ಬಸವಕಲ್ಯಾಣ:
ಬಸವಕಲ್ಯಾಣದಲ್ಲಿ ನಡೆಯುವ ೪೬ನೆಯ ಶರಣ ಕಮ್ಮಟ ಹಾಗೂ ಅನುಭವಮಂಟಪ ಉತ್ಸವ-೨೦೨೫ ನಿಮಿತ್ಯ ಅತ್ತಿವೇರಿ ಬಸವಧಾಮದ ಪೂಜ್ಯ ಬಸವೇಶ್ವರಿ ಮಾತಾಜಿ ಅವರಿಂದ ಹಮ್ಮಿಕೊಂಡಿರುವ ಕಲ್ಯಾಣ ದರ್ಶನ ಪ್ರವಚನದ ಮಂಗಲ ನವೆಂಬರ್ ೨೭, ೨೦೨೫ ರಂದು ಸಾಯಂಕಾಲ ೫-೩೦ ಗಂಟೆಗೆ ನಡೆಯಲಿದೆ.
ನಾಡೋಜ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಹಾಗೂ ಪೂಜ್ಯ ವಿಜಯಕುಮಾರ ಮಹಾಸ್ವಾಮಿಗಳು, ತಾಂಬೋಳ-ಕಾಸರಸಿರ್ಸಿ ಅವರು ಸಾನಿಧ್ಯ ವಹಿಸುವರು. ಸಹಾಯಕ ಆಯುಕ್ತ ಪ್ರಕಾಶ ಕುದರೆ, ಮಹಾದೇವಪ್ಪ ಇಜಾರೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಜಗನ್ನಾಥ ಪತಂಗೆ ಅವರಿಂದ ಸ್ವಾಗತ, ನಿರೂಪಣೆ ಡಾ. ಸಂಗೀತಾ ರಮೇಶ ಮಂಠಾಳೆ ಅವರು ಮಾಡಲಿದ್ದಾರೆ. ರಾಜಕುಮಾರ ಹೂಗಾರ ಅವರ ವಚನ ಸಂಗೀತ ಜರುಗುವುದು.
