ಕಲಬುರಗಿ
ನಗರದ ಜಿಲ್ಲಾ ಕೋರ್ಟ್ ರಸ್ತೆಯಲ್ಲಿರುವ ಮಹಾಂತ ನಗರದ ಬಸವ ಮಂಟಪದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ನೇತೃತ್ವದಲ್ಲಿ ನ.25ರಂದು ಸಂಜೆ 5.30ಕ್ಕೆ ಶರಣ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಆರ್.ಜಿ. ಶೆಟಗಾರ ಹೇಳಿದರು.
ಷಟ್ಸ್ಥಲ ಚಕ್ರವರ್ತಿ ಚನ್ನಬಸವಣ್ಣ, ಶರಣೆ ನೀಲಾಂಬಿಕಾ ತಾಯಿ ಕುರಿತು ಪ್ರೊ. ಸಿದ್ದು ಯಾಪಲಪರವಿ ಹಾಗೂ ಶರಣ ಡೆಪ್ಯೂಟಿ ಚನ್ನಬಸಪ್ಪ ಹಾಗೂ ಶರಣ ನಿಜಗುಣ ಶಿವಯೋಗಿ ಕುರಿತು ಪ್ರೊ. ವೈಜನಾಥ ಕೋಳಾರ ಉಪನ್ಯಾಸ ನೀಡುವರು’ ಎಂದು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅತಿಥಿಯಾಗಿ ಶಾಸಕ ಅಲ್ಲಮಪ್ರಭು ಪಾಟೀಲ ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ಕುಪೇಂದ್ರ ಪಾಟೀಲ ವಹಿಸುವರು. ಕಾರ್ಯಕ್ರಮದ ಸಾನ್ನಿಧ್ಯವನ್ನು ಧಾರವಾಡ ಜಿಲ್ಲೆಯ ಮನಗುಂಡಿಯ ಬಸವಾನಂದ ಸ್ವಾಮೀಜಿ ವಹಿಸುವರು. ಜೊತೆಗೆ ಅವರ ‘ವಚನ ಹೃದಯ ವಚನಾಂಕಿತಗಳ ವೈಶಿಷ್ಟ್ಯಮತ್ತು ವೈವಿಧ್ಯ’ ಕೃತಿಯ ಬಿಡುಗಡೆಯೂ ನಡೆಯಲಿದೆ’ ಎಂದು ವಿವರಿಸಿದರು.
12ನೇ ಶತಮಾನದ ಕಲ್ಯಾಣಕ್ರಾಂತಿಯಲ್ಲಿ ಪಾಲ್ಗೊಂಡಿದ್ದ ಶರಣರ ಜೀವನ ಸಾಧನೆಗೈದ ತತ್ವದ ಪ್ರಚಾರ, ಬಸವ ತತ್ವದ ಆಚರಣೆಯ ಅನುಷ್ಠಾನ ಹಾಗೂ ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಪಡೆಯುವುದು ಶರಣ ಸಂಗಮ ಕಾರ್ಯಕ್ರಮದ ಉದ್ದೇಶವಾಗಿದೆ. ಪ್ರತಿ ತಿಂಗಳೂ ಈ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಅವರು ವಿವರಿಸಿದರು.
ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ಹಣಮಂತರಾಯ ಕುಸನೂರ ಇತರರಿದ್ದರು.