ಕಲಬುರ್ಗಿ ಚಲೋ: ಬಹುತ್ವ ಸಂಸ್ಕೃತಿ ಉತ್ಸವಕ್ಕೆ ಲಿಂಗಾಯತ ಮಠಾಧೀಶರ ಬೆಂಬಲ

ಬಸವ ಮೀಡಿಯಾ
ಬಸವ ಮೀಡಿಯಾ

“ಕರ್ನಾಟಕದ ಶರಣ ಸಂಸ್ಕೃತಿಯನ್ನು ಆಪೋಶನ ತೆಗೆದುಕೊಳ್ಳಲು RSS ಸಂಸ್ಥೆಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ. ಅದನ್ನು ಪ್ರತಿರೋಧಿಸಲು ಲಿಂಗಾಯತ ಸ್ವಾಮೀಜಿಗಳು ಕೈ ಜೋಡಿಸಿರುವುದು ಸ್ವಾಗತಾರ್ಹ ಬೆಳವಣಿಗೆ”

ಕಲಬುರ್ಗಿ

ಸೌಹಾರ್ದ ಕರ್ನಾಟಕ ವೇದಿಕೆ ಆಯೋಜಿಸಿರುವ ಬಹುತ್ವ ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೊಳ್ಳಲು ಹಲವಾರು ಲಿಂಗಾಯತ ಮಠಾಧೀಶರು ಒಪ್ಪಿಗೆ ನೀಡಿದ್ದಾರೆ.

ಭಾಲ್ಕಿಯ ಶ್ರೀ ಬಸವಲಿಂಗ ಪಟ್ಟದ್ದೇವರು, ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಗದಗಿನ ಶ್ರೀ ತೋಂಟದ ಸಿದ್ಧರಾಮ ಸ್ವಾಮೀಜಿ, ಇಲಕಲ್ಲಿನ ಶ್ರೀ ಗುರುಮಹಾಂತ
ಸ್ವಾಮೀಜಿ, ಗುರುಮಠಕಲ್ ನ ಶ್ರೀ ಶಾಂತವೀರ ಸ್ವಾಮೀಜಿ, ಬಸವ ಕಲ್ಯಾಣದ ಪೂಜ್ಯ ಗಂಗಾಂಬಿಕ ಅಕ್ಕ ಸೇರಿದಂತೆ ಹಲವಾರು ಪ್ರಮುಖ ಶ್ರೀಗಳು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಬೀದರ್, ಕಲಬುರ್ಗಿ, ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗಳಿಂದ ಹಲವಾರು ಮಠಾಧೀಶರು ಉತ್ಸವದಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರಿದ್ದಾರೆ ಎಂದು ಸೌಹಾರ್ದ ಕರ್ನಾಟಕ ವೇದಿಕೆಯ ಆರ್ ಕೆ ಹುಡಗಿ ಹೇಳಿದರು.

ಸೇಡಂನಲ್ಲಿ RSS ಸಂಸ್ಥೆಗಳು ಜನವರಿ 29ರಿಂದ ಆಯೋಜಿಸಿರುವ ಭಾರತ ಸಂಸ್ಕೃತಿ ಉತ್ಸವಕ್ಕೆ ಪ್ರತಿಯಾಗಿ ಪ್ರಗತಿಪರ ಸಂಘಟನೆಗಳು ಸೌಹಾರ್ದ ಕರ್ನಾಟಕ ವೇದಿಕೆ ವತಿಯಿಂದ ಬಹುತ್ವ ಸಂಸ್ಕೃತಿ ಭಾರತೋತ್ಸವವನ್ನು ಜನವರಿ 17,18,19ರಂದು ಕಲಬುರ್ಗಿಯಲ್ಲಿ ಆಯೋಜಿಸಿವೆ.

“ನಮ್ಮ ಬೇರೆ ಬೇರೆ ತಂಡಗಳು ಅನೇಕ ಲಿಂಗಾಯತ ಸ್ವಾಮೀಜಿಯವರನ್ನು ಬೇಟಿಯಾಗಿ ಕಲಬುರ್ಗಿ ಉತ್ಸವದಲ್ಲಿ ಪಾಲ್ಗೊಳ್ಳಲು ಮಾಡಿಕೊಂಡಿರುವ ಮನವಿಗೆ ಉತ್ತಮ ಪ್ರತಿಕ್ರಿಯೆ ಬಂದಿದೆ,” ಹುಡಗಿ ತಿಳಿಸಿದರು.

17ನೇ ತಾರೀಕು ಧಾರವಾಡದಲ್ಲಿ ಲಿಂಗಾಯತ ಮಠಾಧೀಶರ ಒಕ್ಕೂಟದ ಸಭೆ ನಡೆಯುತ್ತಿದೆ. ಅಲ್ಲಿ ನಮ್ಮ ಆಹ್ವಾನವನ್ನು ಎಲ್ಲರಿಗೂ ತಿಳಿಸಿ ಬಹುತ್ವ ಸಂಸ್ಕೃತಿ ಉತ್ಸವದಲ್ಲಿ ಪಾಲ್ಗೊಳ್ಳಲು ಸದಸ್ಯರಿಗೆ ಕರೆ ನೀಡುವಂತೆ ಕೋರಿಕೊಂಡಿದ್ದೇವೆ ಎಂದು ಹೇಳಿದರು

ಕರ್ನಾಟಕದ ಶರಣ ಸಂಸ್ಕೃತಿಯನ್ನು ಆಪೋಶನ ತೆಗೆದುಕೊಳ್ಳಲು RSS ಸಂಸ್ಥೆಗಳು ನಿರಂತರವಾಗಿ ಪ್ರಯತ್ನಿಸುತ್ತಿವೆ. 2024ರಲ್ಲಿ ವಚನಗಳನ್ನು ವಿರೂಪಗಳಿಸುವ, ಕಲ್ಯಾಣ ಕ್ರಾಂತಿಯನ್ನೇ ನಿರಾಕರಿಸುವ ಪ್ರಯತ್ನವನ್ನು ‘ವಚನ ದರ್ಶನ’ ಪುಸ್ತಕದ ಮೂಲಕ ಸಂಘ ಪರಿವಾರ ಮಾಡಿತು.

ಅದೇ ತಂಡ ಈಗ ಭಾರತ ಸಂಸ್ಕೃತಿ ಉತ್ಸವ ಆಯೋಜಿಸಿ ಲಕ್ಷಾಂತರ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಅದನ್ನು ಪ್ರತಿರೋಧಿಸಲು ಲಿಂಗಾಯತ ಸ್ವಾಮೀಜಿಗಳು ಕೈ ಜೋಡಿಸಿರುವುದು ಸ್ವಾಗತಾರ್ಹ ಬೆಳವಣಿಗೆ. ಜಾಗತಿಕ ಲಿಂಗಾಯತ ಮಹಾಸಭೆಯ ಸ್ಥಳೀಯ ಘಟಕಗಳ ಸದಸ್ಯರೂ ಸಕ್ರಿಯವಾಗಿ ಬಹುತ್ವ ಸಂಸ್ಕೃತಿ ಉತ್ಸವಕ್ಕೆ ದುಡಿಯುತ್ತಿದ್ದಾರೆ, ಎಂದು ಹುಡಗಿ ಹೇಳಿದರು.

Share This Article
5 Comments
  • ‌ಸೌಹಾರ್ಧ ಕರ್ನಾಟಕ ಬಹುತ್ವ ಭಾರತೋತ್ಸವ
    ಸಮಾವೇಶ ಕಾರ್ಯಕ್ರಮದಲ್ಲಿ ಲಿಂಗಾಯತ
    ಮಠಾಧೀಶರು ಭಾಗವಹಿಸುತ್ತಿರುವದು
    ಉತ್ತಮ ಬೆಳವಣಿಗೆ. ಇದರಂತೆ ದಿನಾಂಕ
    29-01-2025 ರಂದು ಕಲಬುರ್ಗಿ ಜಿಲ್ಲೆಯ
    ಸೇಡಂ ನಲ್ಲಿ ,ಲಿಂಗಾಯತರನ್ನು ಹಾದಿ
    ತಪ್ಪಿಸುವ ” ಭಾರತ ವಿಕಾಸ” ಕಾರ್ಯಕ್ರಮವನ್ನು
    ಲಿಂಗಾಯತ ಮಠಾಧೀಶರು ತಮಗೆ ಕೊಟ್ಟ ಆಹ್ವಾನ
    ಬಹಿಷ್ಕರಿಸಿ. ವಚನ ಸಂಸ್ಕೃತಿಯನ್ನು ವೈದಿಕ ಸಂಸ್ಕೃತಿಯ
    ಜೊತೆಗೆ ಸಮೀಕರಿಸುವ ಕುತಂತ್ರಕ್ಕೆ ಪ್ರತಿರೋಧ ಒಡ್ಡಿ.

  • ಎಲ್ಲಾ ಲಿಂಗಾಯತ ಮಾತಾಧೀಶರುಗಳು ಭಾರತ ಸಂಸ್ಕೃತಿ ಉತ್ಸವವನ್ನು ಬಹಿಷ್ಕರಿಸುವ ಧೈರ್ಯ ತೋರಿ ಭಹಿಷ್ಕರಿಸಲಿ.

    • ಲಿಂಗಾಯತ ಸಂಸ್ಕೃತಿ, ವಿಶ್ವಮಾನವ ಸಂಸ್ಕೃತಿ. ಲಿಂಗಾಯತರು ಈ ಸಂಸ್ಕೃತಿಯನ್ನು ಉಳಿಸಿಕೊಳ್ಳದೆ ಹೋದರೆ!! ಅದು ಐತಿಹಾಸಿಕ ಪ್ರಮಾದವಾದಿತು.. ಮುಂಬರುವ ಪೀಳಿಗೆ ನಮ್ಮನ್ನು ಕ್ಷಮಿಸಲಾರದು..

      ಕೋಮುವಾದಿಗಳ ಇತಿಹಾಸದ ಹೆಗ್ಗುರತುಗಳನ್ನು ನಾವು ತಿಕ್ಷಣವಾಗಿ ಪರಿಗಣಿಸಿ.. ತಿಳಿಯದೆ ಹೋದರೆ.. ಅದು ನಮ್ಮ ಸಮಾಪ್ತಿಯ ಮುನ್ನುಡಿ ಅಷ್ಟೆ..

  • ಲಿಂಗಾಯತ ಒಕ್ಕೂಟದ ಮಠಾಧೀಶರುಗಳು 17ನೇ ತಾರೀಖು ಸಭೆ ಸೇರುವುದು ಸಂತೋಷದ ವಿಷಯ….🙏🙏

  • 17ನೇ ತಾರೀಖಿನ ಲಿಂಗಾಯತ ಒಕ್ಕೂಟದ ಮಠಾಧೀಶರುಗಳು ಸಭೆಯಲ್ಲಿ ವಚನ ಸಂಸ್ಕೃತಿಯನ್ನು ಬೆಳೆಸುವ ದಿಶೆಯಲ್ಲೆ ಕಾರ್ಯ್ ನಡೆಯಬೇಕು.

Leave a Reply

Your email address will not be published. Required fields are marked *