ಧಾರವಾಡ
‘ಡಾ. ಎಂ.ಎಂ. ಕಲಬುರ್ಗಿ ಅವರ 10ನೇ ಹುತಾತ್ಮ ದಿನಾಚರಣೆ’ ಇಂದು ಸಂಜೆ 5 ಗಂಟೆಗೆ ಧಾರವಾಡದ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ.
ಡಾ. ಎಂ. ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಎರಡು ಪುಸ್ತಕಗಳು ಬಿಡುಗಡೆಯಾಗಲಿವೆ.
ಡಾ. ವೀರಣ್ಣ ರಾಜೂರ ಅವರ ಸಂಪಾದನೆಯ “ಸತ್ಯವೆಂಬ ಕೂರಲಗನೆ ಹಿಡಿದು” ಹಾಗೂ ಬಸವ ಮೀಡಿಯಾ ಸಂಪಾದಕ ಎಂ.ಎ. ಅರುಣ ಅವರ “ಕಲಬುರ್ಗಿ ಕಲಿಸಿದ್ದು” ಇಂದು ಬಿಡುಗಡೆಯಾಗುತ್ತಿರುವ ಪುಸ್ತಕಗಳು.
ಹೆಸರಾಂತ ಭಾಷಾ ಶಾಸ್ತ್ರಜ್ಞರಾದ ಡಾ. ಜಿ.ಎನ್. ದೇವಿ ಅವರು ಗ್ರಂಥ ಬಿಡುಗಡೆ ಮಾಡಿ ಆಶಯ ನುಡಿಗಳನ್ನು ಆಡಲಿದ್ದಾರೆ.
ಹಿರಿಯ ಪತ್ರಕರ್ತ ಡಿ. ಉಮಾಪತಿ ವಿಶೇಷ ಉಪನ್ಯಾಸ ನೀಡುತ್ತಾರೆ. ಗ್ರಂಥಗಳ ಕುರಿತು ಎಂ ಎ ಅರುಣ್ ಮಾತನಾಡುವರು. ಕಲ್ಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ವೀರಣ್ಣ ರಾಜೂರ ಅಧ್ಯಕ್ಷತೆ ವಹಿಸುತ್ತಾರೆ.
ಕಲಬುರ್ಗಿಯವರ ಶ್ರೀಮತಿ ಉಮಾದೇವಿ ಸೇರಿದಂತೆ ಅವರ ಕುಟುಂಬದವರು ಹಾಗೂ ಖ್ಯಾತ ಸಂಶೋಧಕರ ಅಪಾರ ಶಿಷ್ಯ ಹಾಗೂ ಅಭಿಮಾನಿ ಬಳಗ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ. ಡಾ. ಮೃತ್ಯುಂಜಯ ಶೆಟ್ಟರ ಅವರಿಂದ ವಚನ ಗಾಯನ ಸಂಗೀತ ನಡೆಯಲಿದೆ.
ಪ್ರತಿಷ್ಠಾನದ ಸರ್ವ ಸದಸ್ಯರು ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ ಕೋರಿದ್ದಾರೆ.

ಕಲ್ಬುರ್ಗಿ ಅವರನ್ನು ಕ್ಕೋಲೆಗೈಯುವಂತೆ ಪ್ರೆರೇಪಿಸಿದ ಹಾಗು ಹಿಂದೂಹುಲಿಗಳೆಂದು ಕೊಲೆಗಾಡುಕರನ್ನು ಸನ್ಮಾನಿಸಿದ ನೀಚರಿಗೆ ಕಾನೂನು ಕ್ರಮಕ್ಕೆ ಗುರಿಪಡಿಸಬೇಕು ಮತ್ತು ಅವರಿಗೆ ಎಚ್ಚರಿಕೆ ನೀಡಬೇಕು.