ಬಸವನಬಾಗೇವಾಡಿ
ಬಸವ ಸಂಸ್ಕೃತಿ ಅಭಿಯಾನದಲ್ಲಿ ಸಾಣೇಹಳ್ಳಿ ಶ್ರೀಗಳು ಹುತಾತ್ಮ ಡಾ. ಎಂ. ಎಂ. ಕಲಬುರ್ಗಿಯವರನ್ನು ಸ್ಮರಿಸಿಕೊಂಡರು.
ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ವಚನಗಳ ಅನುಗುಣವಾಗಿ ನಡೆ ನುಡಿಗಳನ್ನು ರೂಪಿಸಿಕೊಳ್ಳಲು ಕರೆ ನೀಡಿದರು.
ಸರಕಾರ ವಚನಗಳ 15 ಸಂಪುಟ ಹೊರ ತಂದಿದೆ. ಅದನ್ನು ಸಂಪಾದಿಸಿದವರು ಡಾ. ಎಂ. ಎಂ. ಕಲಬುರ್ಗಿಯವರು. ಅಂತವರನ್ನೇ ಕೊಲೆ ಮಾಡಿದಂತಹ ನೀಚರು ಈ ನಾಡಿನಲ್ಲಿದ್ದಾರೆ, ಎಂದು ಹೇಳಿದರು.
ಫ ಗು ಹಳಕಟ್ಟಿಯವರಿಲ್ಲದಿದ್ದರೆ ವಚನಗಳು ಏನಾಗ್ತಾ ಇದ್ದವೋ ಗೊತ್ತಿಲ್ಲ. ವಚನಗಳಿಗೆ ಅವರು ಒಂದು ಕಣ್ಣನ್ನೇ ಕೊಟ್ಟಿದ್ದಾರೆ, ಎಂದು ಶ್ರೀಗಳು ಹೇಳಿದರು.