ಬೆಂಗಳೂರು
ಇಂದು ನಮ್ಮ ನಾಡು ಮತ್ತೊಮ್ಮೆ ಉದಯಿಸಿದ ಕ್ಷಣ.
ಕದಂಬ ಗಂಗ ಚಾಲುಕ್ಯ ರಾಷ್ಟ್ರಕೂಟರಾದಿಯಾಗಿ ಕನ್ನಡದ ಕೊಂಬು ಕಹಳೆ ಗಡಚಿಟ್ಟ ಆ ದಿನಗಳನ್ನ ಮತ್ತೆ ನಮಗಾಗಿ ಏಕಿಕರಣ ಮಾಡಿ ಕೊಟ್ಟವರು ಕಂಬಳಿ ಸಿದ್ದಪ್ಪ, ರಾ ಹು ದೆಶಪಾಂಡೆ, ಹೆರ್ಡೇಕರ್ ಮಂಜಪ್ಪ, ಆಲೂರು ವೆಂಕಟರಾಯರು, ರಂಜಾನ ಬಾಬಾ ಮುಂತಾದವರು. ಇಂತಹ ಅನೇಕ ಗಣ್ಯರ ಹೋರಾಟದಿಂದಾಗಿ ಮತ್ತೆ ಕರುನಾಡು ತಲೆ ಎತ್ತಿ ನಿಂತಿದೆ.
ಆದರೆ ಇನ್ನೂ ಶತಮಾನದ ಸೋಲುಗಳಿಗೆ ರಣಕ್ಷರಗಳನ್ನ ಪೋಣಿಸಿ ತಾಯಿ ಭುವನೇಶ್ವರಿಯ ಜಯತಿಲಕದ ಹೊಳಪನ್ನು ದಶದಿಕ್ಕೂಗಳಿಗೂ ಕೂಕ್ಕಿಸುವ ಕೆಲಸ ನಮ್ಮಿಂದಾಗಬೇಕಾಗಿದೆ, ಕನ್ನಡದ ಕೀರ್ತಿ ಕಹಳೆಗಳು ಮತ್ತೊಮ್ಮೆ ಬೋರ್ಗರೆಯಬೇಕಿದೆ, ನಾವೆಲ್ಲರೂ ಕನ್ನಡಿಗರೆಂದು ಘರ್ಜಿಸಬೇಕಿದೆ.
ಈ ಪವಿತ್ರ ಕನ್ನಡ ಹಬ್ಬದಂದು ನಾವೆಲ್ಲ ಒಂದು ನಿರ್ಧಾರ ಮಾಡೋಣವೇ?
ಮುಂದಿನ ಒಂದು ವರುಷ ನಾವು ನಿರಂತರವಾಗಿ ಹೋರಾಡೊಣ ಏತಕ್ಕಾಗಿ – ಕೇಂದ್ರದ ಪರೀಕ್ಷೆಗಳು ಕನ್ನಡದಲ್ಲಿ ಬರಲಿ, #ಹಿಂದಿಹೇರಿಕೆನಿಲ್ಲಲಿ #SSCDroha #UPSCKannada #ರಾಜ್ಯಗಳಸ್ವಾಯತ್ತತೆ #IBPSMosa #ನಮ್ಮTaxನಮಗೆಕೊಡಿ #ಅನಿಯಂತ್ರಿತವಲಸೆನಿಲ್ಲಲಿ ಇವೆಲ್ಲಕ್ಕಾಗಿ ಒಕ್ಕೊರಲಿನಿಂದ ದ್ವನಿ ಎತ್ತೋಣ, ನಿರಂತರವಾಗಿ ನಮ್ಮ ಹಕ್ಕುಗಳಿಗಾಗಿ ಹೋರಾಡೋಣ.
ನಮ್ಮ ಸ್ವಾತಂತ್ರ್ಯಕ್ಕಾಗಿ ನಮ್ಮ ನುಡಿ ಸಮಾನತೆಗಾಗಿ ನಿತ್ಯ ನಿರಂತರವಾಗಿ ಎದ್ದು ನಿಲ್ಲೋಣ!
ನಾವು ಸಾಯುವದೊರಳಗಾಗಿ ಸರ್ವಸ್ವತಂತ್ರ ಸಂಪೂರ್ಣ ಆನಂದದ #ನಾಡಹಬ್ಬ ಮಾಡೋಣ ಎಂದು ಇಂದೆ ಪಣತೊಡೊಣ