾ ದಿನೇಶ್ ಮತ್ತು ಸಲಹಾ ಸಮಿತಿಯ ಗಾಯತ್ರಿ ಸಿದ್ದೇಶ್ವರ, ಸುಲೋಚನಾ ರಾಜಶೇಖರ, ಗಾಯತ್ರಿ ಸುಭಾಷ, ಪಲ್ಲವಿ ಪಾಟೀಲ, ಆಶಾ ಮಹಾಬಲೇಶಗೌಡ್ರು, ಕಿರುವಾಡಿ ಗಿರಿಜಮ್ಮ, ಸುವರ್ಣ ದೊಗ್ಗಳ್ಳಿ, ನೀಲಾಂಬಿಕಾ ಟಿ, ಕುಸುಮ ಲೋಕೇಶ್ ಹಾಗೂ ಗಾಯತ್ರಿ ವಸ್ತ್ರದ, ಪ್ರೇಮ ಸೋಮೇಶ್ವರ ಉಪಸ್ಥಿತರಿದ್ದರು.

ವೇದಿಕೆಯ ಪದಾಧಿಕಾರಿಗಳಾದ ವಿಜಯ ಚಂದ್ರಶೇಖರ್, ವಸಂತ ಕೆ. ಆರ್, ಸೌಮ್ಯ ಸತೀಶ, ಪೂರ್ಣಿಮಾ ಪ್ರಸನ್ನಕುಮಾರ, ನಂದಿನಿ ಗಂಗಾಧರ, ಚಂದ್ರಿಕಾ ಮಂಜುನಾಥ, ರತ್ನ ರೆಡ್ಡಿ, ವಿಜಯಲಕ್ಷ್ಮಿ ಬಸವರಾಜ, ವಾಣಿ ರಾಜ್, ಲಕ್ಷ್ಮಿ ಮಲ್ಲಿಕಾರ್ಜುನ್ಳ ಅವರುಗಳು ಆಟದಲ್ಲಿ ಮತ್ತು ವೇದಿಕೆಯ ನಿರ್ವಹಣೆಯಲ್ಲಿ ಭಾಗವಹಿಸಿದ್ದರು.
ಬಸವ ಮೀಡಿಯಾ Facebook ಪುಟ ಸೇರಲು ಕ್ಲಿಕ್ ಮಾಡಿ
https://www.facebook.com/basavamedia1/
