ನಾಳೆ ಇಷ್ಟಲಿಂಗ ಪೂಜಾ ನಿರತ ಬಸವಣ್ಣನವರ ಪ್ರತಿಮೆ ಅನಾವರಣ

ಕಲಬುರಗಿ

ಜಿಲ್ಲೆಯ ಆಳಂದ ತಾಲ್ಲೂಕಿನ ಭೂಸನೂರ ಗ್ರಾಮದಲ್ಲಿ ನೀಲಾಂಬಿಕಾ ಕಲ್ಯಾಣ ಮಂಟಪ ಹಾಗೂ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಇಷ್ಟಲಿಂಗ ಪೂಜಾ ನಿರತ ಪ್ರತಿಮೆ ಅನಾವರಣ ನಿಮಿತ್ತ ನ. 2 ರಿಂದ ನ. 10ರವರೆಗೆ ಪ್ರತಿದಿನ ಸಂಜೆ 7.30ರಿಂದ ‘ಶರಣರ ಕಾಯಕ ಜೀವನ ಕುರಿತು ಅತ್ತಿವೇರಿ ಪೂಜ್ಯಶ್ರೀ ಬಸವೇಶ್ವರಿ ಮಾತಾಜಿ ಅವರಿಂದ ಪ್ರವಚನ ಕಾರ್ಯಕ್ರಮ ನಡೆಯುತ್ತಿದೆ ಎಂದು ಗ್ರಾಮದ ರಾಜಶೇಖರ ಯಂಕಂಚಿ ತಿಳಿಸಿದ್ದಾರೆ.

ನ. 10ರಂದು ಬೆಳಗ್ಗೆ 11 ಗಂಟೆಗೆ ನೀಲಾಂಬಿಕಾ ಕಲ್ಯಾಣ ಮಂಟಪವನ್ನು ಲೋಕೋಪಯೋಗಿ ಸಚಿವ ಶ್ರಿ ಸತೀಶ ಜಾರಕಿಹೊಳಿ/ ಪ್ರಿಯಾಂಕ್ ಜಾರಕಿಹೊಳಿ ಉದ್ಘಾಟಿಸಲಿದ್ದಾರೆ.

ರಾಜಶೇಖರ ಯಂಕಂಚಿ

ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಇಷ್ಟಲಿಂಗ ಪೂಜಾ ನಿರತ ಪ್ರತಿಮೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅನಾವರಣ ಮಾಡಲಿದ್ದಾರೆ. ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ಆಳಂದ ಮತಕ್ಷೇತ್ರದ ಶ್ರೀ ಬಿ.ಆರ್. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.

ಭಾಲ್ಕಿ ಹಿರೇಮಠದ ಪೂಜ್ಯಶ್ರೀ ನಾಡೋಜ ಡಾ.‌ಬಸವಲಿಂಗ ಪಟ್ಟದ್ದೇವರು, ಇಳಕಲ್ಲ ಚಿತ್ತರಗಿ ವಿಜಯಮಹಾಂತೇಶ್ವರ ಮಠದ ಗುರುಮಹಾಂತ ಸ್ವಾಮೀಜಿ, ಜಿಡಗಾ- ಮುಗಳಖೋಡ ಮಠದ ಡಾ. ಮುರುಘರಾಜೇಂದ್ರ ಸ್ವಾಮೀಜಿ, ಸೊನ್ನ ವಿರಕ್ತಮಠದ ಡಾ. ಶಿವಾನಂದ ಸ್ವಾಮೀಜಿ, ಹುಲಸೂರಿನ ಶಿವಾನಂದ ಸ್ವಾಮೀಜಿ, ಗುರುಮಠಕಲ್ಲ ಖಾಸಾಮಠದ ಪೂಜ್ಯಶ್ರೀ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮೀಜಿ, ಸೊಲ್ಲಾಪುರ ಕಿರಿಟೇಶ್ವರ ವಿರಕ್ತ ಮಠದ ಪೂಜ್ಯಶ್ರೀ ಸ್ವಾಮಿನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಕಡಗಂಚಿ ಮಠದ ಪೂಜ್ಯಶ್ರೀ ವೀರಭದ್ರ ಶಿವಾಚಾರ್ಯರು, ಪೂಜ್ಯಶ್ರೀ ಹವಾ ಮಲ್ಲಿನಾಥ ಸ್ವಾಮೀಜಿ, ಪೂಜ್ಯಶ್ರೀ ಡಾ. ಗಂಗಾಂಬಿಕಾ ಅಕ್ಕ, ಪ್ರಭು ದೇವರು, ಪ್ರಭುಶ್ರೀ ತಾಯಿ, ಯಳಸಂಗಿ, ನರೋಣ, ಯಡ್ರಾಮಿ, ನೆಲೋಗಿ ಶ್ರೀಗಳು, ಮಾದನ ಹಿಪ್ಪರಗಾಶ್ರೀಗಳು ಮತ್ತಿತರ ಪೂಜ್ಯರು ಸಮ್ಮುಖ ವಹಿಸಲಿದ್ದಾರೆ.

ಸಂಸದ ರಾಧಾಕೃಷ್ಣ ದೊಡ್ಡಮನಿ, ಸಚಿವರಾದ ಶರಣಬಸಪ್ಪ ದರ್ಶನಾಪುರ, ಕೆಕೆಆರ್ ಡಿಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ. ಅಜಯಸಿಂಗ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಎಂ.ವೈ. ಪಾಟೀಲ, ಬಸವರಾಜ ಮತ್ತಿಮಡು, ಜಗದೇವ ಗುತ್ತೇದಾರ, ಮಾಜಿ ಶಾಸಕರಾದ ರಮೇಶ ಭೂಸನೂರ, ಸಿದ್ಧರಾಮ ಮೇತ್ರೆ, ಮುಖಂಡರಾದ ಆರ್.ಕೆ. ಪಾಟೀಲ, ಸುರೇಶ ಸಜ್ಜನ ಮತ್ತಿತರರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದರು.

ಪ್ರೇರಣೆ

ಭೂಸನೂರಿನ ಲಿಂಗಾಯತ ವಿರಕ್ತ ಮಠದ ಲಿಂ. ಮಡಿವಾಳೇಶ್ವರರು ಅಪ್ಪಟ ಬಸವ ಭಕ್ತರು. ಆಗಿನ ಕಾಲದಲ್ಲಿ ಗ್ರಾಮಕ್ಕೆ ಆಗಮಿಸುವ ಸಾರುವ ಅಯ್ಯನವರಿಗೆ “ಬಸವಣ್ಣನಿಗೆ ಜೈ ಅನ್ನಿರಿ” ಎಂದು ಹೇಳುತ್ತಿದ್ದರು. ಹೀಗಾಗಿ ಪೂಜ್ಯರ ಪ್ರಭಾವ ಗ್ರಾಮದ ಎಲ್ಲರ ಮೇಲೆ ಪ್ರಭಾವ ಬೀರಿದೆ. ಅವರ ನಿಷ್ಪೃಹ ಬಸವ ಭಕ್ತಿಯೇ ಇಂದಿನ ಕಲ್ಯಾಣ ಮಂಟಪ ಉದ್ಘಾಟನೆ ಹಾಗೂ ವಿಶ್ವಗುರು ಬಸವಣ್ಣನವರ ಪುತ್ಥಳಿ ಅನಾವರಣ ಕಾರ್ಯಕ್ರಮವಾಗಿದೆ. ಊರಿನ ಹಿರಿಯರ, ಯುವಕರ ಬೆಂಬಲವಿದೆ ಎಂದು ಬಸವ ಸೇವಾ ಪ್ರತಿಷ್ಠಾನದ ಜಿಲ್ಲಾಧ್ಯಕ್ಷ ರಾಜಶೇಖರ ಯಂಕಂಚಿ ತಿಳಿಸಿದ್ದಾರೆ.

Share This Article
Leave a comment

Leave a Reply

Your email address will not be published. Required fields are marked *