ಹಿಂದುತ್ವ ಚಾನೆಲ್​​​ಗಳನ್ನು ಬಸವಭಕ್ತರು ಬಹಿಷ್ಕರಿಸಲಿ

ಬಾಗಲಕೋಟೆ

ಶುಕ್ರವಾರ ರಂದು ಸುವರ್ಣ ನ್ಯೂಸ್ ಚರ್ಚೆ ನೋಡಿದೆ…

ಯಥಾ ಪ್ರಕಾರ ಹಿಂದುತ್ವದ ಪತ್ರಕರ್ತ ಅಜಿತ್ ಹನುಮಕ್ಕನವರ ಜೈನ್ ಚರ್ಚೆಯನ್ನು ಏಕಪಕ್ಷೀಯವಾಗಿ ನಡೆಸಿದ.

ಕನ್ನೇರಿ ಸ್ವಾಮಿ ಮತ್ತು ಎ.ಎಸ್ .ಪಾಟೀಲ್ ಇಬ್ಬರಿಗೆ ಮುಕ್ಕಾಲು ಗಂಟೆ ಮಾತನಾಡಲು ಅವಕಾಶ ಕೊಟ್ಟ.

ಕನ್ನೇರಿ ಸ್ವಾಮಿ ತನ್ನ ಮಾತನ್ನು ವಿಜಾಪುರ ಭಾಷೆ ಅಂತಾ ಹೇಳಿ ಬಸವ ಸಂಸ್ಕೃತಿ ಅವರು ಹಿಂದೂ ಸನಾತನ ವಿರೋಧಿಗಳು ವಾಚಮಗೋಚರವಾಗಿ ನಿಂದಿಸುತ್ತಾ ಹೋದ.

ಎ.ಎಸ್ ಪಾಟೀಲ್ ಎಂಬ ಮಾಜಿ ಶಾಸಕ ಸ್ಟುಡಿಯೋದಲ್ಲಿದ್ದ ಬಸವಾನುಯಾಯಿಗಳನ್ನ ಟೀಕಿಸುತ್ತಾ ಹೋದ.

ಸುವರ್ಣ ನ್ಯೂಸ್ ಮತ್ತು ರಿಪಬ್ಲಿಕ್ ಟಿವಿ ಕನ್ನಡಗಳಂತಹ ಹಿಂದುತ್ವ ಸುದ್ದಿವಾಹಿನಿಗಳು ಬಸವ ಸಂಸ್ಕೃತಿ ಮಠಾಧೀಶರನ್ನು ಹಿಂದೂ ಸನಾತನ ವಿರೋಧಿಗಳು ಎಂದು ಪ್ರತಿಬಿಂಬಿಸಲು ಸದಾ ಪ್ರಯತ್ನ ಮಾಡುತ್ತಾರೆ.

ಇವರಿಗೆಲ್ಲ ಕನ್ನೇರಿ ಸ್ವಾಮಿ, ದಿಂಗಾಲೇಶ ಸ್ವಾಮಿ, ಎ.ಎಸ್.ಪಾಟೀಲ್ ನಡಹಳ್ಳಿ ಮತ್ತೀತರ ಬಾಯಿಹರುಕರ ಮಾತುಗಳೇ ವೇದ ವಾಕ್ಯ.

ಇಂತಹ ಚಾನಲ್ ಗಳನ್ನು ಬಸವ ಭಕ್ತರು ಬಹಿಷ್ಕಾರ ಹಾಕಬೇಕು.

ಬಸವ ಮೀಡಿಯಾ ಯೂ ಟ್ಯೂಬ್ ಚಾನೆಲ್ ಸೇರಿ
https://www.youtube.com/@basavamedia1

Share This Article
1 Comment
  • ನಾನೂ ನೋಡಿದೆ ಅವರು ಚಂದ್ರಮೌಳಿ ಮಾತನಾಡುವಾಗ ಇಂದಿನ ವಿಷಯ ಕನೇರಿ ಶ್ರೀಗಳಿಗೆ ಪ್ರತಿಬಂಧನೆ ಮಾಡಿರುವುದು ಸರಿನಾ ಎಂದು, ಆದುದರಿಂದ ಬೇರೆ ಏನನ್ನೂ ಮಾತನಾಡಬಾರದು, ನಾವು ಏನು ಮತ್ತು ಎಷ್ಟು ಮಾತನಾಡಬೇಕು ಎಂದು ನಿರ್ಧರಿಸುವವರು ಎಂದೆಲ್ಲಾ ಹೇಳುತ್ತಾ ಚಂದ್ರಮೌಳಿಯವರನ್ನು ಮಾತನಾಡಲು ಬಿಡಲಿಲ್ಲ. ಶ್ರೀಗಳು ಮತ್ತು ನಡಹಳ್ಳಿ ವಿಷಯವೊಂದನ್ನು ಬಿಟ್ಟು ಬೇರೆಲ್ಲಾ ಮಾತನಾಡಿದರೂ ಅವರಿಗೆ ಹೆಚ್ಚಿನ ಪ್ರಾಶಸ್ತ್ಯ ಮತ್ತು ಸಮಯ. ನಡಹಳ್ಳಿಯಂತೂ ಅವರೇ ಆಂಕರ್ ತರಹ ಕಂಟ್ರೋಲ್ ಮಾಡುತ್ತಿದ್ದರು, ಏರು ದ್ವನಿಯಲ್ಲಿ ಸಂಬಂಧಪಡದ ವಿಷಯವನ್ನೇ ಹೇಳುತ್ತಿದ್ದರು. ಈ ಚಾನೆಲ್ಲು ಮತ್ತು ರಿಪಬ್ಲಿಕ್ ಚಾನೆಲ್ಲುಗಳಿಗೆ ಚರ್ಚೆಗೆ ಹೋಗುವುದು ನಿಜಕ್ಕೂ ಸಮಯದ ವ್ಯರ್ಥ. ಬಹಿಷ್ಕರಿಸುವುದು ಒಳ್ಳೆಯದು.

Leave a Reply

Your email address will not be published. Required fields are marked *