ಧಾರವಾಡ
ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿದ್ದ ‘ಕಲಬುರ್ಗಿ ಕಲಿಸಿದ್ದು’ ಅಂಕಣ ಈಗ ಪುಸ್ತಕ ರೂಪದಲ್ಲಿ ಬರುತ್ತಿದೆ. ಡಾ ಎಂ ಎಂ ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದಿಂದ ಪ್ರಕಟವಾಗಿರುವ ಪುಸ್ತಕ ಆಗಸ್ಟ್ 30ರ ಸಂಜೆ ನಗರದ ಆಲೂರ ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಬಿಡುಗಡೆಯಾಗುತ್ತಿದೆ.
ಸತ್ಯ ಶೋಧಕರೆಂದೇ ಹೆಸರಾಗಿರುವ ಹುತಾತ್ಮ ಡಾ. ಎಂ.ಎಂ. ಕಲಬುರ್ಗಿಯವರ ಮುಖ್ಯ ಚಿಂತನೆಯನ್ನು ಸರಳ ಕನ್ನಡದಲ್ಲಿ ಪರಿಚಯಿಸುವ 102 ಕಿರು ಬರಹಗಳ ಸಂಗ್ರಹವಿದು.
ಲಿಂಗಾಯತ ಧರ್ಮ, ಶರಣ ಚಳುವಳಿ, ವೀರಶೈವ, ಪಂಚಾಚಾರ್ಯರು, ಕನ್ನಡ, ಅನುಭವ ಮಂಟಪ, ಹಂಪಿ, ಬಸವವೋತ್ತರ ಬೆಳವಣಿಗೆಗಳು ಮುಂತಾದ 23 ವಿಷಯಗಳ ಮೇಲೆ ಬೆಳಕು ಚೆಲ್ಲುವ ಬರಹಗಳಿವೆ.
“ಕಲಬುರ್ಗಿಯವರ ಬರಹಗಳನ್ನು ಸಂಕ್ಷಿಪ್ತಗೊಳಿಸುವುದು ಸುಲುಭದ ಮಾತಲ್ಲ. ಹೀಗಿದ್ದೂ ಒಟ್ಟು ಲೇಖನವನ್ನು ಸಮಗ್ರ ಓದಿಗೆ ಒಳಪಡಿಸಿ ಅದರ ಸಾರವನ್ನು ಸಂಗ್ರಹಿಸಿ ಸರಳಗನ್ನಡದಲ್ಲಿ ಹಿಡಿದಿಡುವ ಕಾರ್ಯ ಬಹಳ ಪರಿಶ್ರಮದ್ದು,” ಎಂದು ಪ್ರತಿಷ್ಠಾನದ ಅಧ್ಯಕ್ಷ ವೀರಣ್ಣ ರಾಜೂರ ಹೇಳಿದರು
“ಸರಳ ಕನ್ನಡದಲ್ಲಿ ಮಕ್ಕಳಿಗೂ ಅರ್ಥವಾಗುವಂತೆ ವಿವರಿಸುವ ಉದ್ದೇಶ ಕಲಬುರ್ಗಿ ಕಲಿಸಿದ್ದು ಅಂಕಣದ್ದು,” ಎಂದು ಮೈಸೂರಿನ ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯಕರ್ತ ಬಸವ ಕುಮಾರ್ ಹೇಳಿದರು. ಪ್ರತಿ ಶನಿವಾರ ಬರುತ್ತಿದ್ದ ಅಂಕಣವನ್ನು ಬಸವ ಕುಮಾರ್ ವಿನ್ಯಾಸಗೊಳಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚುತ್ತಿದ್ದರು.
“ಕಲಬುರ್ಗಿ ಕಲಿಸಿದ್ದು ಅಂಕಣಕ್ಕೆ ಪ್ರತಿಷ್ಠಾನದ ಅನುಮೋದನೆ ದೊರೆತಿರುವುದು ವಿಶ್ವಾಸ ಮೂಡಿಸುವಂತಹ ವಿಷಯ. ಸಧ್ಯಕ್ಕೆ ಕೆಲಸದ ಒತ್ತಡದಿಂದ ಅಂಕಣಕ್ಕೆ ಸಣ್ಣ ವಿರಾಮ ಕೊಟ್ಟಿದ್ದೇನೆ. ಅವಕಾಶ ಸಿಕ್ಕಿದರೆ ಮುಂದುವರೆಸುತ್ತೇನೆ,” ಲೇಖಕ ಹಾಗೂ ಬಸವ ಮೀಡಿಯಾ ಸಂಪಾದಕ ಎಂ ಎ ಅರುಣ್ ಹೇಳಿದರು.
ಕಲಬುರ್ಗಿ ಕಲಿಸಿದ್ದು
ಪುಟ 120
ಬೆಲೆ 60 ರೂಪಾಯಿ ಮಾತ್ರ
ಪ್ರಕಾಶಕರು – ಡಾ ಎಂ ಎಂ ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ


Being a journalist, Arun has done a significant work. He is not a student of Literature and ll language. But his work on Dr.M. M. Kalburgi is a fitting tribute to. great scholar, researcher and an activist. Congratulations.
ಶರಣರೇ ಈ ಪುಸ್ತಕ ಖರೀದಿಸುವ ಬಗೆ ಹೇಗೆ ಅಂತ ತಿಳಿಸಿಕೊಡಿ, ಶರಣು ಶರಣಾರ್ಥಿ 🙏🙏