ಬಾಗಲಕೋಟೆ
ಮಹಾಶರಣ ಕಲ್ಲಯ್ಯನವರು ಬಸವ ತತ್ವ ಪರಿಪಾಲಕರಾಗಿದ್ದು, ಎಲ್ಲರೂ ಬಸವ ತತ್ವ ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ನವನಗರದ ಕಲಾಭವನದಲ್ಲಿ ಕಂಬಾರರ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಶಾಸಕ ಜೆ.ಟಿ.ಪಾಟೀಲ ಮಾತನಾಡಿ ಒಕ್ಕಲುತನ ಉಪಕರಣ ತಯಾರಿಸುತ್ತ ಕಾಲಕ್ಕೆ ತಕ್ಕಂತೆ ಬದಲಾವಣೆ ಹೊಂದಿರಿ. ಶೈಕ್ಷಣಿಕ, ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.
ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ ಗ್ರಾಮಗಳಲ್ಲಿ ನಡೆಯುವ ಕೃಷಿ ಚಟುವಟಿಕೆಗೆ ಕಮ್ಮಾರರೇ ಮೂಲವಾಗಿದ್ದಾರೆ. ಶರಣ ಕಮ್ಮಾರ ಕಲ್ಲಯ್ಯನವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ. ಮಕ್ಕಳಿಗೆ ಶಿಕ್ಷಣ ನೀಡುವತ್ತ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ಮಾಡಿದರು.
ಬೀಳಗಿ ಜ್ಞಾನಾಶ್ರಮದ ದಶರಥ ಕಂಬಾರ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಎಚ್.ವೈ.ಮೇಟಿ, ವಿಜಯಾನಂದ ಕಾಶಪ್ಪನವರ, ಸಾಗರ ತೆಕ್ಕೆನ್ನವರ, ರಕ್ಷಿತಾ ಈಟಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮುತ್ತಗಿ ಗ್ರಾಮದ ಶರಣ ಕಲ್ಲಯ್ಯನವರ ವಂಶಸ್ಥರನ್ನು ಸನ್ಮಾನಿಸಲಾಯಿತು.