ಯಲಬುರ್ಗಾ
ತಾಲ್ಲೂಕಿನ ಮರಕಟ್ಟ ಗ್ರಾಮದ ಬಸವ ಕೇಂದ್ರದ ವತಿಯಿಂದ ಶ್ರಾವಣ ಮಾಸದ ನಿಮಿತ್ತವಾಗಿ, ವಚನಗಳ ನಡಿಗೆ ಮನೆ ಮನಗಳ ಕಡೆಗೆ ಎಂಬ ಕಾಯ೯ಕ್ರಮದ ೨ನೇ ವಷ೯ದ ೨೨ ನೇ ದಿನದ ಕಾಯ೯ಕ್ರಮ
ಶನಿವಾರ ಸಂಜೆ ಕಲ್ಲಭಾವಿ ಗ್ರಾಮದ ಶರಣೆ ಮಹಾಂತಮ್ಮ ಭರಮಣ್ಣ ಹುಣಿಸಿಹಾಳ ಅವರ ಮನೆಯಲ್ಲಿ ನಡೆಯಿತು.
ಕಾಯ೯ಕ್ರಮದ ಅಧ್ಯಕ್ಷತೆಯನ್ನು ಮರಕಟ್ಟ ಬಸವ ಕೇಂದ್ರದ ಗೌರವಾಧ್ಯಕ್ಷ ಹನಮಗೌಡ ಬಳ್ಳಾರಿ ಇವರು ವಹಿಸಿದ್ದರು. ಸಾನಿಧ್ಯವನ್ನು ಕಲ್ಲಭಾವಿ ಗ್ರಾಮದ ವಿರೂಪಾಕ್ಷಯ್ಯ ಹಿರೇಮಠ ಇವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿದ್ದ ಬಸವರಾಜಪ್ಪ ಇಂಗಳಧಾಳ ಅವರು, ಕನಾ೯ಟಕದ ಸಾಂಸ್ಕ್ರತಿಕ ನಾಯಕ ಬಸವಣ್ಣ ಎಂಬ ವಿಷಯದ ಬಗ್ಗೆ ಮಾತನಾಡುತ್ತಾ, ಬಸವಪೂವ೯ ಯುಗದಲ್ಲಿ ಇದ್ದಂತಹ ಸಾಮಾಜಿಕ ಮತ್ತು ಆಧ್ಯಾತ್ಮಿಕತೆಯಲ್ಲಿದ್ದ ಅಸಮಾನತೆಯನ್ನು ಹೋಗಲಾಡಿಸಿ, ಎಲ್ಲರೂ ಸಾಧನೆಯ ಮೂಲಕ ದೇವನನ್ನು ಕೂಡುವ ಅವಕಾಶ ಮಾಡಿದ ಮೊದಲ ವಿಶ್ವದ ನಾಯಕ ಬಸವಣ್ಣ ಎಂಬ ಮಾತನ್ನು ತಿಳಿಸಿದರು.
ಕೇಂದ್ರದ ಅಧ್ಯಕ್ಷ ಅಮರೇಶಪ್ಪ ಬಳ್ಳಾರಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹನಮಂತಪ್ಪ ಹುಣಿಸಿಹಾಳ ಅವರು ಸ್ವಾಗತ ಕೋರಿದರು. ಶರಣ ಶರಣೆಯರು ಪಾಲ್ಗೊಂಡಿದ್ದರು.