ಪ್ರಾಚೀನ ಲಿಂಗಾಯತ ಸಾಹಿತ್ಯದ ಕೇಂದ್ರ ಬಿಂದು ಬಸವಣ್ಣ

ಇತಿಹಾಸದ ಉದ್ದಕ್ಕೂ ಲಿಂಗಾಯತ ಕವಿಗಳ, ಲಿಪಿಕಾರರ, ಜನ ಸಾಮಾನ್ಯರ ಮನಸ್ಸನ್ನು ಆವರಿಸಿಕೊಂಡಿದ್ದವರು ಶರಣ ಸಮೂಹದ ನಾಯಕರಾಗಿದ್ದ ಬಸವಣ್ಣನವರು.

೮೦೦ ವರ್ಷಗಳ ಕಾಲ ಯಾವುದೇ ಕೃತಿಯ ನಕಲಿನ ಕಾರ್ಯವನ್ನು ಲಿಪಿಕಾರರು ‘ಶ್ರೀ ಗುರು ಬಸವ ಲಿಂಗಾಯ ನಮಃ’ ನಮಸ್ಕಾರ ವಾಕ್ಯದಿಂದ ಆರಂಭಿಸುತ್ತಿದ್ದರು.

ಸುಮಾರು ೫೦ ಜನ ವಚನಕಾರರ ೧೦೦೦ ವಚನಗಳಲ್ಲಿ ಬಸವಣ್ಣನವರ ಸ್ತುತಿ ಕಾಣಿಸಿಕೊಂಡಿದೆ. ಯಾವುದೇ ಕೃತಿಯ ಆರಂಭದ ಸ್ತುತಿ ಪ್ರಸಂಗದಲ್ಲಿ ಇವರಿಗೆ ಮುಖ್ಯ ಸ್ಥಾನ.

ಇವರನ್ನು ಸ್ತುತಿಸಲು ಸಮಕಾಲೀನ ಸಿದ್ದರಾಮ ‘ಬಸವ ಸ್ತೋತ್ರದ ತ್ರಿವಿಧಿ’ ಕೃತಿಯನ್ನು ರಚಿಸಿದ. ಇದನ್ನು ಬಸವ ನಾಮಾವಳಿ, ಬಸವ ರಗಳೆಗಳಂತಹ ಹಲವಾರು ಕೃತಿಗಳು ಅನುಸರಿಸಿದವು.

ಬಸವಣ್ಣನವರ ಮೇಲೆ ಹುಟ್ಟಿದ ಸಾಹಿತ್ಯಕ್ಕೆ ಹೋಲಿಸಿದರೆ ಅವರ ಸಮಕಾಲೀನರಾಗಿದ್ದ ಪ್ರಭುದೇವ, ಚನ್ನಬಸವಣ್ಣ, ಮಹಾದೇವಿಯರ ಮೇಲೆ ಬಂದ ಕೃತಿಗಳು ತೀರಾ ಕಡಿಮೆ.

ಅನ್ಯ ಶರಣರ ಬಗ್ಗೆ ರಚನೆಯಾದ ಚೆನ್ನಬಸವಪುರಾಣ, ಪ್ರಭುಲಿಂಗ ಲೀಲೆಗಳಂತಹ ಕೃತಿಗಳಲ್ಲಿಯೂ ಬಸವಣ್ಣನವರು ಪ್ರಧಾನವಾಗಿ ನಮ್ಮ ಗಮನ ಸೆಳೆಯುತ್ತಾರೆ.

ರಗಳೆ, ಷಟ್ಪದಿ, ತ್ರಿಪದಿ, ಚಂಪೂ, ಯಕ್ಷಗಾನಗಳಂತಹ ಎಲ್ಲ ಸಾಹಿತ್ಯ ಪ್ರಕಾರಗಳಲ್ಲಿಯೂ ಇವರ ಬಗ್ಗೆ ಕೃತಿಗಳು ಬಂದವು. ಸಂಸ್ಕೃತ, ಪಂಚಾಚಾರ್ಯರ ಸಾಹಿತ್ಯದಲ್ಲಿಯೂ ಬಸವನಿಷ್ಠೆ ಕಾಣಬಹುದು.

(‘ಬಸವಣ್ಣ: ಪ್ರಾಚೀನ ಲಿಂಗಾಯತ ಸಾಹಿತ್ಯದ ಒಂದು ಅನಿವಾರ್ಯತೆ‘ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೭.)

Share This Article
Leave a comment

Leave a Reply

Your email address will not be published. Required fields are marked *