ಬೆಂಗಳೂರು
ಬಸವ ಸಂಸ್ಕೃತಿ ಅಭಿಯಾನದ ನಂತರ ಕೆಲವು ಸ್ವಾಮಿಗಳ ವಿರುದ್ಧ ಮತ್ತು ಕೆಲವು ಮಂಡಳಿಗಳ ವಿರುದ್ದ ಕನ್ನೇರಿ ಮಠದ ಸ್ವಾಮಿಯವರು ಅಸಭ್ಯ ಅನಾಗರಿಕ ಭಾಷೆಯನ್ನು ಬಳಸಿ ಉಗ್ರವಾಗಿ ಮಾತನಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.
ಈ ದೇಶದ ಸರ್ವೋಚ್ಚ ನ್ಯಾಯಾಲಯದಿಂದಲೂ ಛೀಮಾರಿ ಹಾಕಿಸಿ ಕೊಂಡಿದ್ದಾರೆ.
ಕಾವಿಧಾರಿಯಾಗಿ ಎಲ್ಲ ನಾಚಿಕೆ ಹೇಸಿಕೆಗಳನ್ನು ಗಾಳಿಗೆ ತೋರಿ ಹುಚ್ಚು ಹಿಡಿದವರಂತೆ ಮಾತಾಡುತ್ತಿದ್ದಾರೆ. ಅವರ ನಡತೆಯನ್ನು ಯಾರೂ ಒಪ್ಪಲಾರರು. ಅವರು ಎಂಥವರು ಎನ್ನುವದನ್ನು ಸಮಸ್ತ ಸಮಾಜ ತಿಳಿದಿದೆ. ಆದ್ದರಿಂದ ಅವರೊಂದಿಗೆ ವಾದಕ್ಕೆ ಇಳಿಯುವುದು ವ್ಯರ್ಥ. ಅದರಿಂದ ಅವರು ಪಾಠ ಕಲಿಯುವುದು ಸಾಧ್ಯವಿಲ್ಲ.
ಅವರ ಹಿಂದೆ ಒಂದು ರಾಜಕೀಯ ಪಕ್ಷದ ನಾಯಕರಿದ್ದಾರೆ. ಅವರಿಗೆ ಬೆಂಬಲ ನೀಡುವ ಸಂಸ್ಥೆಗಳಿವೆ. ಅವರಲ್ಲಿ ಅದೇ ಪಕ್ಷದ ಕೆಲವು ಲಿಂಗಾಯತ ನಾಯಕರೂ ಇದ್ದಾರೆ. ಈ ಸ್ವಾಮಿಯನ್ನು ಬಳಸಿಕೊಂಡು, ಅವರಿಂದ ಈ ರೀತಿಯ ವೀರಾವೇಶದಲ್ಲಿ ಮಾತನಾಡಿಸಿ ಇತರರನ್ನು ಎತ್ತಿಕಟ್ಟುವ ಹುನ್ನಾರವಿದೆ.
ಉದ್ದೇಶ ಪೂರ್ವಕವಾಗಿ ಅವರು ಇತ್ತೀಚೆಗೆ ಇನ್ನೂ ಕೆಟ್ಟ ಭಾಷೆ ಬಳಸುವ ಪ್ರಯತ್ನ ಮಾಡಿ ಅರೆಸ್ಟ್ ಆಗಲು ಪ್ರಯತ್ನಿಸುತ್ತಿದ್ದಾರೆ. ಅವರನ್ನು ಜೈಲಿಗೆ ಕಳಿಸಿ ಈಗಿನ ರಾಜ್ಯ ಸರ್ಕಾರದ ವಿರುದ್ಧ ಗಲಾಟೆ ಮಾಡಿ ಹಿಂದೂಗಳನ್ನು ಎತ್ತಿಕಟ್ಟಿ ಮುಂಬರುವ ಚುನಾವಣೆಯಲ್ಲಿ ಲಾಭ ಗಳಿಸುವ ಉದ್ದೇಶ ಅದರ ಹಿಂದಿದೆ.
ಈ ಹಿನ್ನೆಲೆಯಲ್ಲಿ ತಾಳ್ಮೆ ಬಹು ಮುಖ್ಯ. ಆದರೆ ವಿಪರೀತಕ್ಕೆ ಹೋದರೆ ಸುಮ್ಮನೆ ಕೂಡಲು ಸಾಧ್ಯವಿಲ್ಲ.
ಈ ಕುರಿತು ಕೆಲವರು ಪ್ರಚೋದನಾತ್ಮ ಬರಹಗಳನ್ನು JLM ಮಲಗಿದೆ, ಸತ್ತಿದೆ ಎಂದೆಲ್ಲ ಬರೆಯುತ್ತಿರುವುದು ಕಂಡು ಬರುತ್ತದೆ. JLM ಮಲಗಿಲ್ಲ, ಯಾವ ರೀತಿ ಯಾವಾಗ ಯಾರಿಗೆ ಪ್ರತಿಕ್ರಿಯಿಸಬೇಕು ಅದನ್ನು ಮಾಡಿಯೇ ಮಾಡುತ್ತದೆ. ಮುಂದಿನ ವಾರಗಳಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮಗಳನ್ನು ಕಾಯ್ದು ನೋಡಿ.

ವಿಭೂತಿ ಹಚ್ಚಬೇಕು ಅಂತ ಯಾವ ವಚನದಲ್ಲಿ ಹೇಳಿದೆ?
ಕುಂಕುಮ ಹಚ್ಚಬಾರದು ಅಂತ ಯಾವ ವಚನದಲ್ಲಿ ಹೇಳಿದೆ?
ಅಂತ ಕೇಳುತ್ತಾರೆ. ತಮ್ಮ ಗುರುಕುಲದಲ್ಲಿ ಮಕ್ಕಳಿಗೆ ಉಪನಯನ ಮಾಡಿಸಿ ಜನಿವಾರ ಹಾಕಿಸುತ್ತಾರೆ. ಸಂಧ್ಯಾವಂದನೆ ಮಾಡಿಸುತ್ತಾರೆ.
ಇಷ್ಟಲಿಂಗ ಪೂಜೆ ಮಾಡಿಕೊಳ್ಳುವುದನ್ನು ಕಲಿಸುವುದಿಲ್ಲ.
ಅವರ ಮಠದ ಸುತ್ತಮುತ್ತ ಊರುಗಳ ಭಕ್ತರಲ್ಲಿ ಆ ಮಠದ ಸ್ಥಾಪಕರು ಬರೆದ ವಚನಗಳ ಪ್ರಚಾರ ಮಾಡಬೇಕು, ಅವರಿಂದ ಮಾಡಿಸಬೇಕು.
ಆಗ ಭಕ್ತರಿಗೆ ಲಿಂಗಾಯತ ಧರ್ಮ ಅಂದರೆ ಏನು ಅನ್ನುವುದು, ಈ ಸ್ವಾಮಿ ಮಾಡುವುದು ಏನು ? ಅಂತ ಗೊತ್ತಾಗುತ್ತದೆ..
ಪ್ರತಿಕ್ರಿಯೆ ಸಂದೇಶ
ಈ ಕುರಿತು ತೆಗೆದುಕೊಳ್ಳಲಾದ ತೀರ್ಮಾನ ಅತ್ಯಂತ ಸಮಂಜಸ ಮತ್ತು ಅಗತ್ಯವಾದದ್ದು.
ಸಮಾಜದಲ್ಲಿ ಅಶಾಂತಿ ಉಂಟುಮಾಡುವ, ಅಸಭ್ಯ ಹಾಗೂ ಪ್ರಚೋದನಾತ್ಮಕ ಭಾಷೆಯನ್ನು ಬಳಸಿ ಮಾತನಾಡುವುದು ಯಾರಿಂದಲೂ ಒಪ್ಪಲಾಗದು.
ಈ ರೀತಿಯ ಹೇಳಿಕೆಗಳು ಸಮಾಜದ ಸೌಹಾರ್ದತೆಗೆ ಧಕ್ಕೆಯಾಗಿದೆ. ಆದ್ದರಿಂದ ಇಂತಹ ವರ್ತನೆಗೆ ತಕ್ಕ ರೀತಿಯಲ್ಲಿ ಕಾನೂನುಬದ್ಧ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ.
ಇನ್ನು ಮುಂದೆ ಈ ರೀತಿಯ ಅಸಭ್ಯ ಮತ್ತು ಉದ್ರೇಕಕಾರಿ ಭಾಷಣಗಳನ್ನು ತಕ್ಷಣ ನಿಲ್ಲಿಸಬೇಕು ಎಂಬುದಾಗಿ ಕಠಿಣವಾಗಿ ಎಚ್ಚರಿಕೆ ನೀಡಬೇಕು.
ಅದನ್ನು ನಿರ್ಲಕ್ಷಿಸಿದರೆ, ಸಂಬಂಧಪಟ್ಟವರ ವಿರುದ್ಧ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವುದು ಅಗತ್ಯ.
ನಾವು ಎಲ್ಲರೂ ಶಾಂತಿ, ಸಹಿಷ್ಣುತೆ ಮತ್ತು ಸಂವಿಧಾನದ ಮೌಲ್ಯಗಳನ್ನು ಕಾಪಾಡುವ ಜವಾಬ್ದಾರಿ ಹೊಂದಿದ್ದೇವೆ.
ಆದರೆ ಅದನ್ನು ದುರುಪಯೋಗಪಡಿಸಿಕೊಂಡು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ.
ಅದೇ ರೀತಿ ಬಸವ ತತ್ವ ಸ್ವಾಮಿಗಳು, ಬಸವಾದಿ ಶರಣರುಗಳು, ಹಿಂದೂ ದೇವರುಗಳು ಅವರ ಪರಂಪರೆ ಸಂಸ್ಕೃತಿಯ ಬಗ್ಗೆ ಅವಹೇಳನಕಾರಿಯಾಗಿ ಮಾತಾಡೋದನ್ನು ಬಿಡಬೇಕು ಎಲ್ಲರಿಗೂ ಅವರ ಆಚಾರ ವಿಚಾರಗಳು ಸಂಸ್ಕೃತಿ ಮುಖ್ಯವಾಗಿರುತ್ತದೆ, ಇದೇ ರೀತಿ ಹಿಂದೂ ವಿರೋಧಿಯಾಗಿ ಬಸವವಾದಿಗಳು ಮಾತಾಡುತ್ತಿದ್ದರೆ ಮುಂದಿನ ದಿನಗಳಲ್ಲಿ ಅದರ ವಿರುದ್ಧ ಕಾನೂನು ಬದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿರುತ್ತದೆ ಇದು ಪ್ರಜಾಪ್ರಭುತ್ವ ರಾಷ್ಟ್ರ ಆಗಿರುವುದರಿಂದ ಎಲ್ಲರಿಗೂ ಸಮಾನ ಹಕ್ಕುಗಳು ಇರುತ್ತದೆ
ತಮ್ಮ ನಡೆ ಸರಿಯಾಗಿ ಇದೆ. ಧನ್ಯವಾದಗಳು ✌🏻👏🏻ಶರಣು 👏🏻
JLM ನಿಷ್ಕ್ರಿಯವಾಗಿರುವುದು ಸತ್ಯವಾದ ನೋವಿನ ಸಂಗತಿ. ಇದು ಪ್ರತಿಯೊಬ್ಬರ ಅಭಿಪ್ರಾಯ. ಜಾಮದಾರ್ ಸರ್ ಅವರು ಬೇಗ ಸರಿಯಾದ ನಾಯಕತ್ವ ರೂಪಿಸಿ ಮಾರ್ಗದರ್ಶಿಯಾಗಿ ಮುಂದುವರೆಯಬೇಕು. ಕೇಂದ್ರ ಸಮಿತಿಯಿಂದ ನಿರಂತರ ಕಾರ್ಯಕ್ರಮಗಳು, ಘಟಕಗಳ ನಿರ್ವಹಣೆ ನಡೆಯಬೇಕು. ಇವು ನನ್ನ ಪ್ರಾಮಾಣಿಕ ಹೃದಯಾಂತರಾಳದ ಅಭಿಪ್ರಾಯ.